nammatumakuru

    Subscribe to Updates

    Get the latest creative news from FooBar about art, design and business.

    What's Hot

    ದೀಪಾವಳಿ ಸಂಭ್ರಮದಲ್ಲಿ ದುರಂತ: ಬೆಂಗಳೂರಿನಲ್ಲಿ ಪಟಾಕಿ ಅವಘಡಕ್ಕೆ ಸಿಲುಕಿ 100ಕ್ಕೂ ಹೆಚ್ಚು ಮಂದಿಗೆ ಕಣ್ಣಿನ ಗಾಯ!

    November 10, 2026

    ನಂದಿನಿ ಹಾಲಿನ ಪ್ಯಾಕೆಟ್ ‌ನಲ್ಲಿ ಸತ್ತ ಜೇಡ ಪತ್ತೆ: ಮಹಿಳೆಯಿಂದ ಕೆಎಂಎಫ್​​ ಗೆ ದೂರು

    November 10, 2026

    ರಾಮ—ರಾವಣರ ಅಬ್ಬರಕ್ಕೆ ಬಾಕ್ಸ್‌ ಆಫೀಸ್ ಉಡೀಸ್: 5ನೇ ದಿನದಲ್ಲೇ ಸಾರ್ವಕಾಲಿಕ ದಾಖಲೆ!

    November 10, 2026
    Facebook Twitter Instagram
    ಟ್ರೆಂಡಿಂಗ್
    • ದೀಪಾವಳಿ ಸಂಭ್ರಮದಲ್ಲಿ ದುರಂತ: ಬೆಂಗಳೂರಿನಲ್ಲಿ ಪಟಾಕಿ ಅವಘಡಕ್ಕೆ ಸಿಲುಕಿ 100ಕ್ಕೂ ಹೆಚ್ಚು ಮಂದಿಗೆ ಕಣ್ಣಿನ ಗಾಯ!
    • ನಂದಿನಿ ಹಾಲಿನ ಪ್ಯಾಕೆಟ್ ‌ನಲ್ಲಿ ಸತ್ತ ಜೇಡ ಪತ್ತೆ: ಮಹಿಳೆಯಿಂದ ಕೆಎಂಎಫ್​​ ಗೆ ದೂರು
    • ರಾಮ—ರಾವಣರ ಅಬ್ಬರಕ್ಕೆ ಬಾಕ್ಸ್‌ ಆಫೀಸ್ ಉಡೀಸ್: 5ನೇ ದಿನದಲ್ಲೇ ಸಾರ್ವಕಾಲಿಕ ದಾಖಲೆ!
    • ಹಾಸನ: ಲಂಚದ ಆರೋಪ ಪ್ರಕರಣ: ದೂರು ನೀಡಿದ ಜಿಲ್ಲಾಧಿಕಾರಿ ಪಿಎ
    • ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಆರೋಪ: ಸೈಬರ್ ಕ್ರೈಂ ಪೊಲೀಸರ ಮುಂದೆ ಕೃಪಾ ಆಳ್ವಾ ಹಾಜರು
    • ಪಟಾಕಿ ಸದ್ದಿಗೆ ಬೆಚ್ಚಿಬಿದ್ದು 14 ಅಂತಸ್ತಿನ ಕಟ್ಟಡದಿಂದ ಜಿಗಿದ ಬೀದಿ ನಾಯಿ ಸಾವು!
    • ಕೇಂದ್ರ ಸಚಿವ ಕುಮಾರಸ್ವಾಮಿ ಒಬ್ಬ ಬೇಜವಾಬ್ದಾರಿಯ ಕೇಂದ್ರ ಸಚಿವ: ಸಚಿವ ಶಿವಲಿಂಗೇಗೌಡ ಕಿಡಿ
    • ಮೈಸೂರು ಅರಮನೆ ವಶಕ್ಕೆ  ಕಾರ್ಯಾಂಗ ದುರ್ಬಳಕೆ: ಸಂಸದ ಯದುವೀರ್ ಒಡೆಯರ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ದೀಪಾವಳಿ ಸಂಭ್ರಮದಲ್ಲಿ ದುರಂತ: ಬೆಂಗಳೂರಿನಲ್ಲಿ ಪಟಾಕಿ ಅವಘಡಕ್ಕೆ ಸಿಲುಕಿ 100ಕ್ಕೂ ಹೆಚ್ಚು ಮಂದಿಗೆ ಕಣ್ಣಿನ ಗಾಯ!
    ರಾಜ್ಯ ಸುದ್ದಿ November 10, 2026

    ದೀಪಾವಳಿ ಸಂಭ್ರಮದಲ್ಲಿ ದುರಂತ: ಬೆಂಗಳೂರಿನಲ್ಲಿ ಪಟಾಕಿ ಅವಘಡಕ್ಕೆ ಸಿಲುಕಿ 100ಕ್ಕೂ ಹೆಚ್ಚು ಮಂದಿಗೆ ಕಣ್ಣಿನ ಗಾಯ!

    By adminNovember 10, 2026No Comments2 Mins Read
    fireworks deepavali

    ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮ ಹಾಗೂ ಮೋಜು–ಮಸ್ತಿನ ನಡುವೆ ಪಟಾಕಿ ಸಿಡಿಸುವಾಗ ಸಂಭವಿಸಿದ ಅನಾಹುತಗಳು ಸಿಲಿಕಾನ್‌ ಸಿಟಿಯಲ್ಲಿ ಆತಂಕ ಮೂಡಿಸಿವೆ. ಪಟಾಕಿ ಸಿಡಿಮದ್ದಿನ ಕಿಡಿ ಕಣ್ಣಿಗೆ ತಾಕಿ ಗಾಯಗೊಂಡ 100ಕ್ಕೂ ಅಧಿಕ ಮಂದಿ ನಗರದ ವಿವಿಧ ಹೆಸರಾಂತ ಕಣ್ಣಿನ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

    ಗಾಯಾಳುಗಳಲ್ಲಿ ಹಸುಗೂಸುಗಳು ಹಾಗೂ ಅತಿಚಿಕ್ಕ ವಯಸ್ಸಿನ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಪೋಷಕರಲ್ಲಿ ತೀವ್ರ ಕಳವಳ ಮೂಡಿಸಿದೆ. ಕೆಲವರ ಕಣ್ಣಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವೂ ಎದುರಾಗಿದೆ. ವಿಶೇಷವೆಂದರೆ, ಪಟಾಕಿ ಸಿಡಿಸಿದವರಷ್ಟೇ ಅಲ್ಲದೆ, ಅಕ್ಕಪಕ್ಕದಲ್ಲಿ ನಿಂತು ಸಂಭ್ರಮ ನೋಡುತ್ತಿದ್ದ ನಿರಪರಾಧಿಗಳೂ ಸಹ ಗಾಯಗೊಂಡಿರುವುದು ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

    ನಾರಾಯಣ ನೇತ್ರಾಲಯ (ಒಟ್ಟು 70 ಪ್ರಕರಣಗಳು):

    ನಗರದ ರಾಜಾಜಿನಗರದಲ್ಲಿರುವ ನಾರಾಯಣ ನೇತ್ರಾಲಯದ ಕೇಂದ್ರವೊಂದರಲ್ಲೇ ಬರೋಬ್ಬರಿ 41 ಕಣ್ಣಿನ ಗಾಯದ ಪ್ರಕರಣಗಳು ವರದಿಯಾಗಿವೆ. ಇನ್ನುಳಿದಂತೆ ಬೊಮ್ಮಸಂದ್ರ, ಬನ್ನೇರುಘಟ್ಟ ರಸ್ತೆ ಮತ್ತು ವೈಟ್‌ಫೀಲ್ಡ್ ಕೇಂದ್ರಗಳಲ್ಲಿ ಒಟ್ಟು 29 ಪ್ರಕರಣಗಳು ದಾಖಲಾಗಿವೆ. ರಾಜಾಜಿನಗರ ಕೇಂದ್ರದಲ್ಲಿ ಗಾಯಗೊಂಡ 41 ಮಂದಿಯಲ್ಲಿ 24 ಮಂದಿ 18 ವರ್ಷದೊಳಗಿನ ಅಪ್ರಾಪ್ತ ಮಕ್ಕಳು ಎಂಬುದು ಆಘಾತಕಾರಿ ಸಂಗತಿ. ಇವರಲ್ಲಿ 29 ಮಂದಿ ಸ್ವತಃ ತಾವೇ ಪಟಾಕಿ ಸಿಡಿಸುವಾಗ ಗಾಯಗೊಂಡಿದ್ದರೆ, 12 ಮಂದಿ ಪಕ್ಕದಲ್ಲಿ ನಿಂತು ವೀಕ್ಷಿಸುತ್ತಿದ್ದಾಗ ಗಾಯಗೊಂಡಿದ್ದಾರೆ. ಈ ಪೈಕಿ 40 ಮಂದಿಗೆ ಹೊರರೋಗಿಯಾಗಿ ಔಷಧೋಪಚಾರ ನೀಡಲಾಗಿದ್ದು, ಒಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

    ಮಿಂಟೋ ನೇತ್ರ ಆಸ್ಪತ್ರೆ (14 ಪ್ರಕರಣಗಳು):

    ಪ್ರಸಿದ್ಧ ಮಿಂಟೋ ಆಸ್ಪತ್ರೆಯಲ್ಲಿ ಒಟ್ಟು 14 ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ಬಲ್ಬ್ ಪಟಾಕಿ ಹಾಗೂ ಇತರೆ ಸ್ಪೋಟಕಗಳಿಂದ 10 ಮಂದಿಗೆ ಗಂಭೀರ ಗಾಯಗಳಾಗಿವೆ. ನಾಲ್ವರಿಗೆ ಸಾಮಾನ್ಯ ಗಾಯಗಳಾಗಿದ್ದು, ಒಟ್ಟು ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಇಬ್ಬರಿಗೆ ಕಣ್ಣಿನ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಶಂಕರ ಕಣ್ಣಿನ ಆಸ್ಪತ್ರೆ (26 ಪ್ರಕರಣಗಳು):

    ಈ ಆಸ್ಪತ್ರೆಯಲ್ಲಿ ಒಟ್ಟು 26 ಪ್ರಕರಣಗಳು ದಾಖಲಾಗಿವೆ. ಗಾಯಾಳುಗಳ ಪಟ್ಟಿಯಲ್ಲಿ ಕೇವಲ ಮೂರು ತಿಂಗಳ ಹಸುಗೂಸಿನಿಂದ ಹಿಡಿದು 46 ವರ್ಷದ ವಯಸ್ಕರವರೆಗೂ ಇದ್ದಾರೆ. ಕೇವಲ ಐದು ತಿಂಗಳ ಮಗುವಿಗೆ ಪಟಾಕಿಯ ಕಿಡಿ ತಾಗಿ ಗಾಯವಾಗಿರುವ ದಾರುಣ ಘಟನೆಯೂ ವರದಿಯಾಗಿದೆ.

    ದೀಪಾವಳಿಯಂತಹ ಹಬ್ಬಗಳು ಸಂತೋಷ ತರಬೇಕೆಂಬುದರ ಬದಲು ಎಚ್ಚರಿಕೆ ವಹಿಸದಿದ್ದರೆ ಎಂಥಹುದೊಂದು ದುರಂತಕ್ಕೆ ದಾರಿ ಮಾಡಿಕೊಡುತ್ತವೆ ಎಂಬುದಕ್ಕೆ ಈ ಘಟನೆಗಳು ಸಾಕ್ಷಿಯಾಗಿವೆ. ಪಟಾಕಿ ಸಿಡಿಸುವಾಗ ಸಣ್ಣ ನಿರ್ಲಕ್ಷ್ಯವೂ ಜೀವಮಾನದ ದೃಷ್ಟಿಯನ್ನೇ ಕಸಿದುಕೊಳ್ಳಬಹುದು ಎಂಬುದನ್ನು ಈ ಕಣ್ಣ ತೆರೆಸುವ ಅಂಕಿ-ಅಂಶಗಳು ತೋರಿಸಿಕೊಟ್ಟಿವೆ. ಮುಂದಿನ ದಿನಗಳಲ್ಲಾದರೂ ಪೋಷಕರು ಮಕ್ಕಳ ಸುರಕ್ಷತೆಯ ಬಗ್ಗೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಾದ ತುರ್ತು ಅವಶ್ಯಕತೆಯಿದೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    admin
    • Website

    Related Posts

    ನಂದಿನಿ ಹಾಲಿನ ಪ್ಯಾಕೆಟ್ ‌ನಲ್ಲಿ ಸತ್ತ ಜೇಡ ಪತ್ತೆ: ಮಹಿಳೆಯಿಂದ ಕೆಎಂಎಫ್​​ ಗೆ ದೂರು

    November 10, 2026

    ಹಾಸನ: ಲಂಚದ ಆರೋಪ ಪ್ರಕರಣ: ದೂರು ನೀಡಿದ ಜಿಲ್ಲಾಧಿಕಾರಿ ಪಿಎ

    November 9, 2026

    ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಆರೋಪ: ಸೈಬರ್ ಕ್ರೈಂ ಪೊಲೀಸರ ಮುಂದೆ ಕೃಪಾ ಆಳ್ವಾ ಹಾಜರು

    November 9, 2026

    Leave A Reply Cancel Reply

    Our Picks

    ತಿನ್ನಬಹುದಾದ ಚಿನ್ನದ ಸಿಹಿ ತಯಾರಿ; ಜೈಪುರದ ಮಿಠಾಯಿ ಈಗ ಭಾರಿ ಚರ್ಚೆ! ಇದರ ಬೆಲೆ ಎಷ್ಟು ಗೊತ್ತೆ ?

    November 9, 2026

    ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ: ನವೆಂಬರ್ ಈ ದಿನಗಳು ಬ್ಯಾಂಕ್ ರಜೆ!

    November 8, 2026

    ವಾಯು ಮಾಲಿನ್ಯದಿಂದ ಜಿಡಿಪಿಗೂ ಭಾರಿ ಹೊಡೆತ; ನಿಯಂತ್ರಣಕ್ಕೆ ಎಫ್‌ ಐಸಿಸಿಐನಿಂದ 10 ಸೂತ್ರಗಳ ಶಿಫಾರಸು ಇಲ್ಲಿದೆ!

    November 8, 2026

    ಜಿಯೋ ಗ್ರಾಹಕರಿಗೆ ಸಿಹಿಸುದ್ದಿ; ಉಚಿತವಾಗಿ 5 ತಿಂಗಳ ವೈ–ಫೈ, ಒಟಿಟಿ ಸೇವೆ ಪಡೆಯುವುದು ಹೇಗೆ?

    November 7, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ದೀಪಾವಳಿ ಸಂಭ್ರಮದಲ್ಲಿ ದುರಂತ: ಬೆಂಗಳೂರಿನಲ್ಲಿ ಪಟಾಕಿ ಅವಘಡಕ್ಕೆ ಸಿಲುಕಿ 100ಕ್ಕೂ ಹೆಚ್ಚು ಮಂದಿಗೆ ಕಣ್ಣಿನ ಗಾಯ!

    November 10, 2026

    ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮ ಹಾಗೂ ಮೋಜು–ಮಸ್ತಿನ ನಡುವೆ ಪಟಾಕಿ ಸಿಡಿಸುವಾಗ ಸಂಭವಿಸಿದ ಅನಾಹುತಗಳು ಸಿಲಿಕಾನ್‌ ಸಿಟಿಯಲ್ಲಿ ಆತಂಕ ಮೂಡಿಸಿವೆ.…

    ನಂದಿನಿ ಹಾಲಿನ ಪ್ಯಾಕೆಟ್ ‌ನಲ್ಲಿ ಸತ್ತ ಜೇಡ ಪತ್ತೆ: ಮಹಿಳೆಯಿಂದ ಕೆಎಂಎಫ್​​ ಗೆ ದೂರು

    November 10, 2026

    ರಾಮ—ರಾವಣರ ಅಬ್ಬರಕ್ಕೆ ಬಾಕ್ಸ್‌ ಆಫೀಸ್ ಉಡೀಸ್: 5ನೇ ದಿನದಲ್ಲೇ ಸಾರ್ವಕಾಲಿಕ ದಾಖಲೆ!

    November 10, 2026

    ಹಾಸನ: ಲಂಚದ ಆರೋಪ ಪ್ರಕರಣ: ದೂರು ನೀಡಿದ ಜಿಲ್ಲಾಧಿಕಾರಿ ಪಿಎ

    November 9, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.