nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮೈಸೂರು ಅರಮನೆ ವಶಕ್ಕೆ  ಕಾರ್ಯಾಂಗ ದುರ್ಬಳಕೆ: ಸಂಸದ ಯದುವೀರ್ ಒಡೆಯರ್

    November 9, 2026

    ಯೋಜನೆಗಳು ಉಚಿತವಾದರೆ, ಅಗತ್ಯ ವಸ್ತುಗಳ ದರ ಹೆಚ್ಚುವುದು ಸಹಜ: ಬೆಲೆ ಏರಿಕೆಗೆ ಹೈಕೋರ್ಟ್ ಹೇಳಿದ್ದೇನು?

    November 9, 2026

    ಸೀತಾಪಹರಣಕ್ಕೆ ರಾವಣ ಸ್ಕೆಚ್ ಹಾಕಿರೋದು ಪತ್ನಿ ಮಂಡೋದರಿಗೆ ತಿಳಿದಿತ್ತೇ?: ಆಕೆ ನೀಡಿದ್ದ ಎಚ್ಚರಿಕೆ ಏನು?

    November 9, 2026
    Facebook Twitter Instagram
    ಟ್ರೆಂಡಿಂಗ್
    • ಮೈಸೂರು ಅರಮನೆ ವಶಕ್ಕೆ  ಕಾರ್ಯಾಂಗ ದುರ್ಬಳಕೆ: ಸಂಸದ ಯದುವೀರ್ ಒಡೆಯರ್
    • ಯೋಜನೆಗಳು ಉಚಿತವಾದರೆ, ಅಗತ್ಯ ವಸ್ತುಗಳ ದರ ಹೆಚ್ಚುವುದು ಸಹಜ: ಬೆಲೆ ಏರಿಕೆಗೆ ಹೈಕೋರ್ಟ್ ಹೇಳಿದ್ದೇನು?
    • ಸೀತಾಪಹರಣಕ್ಕೆ ರಾವಣ ಸ್ಕೆಚ್ ಹಾಕಿರೋದು ಪತ್ನಿ ಮಂಡೋದರಿಗೆ ತಿಳಿದಿತ್ತೇ?: ಆಕೆ ನೀಡಿದ್ದ ಎಚ್ಚರಿಕೆ ಏನು?
    • ತಿನ್ನಬಹುದಾದ ಚಿನ್ನದ ಸಿಹಿ ತಯಾರಿ; ಜೈಪುರದ ಮಿಠಾಯಿ ಈಗ ಭಾರಿ ಚರ್ಚೆ! ಇದರ ಬೆಲೆ ಎಷ್ಟು ಗೊತ್ತೆ ?
    • ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ: ನವೆಂಬರ್ ಈ ದಿನಗಳು ಬ್ಯಾಂಕ್ ರಜೆ!
    • ರಾಮಾಯಣದ ಆ ಒಂದು ಘಟನೆಗೂ ದೀಪಾವಳಿಗೂ ಅವಿನಾಭಾವ ನಂಟು; ನಿಮಗೆ ಗೊತ್ತೇ ಈ ಕಥೆ?
    • ಸೀತೆಯನ್ನು ರಕ್ಷಿಸಲು ರಾವಣನನ್ನೇ ಎದುರಿಸಿದ ಜಟಾಯು; ಈ ಅದ್ಭುತ ಪ್ರವಾಸಿ ತಾಣದ ಬಗ್ಗೆ ನಿಮಗೆ ಗೊತ್ತೇ?
    • ಭವಿಷ್ಯದ ಜಗತ್ತನ್ನೇ ಬದಲಿಸಲಿದೆಯೇ ಎಲಾನ್ ಮಸ್ಕ್‌ ನ ಐದು ಕಂಪನಿಗಳ ಮಹಾ ಯೋಜನೆ?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಯೋಜನೆಗಳು ಉಚಿತವಾದರೆ, ಅಗತ್ಯ ವಸ್ತುಗಳ ದರ ಹೆಚ್ಚುವುದು ಸಹಜ: ಬೆಲೆ ಏರಿಕೆಗೆ ಹೈಕೋರ್ಟ್ ಹೇಳಿದ್ದೇನು?
    ರಾಜ್ಯ ಸುದ್ದಿ November 9, 2026

    ಯೋಜನೆಗಳು ಉಚಿತವಾದರೆ, ಅಗತ್ಯ ವಸ್ತುಗಳ ದರ ಹೆಚ್ಚುವುದು ಸಹಜ: ಬೆಲೆ ಏರಿಕೆಗೆ ಹೈಕೋರ್ಟ್ ಹೇಳಿದ್ದೇನು?

    By adminNovember 9, 2026No Comments2 Mins Read
    high court

    ಬೆಂಗಳೂರು: ರಾಜ್ಯ ಸರ್ಕಾರದ ಉಚಿತ ಯೋಜನೆಗಳು ಹಾಗೂ ದಿನಬಳಕೆ ವಸ್ತುಗಳ ಸತತ ಬೆಲೆ ಏರಿಕೆಯ ವಿರುದ್ಧ ಕರ್ನಾಟಕ ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಮಾತನಾಡಿದ ನ್ಯಾಯಪೀಠವು, “ಸರ್ಕಾರದ ಯೋಜನೆಗಳು ಉಚಿತವಾದರೆ, ಅಗತ್ಯ ವಸ್ತುಗಳ ದರ ಹೆಚ್ಚುವುದು ಸಹಜ. ಹೀಗೆ ಎಲ್ಲದರ ಬೆಲೆಯನ್ನೂ ಹೆಚ್ಚಿಸುತ್ತಾ ಹೋದರೆ ಸಾಮಾನ್ಯ ಮನುಷ್ಯ ಜೀವನ ಸಾಗಿಸುವುದಾದರೂ ಹೇಗೆ?” ಎಂದು ಪ್ರಶ್ನಿಸಿದೆ.

    ಅನ್ನಭಾಗ್ಯ ಯೋಜನೆಯಡಿ ಮೈಸೂರಿನ ಸರ್ಕಾರಿ ಉಗ್ರಾಣದಲ್ಲಿ ಸಂಗ್ರಹಿಸಿಡಲಾಗಿದ್ದ ಆಹಾರ ಧಾನ್ಯಗಳಲ್ಲಿ 320 ಕ್ವಿಂಟಲ್ ಅಕ್ಕಿ ಮತ್ತು 85 ಕ್ವಿಂಟಲ್ ಗೋಧಿ ಕೊರತೆ ಕಂಡುಬಂದಿತ್ತು. ಈ ಸಂಬಂಧ ಅಗತ್ಯ ವಸ್ತುಗಳ ನಿಯಂತ್ರಣ ಕಾಯ್ದೆಯಡಿ ತಮ್ಮ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಉಗ್ರಾಣದ ಹಿರಿಯ ವ್ಯವಸ್ಥಾಪಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ವಿ. ಶೀಶಾನಂದ ಅವರು ಸರ್ಕಾರದ ನೀತಿಗಳ ವಿರುದ್ಧ ಮೌಖಿಕವಾಗಿ ತೀವ್ರ ಆಕ್ರೋಶ ಹೊರಹಾಕಿದರು.

    “ಕಳೆದ ತಿಂಗಳು ತುಪ್ಪ ತರಲು ಹೋದಾಗ ಪ್ರತಿ ಕೆ.ಜಿ.ಗೆ 650 ರೂ. ಇತ್ತು, ಈಗ 850 ರೂ. ಆಗಿದೆ. ಇಷ್ಟೊಂದು ಬೆಲೆ ಹೆಚ್ಚಾದರೆ ದೀಪಾವಳಿಗೆ ತುಪ್ಪದ ದೀಪ ಹಚ್ಚುವುದು ಹೇಗೆ? ಯಮದೀಪ ಹಚ್ಚುವ ಬದಲು ನನ್ನನ್ನೇ ಕರೆದುಕೊಂಡು ಹೋಗು ಎಂದು ಯಮನನ್ನೇ ಕೇಳಬೇಕಷ್ಟೇ!” ಎಂದು ನ್ಯಾಯಪೀಠ ಮಾರ್ಮಿಕವಾಗಿ ನುಡಿಯಿತು.

    ಮಾರುಕಟ್ಟೆಯಲ್ಲಿ ಉತ್ತಮ ಅಕ್ಕಿಯ ದರ ಈಗಾಗಲೇ ಕೆ.ಜಿ.ಗೆ 103 ರೂ. ತಲುಪಿದೆ. ಇತ್ತ ಸರ್ಕಾರ ಕಬ್ಬಿಗೆ ತಲಾ 3,000 ರೂ.ಗಳಿಗೂ ಅಧಿಕ ಬೆಂಬಲ ಬೆಲೆ ಘೋಷಿಸಿದೆ. ಈ ಹೆಚ್ಚುವರಿ ಹಣವನ್ನು ಸರ್ಕಾರ ತನ್ನ ಜೇಬಿನಿಂದ ಕೊಡದೆ, ಜನರ ತೆರಿಗೆ ಹಣದಿಂದಲೇ ಭರಿಸುತ್ತದೆ. ನೋಡುತ್ತಾ ಇರಿ, ದೀಪಾವಳಿ ಮುಗಿದ ಮೇಲೆ ಸಕ್ಕರೆ ಬೆಲೆ ಪ್ರತಿ ಕೆ.ಜಿ.ಗೆ 90 ರೂಪಾಯಿ ತಲುಪಲಿದೆ ಎಂದು ನ್ಯಾಯಪೀಠ ಎಚ್ಚರಿಸಿದೆ.

    “ಒಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ, ಮತ್ತೊಂದೆಡೆ ದಿನಸಿ ತರಲು ಬಸ್‌ನಲ್ಲಿ ಹೋದರೆ ಬಸ್ ಟಿಕೆಟ್ ದರವನ್ನೂ ಹೆಚ್ಚಿಸಲಾಗಿದೆ. ಹೀಗೆ ಎಲ್ಲವನ್ನೂ ಏರಿಸುತ್ತಾ ಹೋದರೆ ಮನುಷ್ಯ ಎಲ್ಲಿಗೆ ಹೋಗಬೇಕು?” ಎಂದು ನ್ಯಾಯಮೂರ್ತಿಗಳು ಅಳಲು ತೋಡಿಕೊಂಡರು.

    ಸರ್ಕಾರಿ ಉಗ್ರಾಣಗಳಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆಯೂ ಕೋರ್ಟ್ ಕಟುವಾಗಿ ಟೀಕಿಸಿದೆ. ವಸ್ತುವಿನ ಬೆಲೆ ಹೆಚ್ಚಾದ ತಕ್ಷಣ ಉಗ್ರಾಣದಲ್ಲಿ ಮೊದಲೇ ದಾಸ್ತಾನು ಮಾಡಲಾದ ಹಳೆಯ ಸರಕುಗಳ ಮೇಲೂ ಹೊಸ ದರ ಮುದ್ರಿಸಿ ಸರಬರಾಜು ಮಾಡಲಾಗುತ್ತದೆ. ಇದು ‘ಹಳೇ ಮಾಲು, ಹೊಸ ಸೀಲು’ ಎಂಬಂತಾಗಿದೆ. ಬಡವರಿಗೆ ನೀಡಬೇಕಾದ ಪದಾರ್ಥಗಳನ್ನು ಕ್ವಿಂಟಲ್ ‌ಗಟ್ಟಲೆ ಕದ್ದು, ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಎಚ್ಚರಿಸಿದೆ.

    ಸದ್ಯ ತೀವ್ರ ಚರ್ಚೆಗೆ ಗ್ರಾಸವಾಗಿರುವ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಹೈಕೋರ್ಟ್ ನವೆಂಬರ್ 11ಕ್ಕೆ ನಿಗದಿಪಡಿಸಿದೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    admin
    • Website

    Related Posts

    ಮೈಸೂರು ಅರಮನೆ ವಶಕ್ಕೆ  ಕಾರ್ಯಾಂಗ ದುರ್ಬಳಕೆ: ಸಂಸದ ಯದುವೀರ್ ಒಡೆಯರ್

    November 9, 2026

    ಶಿವಕುಮಾರ ಸ್ವಾಮೀಜಿ ವೃತ್ತದ ಹೆಸರು ಬದಲಾವಣೆಯಾಗಲ್ಲ; ಬಸ್ ದರ ಏರಿಕೆ ಅನಿವಾರ್ಯ: ಡಾ. ಜಿ. ಪರಮೇಶ್ವರ್

    November 7, 2026

    ಚೆಸ್‌ ನಲ್ಲಿ ಹಳ್ಳಿ ಪ್ರತಿಭೆ ರಾಷ್ಟ್ರಮಟ್ಟಕ್ಕೆ ಆಯ್ಕೆ |   ರಾಜ್ಯ ಮಟ್ಟದ ಚಾಂಪಿಯನ್‌ ಶಿಪ್‌ ನಲ್ಲಿ ಯದುನಂದನ್ ಜಿ.ಎನ್. ಸಾಧನೆ

    November 6, 2026

    Leave A Reply Cancel Reply

    Our Picks

    ತಿನ್ನಬಹುದಾದ ಚಿನ್ನದ ಸಿಹಿ ತಯಾರಿ; ಜೈಪುರದ ಮಿಠಾಯಿ ಈಗ ಭಾರಿ ಚರ್ಚೆ! ಇದರ ಬೆಲೆ ಎಷ್ಟು ಗೊತ್ತೆ ?

    November 9, 2026

    ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ: ನವೆಂಬರ್ ಈ ದಿನಗಳು ಬ್ಯಾಂಕ್ ರಜೆ!

    November 8, 2026

    ವಾಯು ಮಾಲಿನ್ಯದಿಂದ ಜಿಡಿಪಿಗೂ ಭಾರಿ ಹೊಡೆತ; ನಿಯಂತ್ರಣಕ್ಕೆ ಎಫ್‌ ಐಸಿಸಿಐನಿಂದ 10 ಸೂತ್ರಗಳ ಶಿಫಾರಸು ಇಲ್ಲಿದೆ!

    November 8, 2026

    ಜಿಯೋ ಗ್ರಾಹಕರಿಗೆ ಸಿಹಿಸುದ್ದಿ; ಉಚಿತವಾಗಿ 5 ತಿಂಗಳ ವೈ–ಫೈ, ಒಟಿಟಿ ಸೇವೆ ಪಡೆಯುವುದು ಹೇಗೆ?

    November 7, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಮೈಸೂರು ಅರಮನೆ ವಶಕ್ಕೆ  ಕಾರ್ಯಾಂಗ ದುರ್ಬಳಕೆ: ಸಂಸದ ಯದುವೀರ್ ಒಡೆಯರ್

    November 9, 2026

    ಮೈಸೂರು: ಮೈಸೂರು ರಾಜಮನೆತನ ಹಾಗೂ ರಾಜ್ಯ ಸರ್ಕಾರದ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ಕುರಿತು ಮೊದಲ ಬಾರಿಗೆ…

    ಯೋಜನೆಗಳು ಉಚಿತವಾದರೆ, ಅಗತ್ಯ ವಸ್ತುಗಳ ದರ ಹೆಚ್ಚುವುದು ಸಹಜ: ಬೆಲೆ ಏರಿಕೆಗೆ ಹೈಕೋರ್ಟ್ ಹೇಳಿದ್ದೇನು?

    November 9, 2026

    ಸೀತಾಪಹರಣಕ್ಕೆ ರಾವಣ ಸ್ಕೆಚ್ ಹಾಕಿರೋದು ಪತ್ನಿ ಮಂಡೋದರಿಗೆ ತಿಳಿದಿತ್ತೇ?: ಆಕೆ ನೀಡಿದ್ದ ಎಚ್ಚರಿಕೆ ಏನು?

    November 9, 2026

    ತಿನ್ನಬಹುದಾದ ಚಿನ್ನದ ಸಿಹಿ ತಯಾರಿ; ಜೈಪುರದ ಮಿಠಾಯಿ ಈಗ ಭಾರಿ ಚರ್ಚೆ! ಇದರ ಬೆಲೆ ಎಷ್ಟು ಗೊತ್ತೆ ?

    November 9, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.