nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕೇಂದ್ರ ಸಚಿವ ಕುಮಾರಸ್ವಾಮಿ ಒಬ್ಬ ಬೇಜವಾಬ್ದಾರಿಯ ಕೇಂದ್ರ ಸಚಿವ: ಸಚಿವ ಶಿವಲಿಂಗೇಗೌಡ ಕಿಡಿ

    November 9, 2026

    ಮೈಸೂರು ಅರಮನೆ ವಶಕ್ಕೆ  ಕಾರ್ಯಾಂಗ ದುರ್ಬಳಕೆ: ಸಂಸದ ಯದುವೀರ್ ಒಡೆಯರ್

    November 9, 2026

    ಯೋಜನೆಗಳು ಉಚಿತವಾದರೆ, ಅಗತ್ಯ ವಸ್ತುಗಳ ದರ ಹೆಚ್ಚುವುದು ಸಹಜ: ಬೆಲೆ ಏರಿಕೆಗೆ ಹೈಕೋರ್ಟ್ ಹೇಳಿದ್ದೇನು?

    November 9, 2026
    Facebook Twitter Instagram
    ಟ್ರೆಂಡಿಂಗ್
    • ಕೇಂದ್ರ ಸಚಿವ ಕುಮಾರಸ್ವಾಮಿ ಒಬ್ಬ ಬೇಜವಾಬ್ದಾರಿಯ ಕೇಂದ್ರ ಸಚಿವ: ಸಚಿವ ಶಿವಲಿಂಗೇಗೌಡ ಕಿಡಿ
    • ಮೈಸೂರು ಅರಮನೆ ವಶಕ್ಕೆ  ಕಾರ್ಯಾಂಗ ದುರ್ಬಳಕೆ: ಸಂಸದ ಯದುವೀರ್ ಒಡೆಯರ್
    • ಯೋಜನೆಗಳು ಉಚಿತವಾದರೆ, ಅಗತ್ಯ ವಸ್ತುಗಳ ದರ ಹೆಚ್ಚುವುದು ಸಹಜ: ಬೆಲೆ ಏರಿಕೆಗೆ ಹೈಕೋರ್ಟ್ ಹೇಳಿದ್ದೇನು?
    • ಸೀತಾಪಹರಣಕ್ಕೆ ರಾವಣ ಸ್ಕೆಚ್ ಹಾಕಿರೋದು ಪತ್ನಿ ಮಂಡೋದರಿಗೆ ತಿಳಿದಿತ್ತೇ?: ಆಕೆ ನೀಡಿದ್ದ ಎಚ್ಚರಿಕೆ ಏನು?
    • ತಿನ್ನಬಹುದಾದ ಚಿನ್ನದ ಸಿಹಿ ತಯಾರಿ; ಜೈಪುರದ ಮಿಠಾಯಿ ಈಗ ಭಾರಿ ಚರ್ಚೆ! ಇದರ ಬೆಲೆ ಎಷ್ಟು ಗೊತ್ತೆ ?
    • ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ: ನವೆಂಬರ್ ಈ ದಿನಗಳು ಬ್ಯಾಂಕ್ ರಜೆ!
    • ರಾಮಾಯಣದ ಆ ಒಂದು ಘಟನೆಗೂ ದೀಪಾವಳಿಗೂ ಅವಿನಾಭಾವ ನಂಟು; ನಿಮಗೆ ಗೊತ್ತೇ ಈ ಕಥೆ?
    • ಸೀತೆಯನ್ನು ರಕ್ಷಿಸಲು ರಾವಣನನ್ನೇ ಎದುರಿಸಿದ ಜಟಾಯು; ಈ ಅದ್ಭುತ ಪ್ರವಾಸಿ ತಾಣದ ಬಗ್ಗೆ ನಿಮಗೆ ಗೊತ್ತೇ?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮೈಸೂರು ಅರಮನೆ ವಶಕ್ಕೆ  ಕಾರ್ಯಾಂಗ ದುರ್ಬಳಕೆ: ಸಂಸದ ಯದುವೀರ್ ಒಡೆಯರ್
    ರಾಜ್ಯ ಸುದ್ದಿ November 9, 2026

    ಮೈಸೂರು ಅರಮನೆ ವಶಕ್ಕೆ  ಕಾರ್ಯಾಂಗ ದುರ್ಬಳಕೆ: ಸಂಸದ ಯದುವೀರ್ ಒಡೆಯರ್

    By adminNovember 9, 2026No Comments1 Min Read
    yadhuveer odeyar

    ಮೈಸೂರು: ಮೈಸೂರು ರಾಜಮನೆತನ ಹಾಗೂ ರಾಜ್ಯ ಸರ್ಕಾರದ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ರಾಜವಂಶಸ್ಥ ಹಾಗೂ ಬಿಜೆಪಿ ಸಂಸದ ಯದುವೀರ್ ಒಡೆಯರ್, ಮೈಸೂರು ಅರಮನೆಯನ್ನು ವಶಪಡಿಸಿಕೊಳ್ಳಲು ಕಾರ್ಯಾಂಗವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ಇತ್ತೀಚೆಗೆ ಸಚಿವ ಯತೀಂದ್ರ ಅವರು, “ಅರಮನೆ ಬೋರ್ಡ್ ಸರ್ಕಾರದ್ದು, ಅರಮನೆ ಜಾಗ ಸರ್ಕಾರದ್ದು. ಅವರು ಉಳಿದುಕೊಳ್ಳಲು ಒಂದಿಷ್ಟು ಜಾಗ ಕೊಟ್ಟಿದ್ದೇವೆ ಅಷ್ಟೇ” ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು, “ಅರಮನೆ, ಅಂಬಾರಿ ಹಾಗೂ ಸಿಂಹಾಸನ ನಮ್ಮದು. ಸರ್ಕಾರ ಯದುವಂಶದ ವಾರಸುದಾರ ಅಲ್ಲ” ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು.

    ಈ ವಿವಾದದ ಬಗ್ಗೆ ಸೋಮವಾರ ಮಾತನಾಡಿದ ಯದುವೀರ್ ಒಡೆಯರ್, “ಅರಮನೆ ಆಸ್ತಿಯನ್ನು ವಶಕ್ಕೆ ಪಡೆಯಲು ಈಗ ಷಡ್ಯಂತ್ರ ನಡೆಯುತ್ತಿದೆ. ವೈಯಕ್ತಿಕ ಟೀಕೆಗಳು ಮತ್ತು ಆಸ್ತಿ ವಿಷಯಗಳು ಸಾರ್ವಜನಿಕ ಚರ್ಚೆಗೆ ಅಪ್ರಸ್ತುತವಾಗಿದ್ದು, ಇವುಗಳ ಕುರಿತು ನ್ಯಾಯಾಲಯದಲ್ಲಿ ತೀರ್ಮಾನವಾಗಬೇಕು. ಕಾನೂನು ಪ್ರಕಾರ ನ್ಯಾಯಾಲಯ ನೀಡುವ ಆದೇಶವೇ ಅಂತಿಮ ಸತ್ಯ” ಎಂದು ಸ್ಪಷ್ಟಪಡಿಸಿದರು.

    ಮುಂದುವರಿದು ದಸರಾ ಮಹೋತ್ಸವದ ಕುರಿತು ಮಾತನಾಡಿದ ಅವರು, “ಈ ಬಾರಿಯ ದಸರಾ ಮುಗಿದಿದ್ದು, ಅದರ ಲೋಪಗಳ ಚರ್ಚೆಯನ್ನು ಮುಂದುವರಿಸುವ ಅಗತ್ಯವಿಲ್ಲ ಎಂದು ನಮ್ಮ ತಾಯಿ ಈಗಾಗಲೇ ತಿಳಿಸಿದ್ದಾರೆ. ಆದಾಗ್ಯೂ, ಮುಂದಿನ ದಸರಾಗಳನ್ನು ಮತ್ತಷ್ಟು ಸುಧಾರಿಸುವ ದೃಷ್ಟಿಯಿಂದ ನಾವು ಕಾರ್ಯನಿರ್ವಹಿಸಲಿದ್ದೇವೆ. ದಸರಾದಿಂದ ಯಾವುದೇ ರಾಜಕೀಯ ಲಾಭದ ನಿರೀಕ್ಷೆ ಇಲ್ಲ, ದಸರಾ ಯಶಸ್ವಿಯಾದರೆ ಅದು ಮೈಸೂರಿಗೇ ಲಾಭ” ಎಂದರು.

    ಅರಮನೆ ಆಸ್ತಿ ವಿವಾದಗಳು ಸುಪ್ರೀಂ ಕೋರ್ಟ್ನಲ್ಲಿರುವುದರಿಂದ, ನ್ಯಾಯಾಲಯದ ಅಂತಿಮ ತೀರ್ಪಿನ ನಂತರವೇ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದಾಗಿ ಯದುವೀರ್ ಒಡೆಯರ್ ತಿಳಿಸಿದ್ದಾರೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    admin
    • Website

    Related Posts

    ಕೇಂದ್ರ ಸಚಿವ ಕುಮಾರಸ್ವಾಮಿ ಒಬ್ಬ ಬೇಜವಾಬ್ದಾರಿಯ ಕೇಂದ್ರ ಸಚಿವ: ಸಚಿವ ಶಿವಲಿಂಗೇಗೌಡ ಕಿಡಿ

    November 9, 2026

    ಯೋಜನೆಗಳು ಉಚಿತವಾದರೆ, ಅಗತ್ಯ ವಸ್ತುಗಳ ದರ ಹೆಚ್ಚುವುದು ಸಹಜ: ಬೆಲೆ ಏರಿಕೆಗೆ ಹೈಕೋರ್ಟ್ ಹೇಳಿದ್ದೇನು?

    November 9, 2026

    ಶಿವಕುಮಾರ ಸ್ವಾಮೀಜಿ ವೃತ್ತದ ಹೆಸರು ಬದಲಾವಣೆಯಾಗಲ್ಲ; ಬಸ್ ದರ ಏರಿಕೆ ಅನಿವಾರ್ಯ: ಡಾ. ಜಿ. ಪರಮೇಶ್ವರ್

    November 7, 2026

    Leave A Reply Cancel Reply

    Our Picks

    ತಿನ್ನಬಹುದಾದ ಚಿನ್ನದ ಸಿಹಿ ತಯಾರಿ; ಜೈಪುರದ ಮಿಠಾಯಿ ಈಗ ಭಾರಿ ಚರ್ಚೆ! ಇದರ ಬೆಲೆ ಎಷ್ಟು ಗೊತ್ತೆ ?

    November 9, 2026

    ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ: ನವೆಂಬರ್ ಈ ದಿನಗಳು ಬ್ಯಾಂಕ್ ರಜೆ!

    November 8, 2026

    ವಾಯು ಮಾಲಿನ್ಯದಿಂದ ಜಿಡಿಪಿಗೂ ಭಾರಿ ಹೊಡೆತ; ನಿಯಂತ್ರಣಕ್ಕೆ ಎಫ್‌ ಐಸಿಸಿಐನಿಂದ 10 ಸೂತ್ರಗಳ ಶಿಫಾರಸು ಇಲ್ಲಿದೆ!

    November 8, 2026

    ಜಿಯೋ ಗ್ರಾಹಕರಿಗೆ ಸಿಹಿಸುದ್ದಿ; ಉಚಿತವಾಗಿ 5 ತಿಂಗಳ ವೈ–ಫೈ, ಒಟಿಟಿ ಸೇವೆ ಪಡೆಯುವುದು ಹೇಗೆ?

    November 7, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಕೇಂದ್ರ ಸಚಿವ ಕುಮಾರಸ್ವಾಮಿ ಒಬ್ಬ ಬೇಜವಾಬ್ದಾರಿಯ ಕೇಂದ್ರ ಸಚಿವ: ಸಚಿವ ಶಿವಲಿಂಗೇಗೌಡ ಕಿಡಿ

    November 9, 2026

    ಹಾಸನ: ತಮ್ಮ ವಿರುದ್ಧ ಲಂಚದ ಆರೋಪ ಮಾಡಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ…

    ಮೈಸೂರು ಅರಮನೆ ವಶಕ್ಕೆ  ಕಾರ್ಯಾಂಗ ದುರ್ಬಳಕೆ: ಸಂಸದ ಯದುವೀರ್ ಒಡೆಯರ್

    November 9, 2026

    ಯೋಜನೆಗಳು ಉಚಿತವಾದರೆ, ಅಗತ್ಯ ವಸ್ತುಗಳ ದರ ಹೆಚ್ಚುವುದು ಸಹಜ: ಬೆಲೆ ಏರಿಕೆಗೆ ಹೈಕೋರ್ಟ್ ಹೇಳಿದ್ದೇನು?

    November 9, 2026

    ಸೀತಾಪಹರಣಕ್ಕೆ ರಾವಣ ಸ್ಕೆಚ್ ಹಾಕಿರೋದು ಪತ್ನಿ ಮಂಡೋದರಿಗೆ ತಿಳಿದಿತ್ತೇ?: ಆಕೆ ನೀಡಿದ್ದ ಎಚ್ಚರಿಕೆ ಏನು?

    November 9, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.