ಕೊರಟಗೆರೆ: ಕೊರಟಗೆರೆಯ ಗ್ರಾಮೀಣ ಭಾಗದ ಬೆಟ್ಟ-ಗುಡ್ಡದ ಸಂಪತ್ತಿನ ಮೇಲೆ ಭೂ ಮಾಫಿಯಾ ಕಣ್ಣು ಬಿದ್ದಿದ್ದು, ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿಯ ಗಂಟಿಗಾನಹಳ್ಳಿ ಮಣ್ಣು ಮಾಫಿಯಾ ಎಗ್ಗಿಲ್ಲದೇ ನಡೆಯುತ್ತಿದೆ.
ತುಮಕೂರಿನ ಜೆಸಿಬಿಗಳು ಮತ್ತು ಲಾರಿಗಳು ಕೊರಟಗೆರೆ ಪಟ್ಟಣದಲ್ಲಿ ಘರ್ಜನೆ ಮಾಡುತ್ತಿವೆ. ಅಧಿಕಾರಿಗಳು ಮನೆಗಳಿಗೆ ಸೇರಿದ ಮೇಲೆ ರಸ್ತೆಗಿಳಿದು ರಾತ್ರಿ ಇಡೀ ಕಾರ್ಯಚರಣೆಗಿಳಿದಿವೆ. ತಡರಾತ್ರಿ 9 ರಿಂದ ಮುಂಜಾನೆ 5ರ ವರೆಗೆ ಸಾವಿರಾರು ಲೋಡು ಮಣ್ಣು ಸರಬರಾಜು ಆಗುತ್ತಿದೆ.
ಗಂಟಿಗಾನಹಳ್ಳಿಯ ಬೆಣಸೆ ಬೆಟ್ಟದ ಸಂಪತ್ತು ರಾತ್ರೋರಾತ್ರಿ ಕರಗಿ ಹೋಗ್ತಿದೆ. ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿಯ ಗಂಟಿಗಾನಹಳ್ಳಿ ಬೆಣಸೆ ಬೆಟ್ಟದಿಂದ ಕೊರಟಗೆರೆ ಬೈಪಾಸಿನ ಲೇಔಟ್ ಗೆ ಮಣ್ಣು ಸರಬರಾಜು ಮಾಡಲಾಗ್ತಿದೆ.
1 ಲಾರಿ ಮಣ್ಣು ಲೋಡಿಗೆ 3 ಸಾವಿರ ಬಾಡಿಗೆಯಂತೆ, ಸಾವಿರಾರು ಲೋಡು ಮಣ್ಣು ಸರಬರಾಜಾಗುತ್ತಿದೆ. 8 ಲಾರಿ ಮತ್ತು 2 ಜೆಸಿಬಿಯಿಂದ ರಾತ್ರಿಯಿಡಿ ಬೆಟ್ಟ ಕರಗಿಸುವ ಸಾಹಸಕ್ಕೆ ದಂಡೆಕೋರರು ಮುಂದಾಗಿದ್ದಾರೆ.
ಭೂ–ಮಾಫಿಯಾ ದಂಧೆಕೋರರಿಗೆ ಸರಕಾರಿ ಅಧಿಕಾರಿಗಳ ಮೌನವೇ ಶ್ರೀರಕ್ಷೆಯಾಗಿದೆ. ಜೆಸಿಬಿ ಮತ್ತು ಲಾರಿ ಮಾಲೀಕರ ವಿರುದ್ದ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿ ವರ್ಗ ವಿಫಲವಾಗಿದೆ.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ