nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಆರೋಪ: ಸೈಬರ್ ಕ್ರೈಂ ಪೊಲೀಸರ ಮುಂದೆ ಕೃಪಾ ಆಳ್ವಾ ಹಾಜರು

    November 9, 2026

    ಪಟಾಕಿ ಸದ್ದಿಗೆ ಬೆಚ್ಚಿಬಿದ್ದು 14 ಅಂತಸ್ತಿನ ಕಟ್ಟಡದಿಂದ ಜಿಗಿದ ಬೀದಿ ನಾಯಿ ಸಾವು!

    November 9, 2026

    ಕೇಂದ್ರ ಸಚಿವ ಕುಮಾರಸ್ವಾಮಿ ಒಬ್ಬ ಬೇಜವಾಬ್ದಾರಿಯ ಕೇಂದ್ರ ಸಚಿವ: ಸಚಿವ ಶಿವಲಿಂಗೇಗೌಡ ಕಿಡಿ

    November 9, 2026
    Facebook Twitter Instagram
    ಟ್ರೆಂಡಿಂಗ್
    • ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಆರೋಪ: ಸೈಬರ್ ಕ್ರೈಂ ಪೊಲೀಸರ ಮುಂದೆ ಕೃಪಾ ಆಳ್ವಾ ಹಾಜರು
    • ಪಟಾಕಿ ಸದ್ದಿಗೆ ಬೆಚ್ಚಿಬಿದ್ದು 14 ಅಂತಸ್ತಿನ ಕಟ್ಟಡದಿಂದ ಜಿಗಿದ ಬೀದಿ ನಾಯಿ ಸಾವು!
    • ಕೇಂದ್ರ ಸಚಿವ ಕುಮಾರಸ್ವಾಮಿ ಒಬ್ಬ ಬೇಜವಾಬ್ದಾರಿಯ ಕೇಂದ್ರ ಸಚಿವ: ಸಚಿವ ಶಿವಲಿಂಗೇಗೌಡ ಕಿಡಿ
    • ಮೈಸೂರು ಅರಮನೆ ವಶಕ್ಕೆ  ಕಾರ್ಯಾಂಗ ದುರ್ಬಳಕೆ: ಸಂಸದ ಯದುವೀರ್ ಒಡೆಯರ್
    • ಯೋಜನೆಗಳು ಉಚಿತವಾದರೆ, ಅಗತ್ಯ ವಸ್ತುಗಳ ದರ ಹೆಚ್ಚುವುದು ಸಹಜ: ಬೆಲೆ ಏರಿಕೆಗೆ ಹೈಕೋರ್ಟ್ ಹೇಳಿದ್ದೇನು?
    • ಸೀತಾಪಹರಣಕ್ಕೆ ರಾವಣ ಸ್ಕೆಚ್ ಹಾಕಿರೋದು ಪತ್ನಿ ಮಂಡೋದರಿಗೆ ತಿಳಿದಿತ್ತೇ?: ಆಕೆ ನೀಡಿದ್ದ ಎಚ್ಚರಿಕೆ ಏನು?
    • ತಿನ್ನಬಹುದಾದ ಚಿನ್ನದ ಸಿಹಿ ತಯಾರಿ; ಜೈಪುರದ ಮಿಠಾಯಿ ಈಗ ಭಾರಿ ಚರ್ಚೆ! ಇದರ ಬೆಲೆ ಎಷ್ಟು ಗೊತ್ತೆ ?
    • ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ: ನವೆಂಬರ್ ಈ ದಿನಗಳು ಬ್ಯಾಂಕ್ ರಜೆ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಪಟಾಕಿ ಸದ್ದಿಗೆ ಬೆಚ್ಚಿಬಿದ್ದು 14 ಅಂತಸ್ತಿನ ಕಟ್ಟಡದಿಂದ ಜಿಗಿದ ಬೀದಿ ನಾಯಿ ಸಾವು!
    ರಾಜ್ಯ ಸುದ್ದಿ November 9, 2026

    ಪಟಾಕಿ ಸದ್ದಿಗೆ ಬೆಚ್ಚಿಬಿದ್ದು 14 ಅಂತಸ್ತಿನ ಕಟ್ಟಡದಿಂದ ಜಿಗಿದ ಬೀದಿ ನಾಯಿ ಸಾವು!

    By adminNovember 9, 2026No Comments2 Mins Read
    crackers

    ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸದ್ದಿಗೆ ಬೆದರಿ ಬೀದಿ ನಾಯಿಯೊಂದು 14 ಅಂತಸ್ತಿನ ಕಟ್ಟಡದಿಂದ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಗರದ ಕನ್ನಮಂಗಲದಲ್ಲಿ ವರದಿಯಾಗಿದೆ.

    ಕನ್ನಮಂಗಲದ ನಿರ್ಮಾಣ ಹಂತದಲ್ಲಿರುವ 14 ಅಂತಸ್ತಿನ ಕಟ್ಟಡವೊಂದರಲ್ಲಿ ಹೆಣ್ಣು ನಾಯಿಯೊಂದು ಆಶ್ರಯ ಪಡೆದಿತ್ತು. ಅಲ್ಲಿನ ಭದ್ರತಾ ಸಿಬ್ಬಂದಿಯ ನೆರವಿನಿಂದ ಪ್ರಾಣಿಪ್ರಿಯರು ಆ ನಾಯಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಎರಡು ತಿಂಗಳ ಹಿಂದಷ್ಟೇ ನಾಯಿಗೆ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ಕೂಡ ಮಾಡಿಸಲಾಗಿತ್ತು.

    ಆದರೆ, ದೀಪಾವಳಿ ಹಬ್ಬದ ರಾತ್ರಿ ಸಿಡಿಸಿದ ಭಾರೀ ಶಬ್ದದ ಪಟಾಕಿಗಳಿಗೆ ನಾಯಿ ತೀವ್ರವಾಗಿ ಬೆಚ್ಚಿಬಿದ್ದಿದೆ. ನಿದ್ರೆಯಲ್ಲಿದ್ದಾಗಲೇ ಅತಿಯಾದ ಶಬ್ದದಿಂದ ಗಾಬಗೊಂಡು ನಾಯಿ ಕಟ್ಟಡದ ಮೇಲಿನಿಂದ ಜಿಗಿದಿರಬಹುದು ಎಂದು ಶಂಕಿಸಲಾಗಿದ್ದು, ಶನಿವಾರ ಬೆಳಗ್ಗೆ ಅದರ ಮೃತದೇಹ ಪತ್ತೆಯಾಗಿದೆ. “ನಾಯಿ ಇಷ್ಟು ದಿನ ಯಾವುದೇ ತೊಂದರೆಯಿಲ್ಲದೆ ಸುರಕ್ಷಿತವಾಗಿ ವಾಸಿಸುತ್ತಿತ್ತು, ಆದರೆ ಪಟಾಕಿಗಳ ಸದ್ದು ಈ ದುರಂತಕ್ಕೆ ಕಾರಣವಾಯಿತು” ಎಂದು ಸ್ಥಳೀಯ ಪ್ರಾಣಿಪ್ರಿಯರು ಅಳಲು ತೋಡಿಕೊಂಡಿದ್ದಾರೆ.

    ಇದೇ ಪ್ರದೇಶದಲ್ಲಿ ಮತ್ತೊಂದು ಸಾಕು ನಾಯಿಯೂ ಕೂಡ ಪಟಾಕಿ ಸದ್ದಿಗೆ ಬೆದರಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ಕುಟುಂಬವೊಂದು ತಮ್ಮ ಸಾಕು ನಾಯಿಯನ್ನು ವಾಯುವಿಹಾರಕ್ಕೆ ಕರೆದೊಯ್ದಿದ್ದ ವೇಳೆ ಏಕಾಏಕಿ ಪಟಾಕಿ ಸಿಡಿಸಲಾಗಿದೆ. ಭಾರೀ ಶಬ್ದಕ್ಕೆ ಹೆದರಿದ ನಾಯಿ, ಕೈಯಲ್ಲಿದ್ದ ಹಗ್ಗ ಕಳಚಿಕೊಂಡು ಓಡಿಹೋಗಿದ್ದು, ಕುಟುಂಬದವರು ತೀವ್ರ ಆತಂಕ ಹಾಗೂ ದುಃಖದಲ್ಲಿದ್ದಾರೆ.

    ಮನುಷ್ಯರಿಗಿಂತ ನಾಯಿಗಳಿಗೆ ಶಬ್ದವನ್ನು ಗ್ರಹಿಸುವ ಸಾಮರ್ಥ್ಯ ಸುಮಾರು ನಾಲ್ಕು ಪಟ್ಟು ಹೆಚ್ಚಿರುತ್ತದೆ. ಬ್ರಿಟನ್ ‌ನ ಪ್ರಾಣಿ ಹಿಂಸೆ ತಡೆಗಟ್ಟುವ ಸಂಸ್ಥೆಯ ಅಧ್ಯಯನದ ಪ್ರಕಾರ, ಪಟಾಕಿಗಳ ಸ್ಫೋಟದ ಸದ್ದು ನಾಯಿಗಳಿಗೆ ಗ್ರೆನೇಡ್ ಸ್ಫೋಟದಂತೆ ಭಾಸವಾಗುತ್ತದೆ. ಇದರಿಂದ ಪ್ರಾಣಿಗಳಲ್ಲಿ ತೀವ್ರ ಭಯ, ಗೊಂದಲ, ಆತಂಕ, ಚಡಪಡಿಕೆ ಹಾಗೂ ಕೆಲವೊಮ್ಮೆ ಆಕ್ರಮಣಕಾರಿ ವರ್ತನೆ ಕಾಣಿಸಿಕೊಳ್ಳುತ್ತದೆ. ಕಾನೂನುಬದ್ಧ ಪಟಾಕಿಗಳ ಶಬ್ದದ ಮಿತಿ 125 ಡೆಸಿಬಲ್‌ ಗಳಷ್ಟಿದ್ದರೂ, ಈ ತೀವ್ರ ಶಬ್ದವೂ ಮೂಕ ಪ್ರಾಣಿಗಳಿಗೆ ಮಾರಕವಾಗಿ ಪರಿಣಮಿಸುತ್ತಿದೆ ಎಂದು ವರದಿ ತಿಳಿಸಿದೆ.

    ರಾಜ್ಯ ಸರ್ಕಾರ ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಹಸಿರು ಪಟಾಕಿ ಸಿಡಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ, ನಿಯಮ ಉಲ್ಲಂಘನೆ ಹಾಗೂ ಮನಸೋಇಚ್ಛೆ ಪಟಾಕಿ ಸಿಡಿಸುವುದರಿಂದ ಮೂಕ ಪ್ರಾಣಿಗಳು ಜೀವ ಕಳೆದುಕೊಳ್ಳುವಂತಾಗಿದ್ದು, ಸಾರ್ವಜನಿಕವಾಗಿ ಆತಂಕ ಮೂಡಿಸಿದೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    admin
    • Website

    Related Posts

    ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಆರೋಪ: ಸೈಬರ್ ಕ್ರೈಂ ಪೊಲೀಸರ ಮುಂದೆ ಕೃಪಾ ಆಳ್ವಾ ಹಾಜರು

    November 9, 2026

    ಕೇಂದ್ರ ಸಚಿವ ಕುಮಾರಸ್ವಾಮಿ ಒಬ್ಬ ಬೇಜವಾಬ್ದಾರಿಯ ಕೇಂದ್ರ ಸಚಿವ: ಸಚಿವ ಶಿವಲಿಂಗೇಗೌಡ ಕಿಡಿ

    November 9, 2026

    ಮೈಸೂರು ಅರಮನೆ ವಶಕ್ಕೆ  ಕಾರ್ಯಾಂಗ ದುರ್ಬಳಕೆ: ಸಂಸದ ಯದುವೀರ್ ಒಡೆಯರ್

    November 9, 2026

    Leave A Reply Cancel Reply

    Our Picks

    ತಿನ್ನಬಹುದಾದ ಚಿನ್ನದ ಸಿಹಿ ತಯಾರಿ; ಜೈಪುರದ ಮಿಠಾಯಿ ಈಗ ಭಾರಿ ಚರ್ಚೆ! ಇದರ ಬೆಲೆ ಎಷ್ಟು ಗೊತ್ತೆ ?

    November 9, 2026

    ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ: ನವೆಂಬರ್ ಈ ದಿನಗಳು ಬ್ಯಾಂಕ್ ರಜೆ!

    November 8, 2026

    ವಾಯು ಮಾಲಿನ್ಯದಿಂದ ಜಿಡಿಪಿಗೂ ಭಾರಿ ಹೊಡೆತ; ನಿಯಂತ್ರಣಕ್ಕೆ ಎಫ್‌ ಐಸಿಸಿಐನಿಂದ 10 ಸೂತ್ರಗಳ ಶಿಫಾರಸು ಇಲ್ಲಿದೆ!

    November 8, 2026

    ಜಿಯೋ ಗ್ರಾಹಕರಿಗೆ ಸಿಹಿಸುದ್ದಿ; ಉಚಿತವಾಗಿ 5 ತಿಂಗಳ ವೈ–ಫೈ, ಒಟಿಟಿ ಸೇವೆ ಪಡೆಯುವುದು ಹೇಗೆ?

    November 7, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಆರೋಪ: ಸೈಬರ್ ಕ್ರೈಂ ಪೊಲೀಸರ ಮುಂದೆ ಕೃಪಾ ಆಳ್ವಾ ಹಾಜರು

    November 9, 2026

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಸ್ಟಿಂಗ್ ಆಪರೇಷನ್ ಆರೋಪಕ್ಕೆ ಸಂಬಂಧಿಸಿದಂತೆ, ಮಕ್ಕಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ…

    ಪಟಾಕಿ ಸದ್ದಿಗೆ ಬೆಚ್ಚಿಬಿದ್ದು 14 ಅಂತಸ್ತಿನ ಕಟ್ಟಡದಿಂದ ಜಿಗಿದ ಬೀದಿ ನಾಯಿ ಸಾವು!

    November 9, 2026

    ಕೇಂದ್ರ ಸಚಿವ ಕುಮಾರಸ್ವಾಮಿ ಒಬ್ಬ ಬೇಜವಾಬ್ದಾರಿಯ ಕೇಂದ್ರ ಸಚಿವ: ಸಚಿವ ಶಿವಲಿಂಗೇಗೌಡ ಕಿಡಿ

    November 9, 2026

    ಮೈಸೂರು ಅರಮನೆ ವಶಕ್ಕೆ  ಕಾರ್ಯಾಂಗ ದುರ್ಬಳಕೆ: ಸಂಸದ ಯದುವೀರ್ ಒಡೆಯರ್

    November 9, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.