nammatumakuru

    Subscribe to Updates

    Get the latest creative news from FooBar about art, design and business.

    What's Hot

    ಶಿವನ ಹಣೆಯ ಮಧ್ಯೆ ಮೂರನೇ ಕಣ್ಣು ಉದಯಿಸಿದ್ದೇಕೆ? ಇದರ ಹಿಂದಿದೆ ಕುತೂಹಲಕಾರಿ ಪೌರಾಣಿಕ ಕಥೆ!

    November 10, 2026

    ರೈಲು ಬೋಗಿಗಳ ಆಯಸ್ಸು ಮುಗಿದ ಬಳಿಕ ಏನಾಗುತ್ತೆ? ರೈಲ್ವೆಯ ಈ ಮರುಬಳಕೆ ತಂತ್ರ ಗೊತ್ತೇ?

    November 10, 2026

    ದೀಪಾವಳಿಯ ಪಾಡ್ಯ ಪೂಜೆಯ ವಿಶೇಷವೇನು? ಬಲಿ ಚಕ್ರವರ್ತಿಯ ಆರಾಧನೆಯ ಹಿಂದಿದೆ ಪೌರಾಣಿಕ ಕಥೆ!

    November 10, 2026
    Facebook Twitter Instagram
    ಟ್ರೆಂಡಿಂಗ್
    • ಶಿವನ ಹಣೆಯ ಮಧ್ಯೆ ಮೂರನೇ ಕಣ್ಣು ಉದಯಿಸಿದ್ದೇಕೆ? ಇದರ ಹಿಂದಿದೆ ಕುತೂಹಲಕಾರಿ ಪೌರಾಣಿಕ ಕಥೆ!
    • ರೈಲು ಬೋಗಿಗಳ ಆಯಸ್ಸು ಮುಗಿದ ಬಳಿಕ ಏನಾಗುತ್ತೆ? ರೈಲ್ವೆಯ ಈ ಮರುಬಳಕೆ ತಂತ್ರ ಗೊತ್ತೇ?
    • ದೀಪಾವಳಿಯ ಪಾಡ್ಯ ಪೂಜೆಯ ವಿಶೇಷವೇನು? ಬಲಿ ಚಕ್ರವರ್ತಿಯ ಆರಾಧನೆಯ ಹಿಂದಿದೆ ಪೌರಾಣಿಕ ಕಥೆ!
    • ದೀಪಾವಳಿ ಸಂಭ್ರಮದಲ್ಲಿ ದುರಂತ: ಬೆಂಗಳೂರಿನಲ್ಲಿ ಪಟಾಕಿ ಅವಘಡಕ್ಕೆ ಸಿಲುಕಿ 100ಕ್ಕೂ ಹೆಚ್ಚು ಮಂದಿಗೆ ಕಣ್ಣಿನ ಗಾಯ!
    • ನಂದಿನಿ ಹಾಲಿನ ಪ್ಯಾಕೆಟ್ ‌ನಲ್ಲಿ ಸತ್ತ ಜೇಡ ಪತ್ತೆ: ಮಹಿಳೆಯಿಂದ ಕೆಎಂಎಫ್​​ ಗೆ ದೂರು
    • ರಾಮ—ರಾವಣರ ಅಬ್ಬರಕ್ಕೆ ಬಾಕ್ಸ್‌ ಆಫೀಸ್ ಉಡೀಸ್: 5ನೇ ದಿನದಲ್ಲೇ ಸಾರ್ವಕಾಲಿಕ ದಾಖಲೆ!
    • ಹಾಸನ: ಲಂಚದ ಆರೋಪ ಪ್ರಕರಣ: ದೂರು ನೀಡಿದ ಜಿಲ್ಲಾಧಿಕಾರಿ ಪಿಎ
    • ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಆರೋಪ: ಸೈಬರ್ ಕ್ರೈಂ ಪೊಲೀಸರ ಮುಂದೆ ಕೃಪಾ ಆಳ್ವಾ ಹಾಜರು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಗ್ರಾಮ ಪಂಚಾಯತಿ ಚುನಾವಣೆ : ಇಂದು ಅಧಿಸೂಚನೆ
    ಜಿಲ್ಲಾ ಸುದ್ದಿ November 6, 2024

    ಗ್ರಾಮ ಪಂಚಾಯತಿ ಚುನಾವಣೆ : ಇಂದು ಅಧಿಸೂಚನೆ

    By adminNovember 6, 2024No Comments2 Mins Read
    grama panchayathna

    ತುಮಕೂರು:  ಜಿಲ್ಲೆಯ 9 ತಾಲ್ಲೂಕಿನ 27 ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ 30 ಸದಸ್ಯ ಸ್ಥಾನಗಳಿಗೆ ನವೆಂಬರ್ 23ರಂದು ಚುನಾವಣೆ ನಡೆಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ಅವರು ನವೆಂಬರ್ 6ರಂದು ಅಧಿಸೂಚನೆ ಹೊರಡಿಸಲಿದ್ದಾರೆ.

    ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗವು ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ವೇಳಾಪಟ್ಟಿಯನ್ವಯ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳು ನವೆಂಬರ್ 12ರೊಳಗಾಗಿ ನಾಮಪತ್ರ ಸಲ್ಲಿಸತಕ್ಕದ್ದು. ನಾಮಪತ್ರಗಳ ಪರಿಶೀಲನೆಯನ್ನು ನವೆಂಬರ್ 13ರಂದು ನಡೆಸಲಾಗುವುದು. ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊಳ್ಳಲು ನವೆಂಬರ್ 15ರವರೆಗೂ ಅವಕಾಶವಿದ್ದು, ನವೆಂಬರ್ 23ರಂದು(ಮತದಾನದ ಅವಶ್ಯವಿದ್ದರೆ) ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಮರು ಮತದಾನದ ಅವಶ್ಯವಿದ್ದರೆ ನವೆಂಬರ್ 25ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುವುದು. ನಂತರ ನವೆಂಬರ್ 26ರಂದು ಬೆಳಿಗ್ಗೆ 8 ಗಂಟೆಯಿAದ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.

    ಜಿಲ್ಲೆಯ ಚಿಕ್ಕನಾಯಕಹಳ್ಳಿ ತಾಲ್ಲೂಕು ದೊಡ್ಡ ಎಣ್ಣೇಗೆರೆ ಹಾಗೂ ಚೌಳಕಟ್ಟೆ; ತಿಪಟೂರು ತಾಲ್ಲೂಕು ಹುಚ್ಚಗೊಂಡನಹಳ್ಳಿ ಹಾಗೂ ಮಸವನಘಟ್ಟ; ತುರುವೇಕೆರೆ ತಾಲ್ಲೂಕು ಆನೆಕೆರೆ(3 ಸದಸ್ಯ ಸ್ಥಾನ), ಕೊಂಡಜ್ಜಿ, ಶೆಟ್ಟಿಗೊಂಡನಹಳ್ಳಿ; ಕುಣಿಗಲ್ ತಾಲ್ಲೂಕು ಉಜ್ಜನಿ ಹಾಗೂ ಅಮೃತೂರು; ತುಮಕೂರು ತಾಲ್ಲೂಕು ಸ್ವಾಂದೇನಹಳ್ಳಿ ಹಾಗೂ ಹಿರೇಹಳ್ಳಿ(2 ಸದಸ್ಯ ಸ್ಥಾನ); ಮಧುಗಿರಿ ತಾಲ್ಲೂಕು ಕೊಡಿಗೇನಹಳ್ಳಿ ಹಾಗೂ ರಂಗಾಪುರ; ಗುಬ್ಬಿ ತಾಲ್ಲೂಕು ಮೂಗನಾಯಕನಕೋಟೆ, ಎಸ್.ಕೊಡಗೀಹಳ್ಳಿ, ಪೆದ್ದನಹಳ್ಳಿ, ಶಿವಪುರ, ಅಡಗೂರು ಹಾಗೂ ಜಿ.ಹೊಸಹಳ್ಳಿ; ಶಿರಾ ತಾಲ್ಲೂಕು ಲಕ್ಷ್ಮೀಸಾಗರ ಹಾಗೂ ದೊಡ್ಡ ಅಗ್ರಹಾರ; ಪಾವಗಡ ತಾಲ್ಲೂಕು ತಿರುಮಣಿ, ಬ್ಯಾಡನೂರು, ಕಾಮನದುರ್ಗ(ನೀಲಮ್ಮನಹಳ್ಳಿ), ವದನಕಲ್ಲು, ರಂಗಸಮುದ್ರ ಹಾಗೂ ಕೊಡಮಡಗು ಗ್ರಾಮ ಪಂಚಾಯತಿಗಳಲ್ಲಿ ನವೆಂಬರ್ 23ರಂದು ಚುನಾವಣೆ ನಡೆಯಲಿದೆ.

    ಚುನಾವಣೆಯನ್ನು ಶಾಂತಿ ಹಾಗೂ ಸುವ್ಯವಸ್ಥೆಯಿಂದ ನಡೆಸುವ ನಿಟ್ಟಿನಲ್ಲಿ ಚುನಾವಣೆ ನಡೆಯುವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನವೆಂಬರ್ 6 ರಿಂದ 26ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಈ ನೀತಿ ಸಂಹಿತೆಯು ಬರ ಕಾಮಗಾರಿ, ಪ್ರವಾಹ ಇತ್ಯಾದಿ ಪ್ರಕೃತಿ ವಿಕೋಪ ಕಾರ್ಯಕ್ರಮಗಳಿಗೆ ಅನ್ವಯಿಸುವುದಿಲ್ಲ. ಗ್ರಾಮ ಪಂಚಾಯತಿ ಚುನಾವಣೆಗೆ ‘NOTA’ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

    admin
    • Website

    Related Posts

    ಬರದ ಸಂಕಷ್ಟದಲ್ಲಿ ಬಡವರ ಕೈಹಿಡಿದ ‘ವಿಬಿ-ಜಿ ರಾಮ್ ಜಿ’ ಯೋಜನೆ: ಗುಳೆ ತಪ್ಪಿಸಿ ಸ್ವಗ್ರಾಮದಲ್ಲೇ ಉದ್ಯೋಗ ಕಲ್ಪಿಸಿದ ಆಸರೆ

    November 8, 2026

    ಸೋನಾಳ ಗ್ರಾ.ಪಂ. ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ: ವಿಬಿ–ಜಿ ರಾಮ್ ಜಿ ಯೋಜನೆಯ ಸೌಲಭ್ಯ ಪ್ರತಿಯೊಬ್ಬರಿಗೂ ಮುಟ್ಟಲಿ: ಸೂರ್ಯಕಾಂತ ಎಕಲಾರ

    November 7, 2026

    ಹೊಲದಲ್ಲಿ ಬೆಳೆದಿದ್ದ ₹9.5 ಲಕ್ಷ ಮೌಲ್ಯದ ಗಾಂಜಾ ಗಿಡ ಜಪ್ತಿ: ಇಬ್ಬರು ಆರೋಪಿಗಳ ಬಂಧನ

    November 6, 2026

    Comments are closed.

    Our Picks

    ರೈಲು ಬೋಗಿಗಳ ಆಯಸ್ಸು ಮುಗಿದ ಬಳಿಕ ಏನಾಗುತ್ತೆ? ರೈಲ್ವೆಯ ಈ ಮರುಬಳಕೆ ತಂತ್ರ ಗೊತ್ತೇ?

    November 10, 2026

    ತಿನ್ನಬಹುದಾದ ಚಿನ್ನದ ಸಿಹಿ ತಯಾರಿ; ಜೈಪುರದ ಮಿಠಾಯಿ ಈಗ ಭಾರಿ ಚರ್ಚೆ! ಇದರ ಬೆಲೆ ಎಷ್ಟು ಗೊತ್ತೆ ?

    November 9, 2026

    ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ: ನವೆಂಬರ್ ಈ ದಿನಗಳು ಬ್ಯಾಂಕ್ ರಜೆ!

    November 8, 2026

    ವಾಯು ಮಾಲಿನ್ಯದಿಂದ ಜಿಡಿಪಿಗೂ ಭಾರಿ ಹೊಡೆತ; ನಿಯಂತ್ರಣಕ್ಕೆ ಎಫ್‌ ಐಸಿಸಿಐನಿಂದ 10 ಸೂತ್ರಗಳ ಶಿಫಾರಸು ಇಲ್ಲಿದೆ!

    November 8, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಲೇಖನ

    ಶಿವನ ಹಣೆಯ ಮಧ್ಯೆ ಮೂರನೇ ಕಣ್ಣು ಉದಯಿಸಿದ್ದೇಕೆ? ಇದರ ಹಿಂದಿದೆ ಕುತೂಹಲಕಾರಿ ಪೌರಾಣಿಕ ಕಥೆ!

    November 10, 2026

    ಹಿಂದೂ ಧರ್ಮದಲ್ಲಿ ಶಿವನನ್ನು ತ್ರಿನೇತ್ರ, ತ್ರಿಲೋಚನ ಹಾಗೂ ಮೂರನೇ ಕಣ್ಣಿನ ದೇವರು ಎಂದು ಕರೆಯಲಾಗುತ್ತದೆ. ಶಿವನ ಎರಡು ಕಣ್ಣುಗಳ ನಡುವೆ…

    ರೈಲು ಬೋಗಿಗಳ ಆಯಸ್ಸು ಮುಗಿದ ಬಳಿಕ ಏನಾಗುತ್ತೆ? ರೈಲ್ವೆಯ ಈ ಮರುಬಳಕೆ ತಂತ್ರ ಗೊತ್ತೇ?

    November 10, 2026

    ದೀಪಾವಳಿಯ ಪಾಡ್ಯ ಪೂಜೆಯ ವಿಶೇಷವೇನು? ಬಲಿ ಚಕ್ರವರ್ತಿಯ ಆರಾಧನೆಯ ಹಿಂದಿದೆ ಪೌರಾಣಿಕ ಕಥೆ!

    November 10, 2026

    ದೀಪಾವಳಿ ಸಂಭ್ರಮದಲ್ಲಿ ದುರಂತ: ಬೆಂಗಳೂರಿನಲ್ಲಿ ಪಟಾಕಿ ಅವಘಡಕ್ಕೆ ಸಿಲುಕಿ 100ಕ್ಕೂ ಹೆಚ್ಚು ಮಂದಿಗೆ ಕಣ್ಣಿನ ಗಾಯ!

    November 10, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.