ಸಾರ್ವಜನಿಕ ಕೆರೆಯಲ್ಲಿದ್ದ ಮೊಸಳೆ ಕೊನೆಗೂ ಸೆರೆ: ನಿಟ್ಟುಸಿರುಬಿಟ್ಟ ಜನ
ಬೀದರ್: ಜಿಲ್ಲೆಯ ಔರಾದ್ ಬಿ ತಾಲೂಕಿನ ಕೌಠಾ ಬಿ ಗ್ರಾಮ ಪಂಚಾಯತ್ ಅಡಿಯಲ್ಲಿ ಬರುವ ಕೌಠಾ ಬಿ ಗ್ರಾಮದ ಸಾರ್ವಜನಿಕ ಕೆರೆಯಲ್ಲಿ ಮೂರು ದಿನಗಳ ಹಿಂದೆ ಮೊಸಳೆ ಕಾಣಿಸಿಕೊಂಡಿದ್ದು, ಸಾರ್ವಜನಿಕರಲ್ಲಿ ಭಯದ ವಾತಾವರಣ ಹುಟ್ಟಿಸಿದೆ.
ಮೊಸಳೆ ಕಾಣಿಸಿಕೊಂಡ ಹಿನ್ನೆಲೆ ಗ್ರಾಮ ಪಂಚಾಯತ್ ಅಧ್ಯಕ್ಷರು ಕೂಡಲೇ ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದರು. ಬಳಿಕ ಸತತ ಮೂರು ದಿನಗಳ ಪ್ರಯತ್ನದ ಬಳಿಕ ಮೊಸಳೆಯನ್ನು ಹಿಡಿಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಮೊಸಳೆಯಿಂದಾಗಿ ಭಯಭೀತರಾಗಿದ್ದ ಸಾರ್ವಜನಿಕರು ಇದೀಗ ನಿಟ್ಟುಸಿರುಬಿಟ್ಟಿದ್ದಾರೆ. ಮೊಸಳೆಯನ್ನು ಹಿಡಿದು ಅಧಿಕಾರಿಗಳು ಸಾರ್ವಜನಿಕರು ಜನರ ಭಯವನ್ನು ದೂರ ಮಾಡಿದ್ದಾರೆ.
ಇದೆ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಪಿಡಿಒ ಅನಿಲ್ ಕುಲಕರ್ಣಿ, ಅಧ್ಯಕ್ಷರಾದ ರವೀನಾ ಮೇತ್ರೆ, ಅರಣ್ಯ ಅಧಿಕಾರಿಗಳು ಹಾಗೂ ಗ್ರಾಮದ ಸದಸ್ಯರು ಹಿರಿಯರು ಹಾಜರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296