nammatumakuru

    Subscribe to Updates

    Get the latest creative news from FooBar about art, design and business.

    What's Hot

    ವಿಕಲಚೇತನರಿಗೆ ರಾಜಕೀಯ ಮೀಸಲಾತಿಗೆ ಒತ್ತಾಯಿಸಿ ಪ್ರತಿಭಟನೆ: ಫೆ.22ರಂದು ತುಮಕೂರಿನಲ್ಲಿ ರ‍್ಯಾಲಿ

    February 21, 2026

    ಹತ್ತೇನಹಳ್ಳಿ ಮಾರಮ್ಮನಿಗೆ ಹೊಸ ತಾಳಿ ಸಮರ್ಪಣೆ: ಭಕ್ತರಿಗೆ ಸಂಭ್ರಮ

    February 21, 2026

    ಸಾರ್ವಜನಿಕರ ರಸ್ತೆಗೆ ಕಾಂಪೌಂಡ್ ನಿರ್ಮಾಣ: ತೆರವಿಗೆ ಆಗ್ರಹಿಸಿ ತಹಶೀಲ್ದಾರ್‌ ಗೆ ಮನವಿ

    February 21, 2026
    Facebook Twitter Instagram
    ಟ್ರೆಂಡಿಂಗ್
    • ವಿಕಲಚೇತನರಿಗೆ ರಾಜಕೀಯ ಮೀಸಲಾತಿಗೆ ಒತ್ತಾಯಿಸಿ ಪ್ರತಿಭಟನೆ: ಫೆ.22ರಂದು ತುಮಕೂರಿನಲ್ಲಿ ರ‍್ಯಾಲಿ
    • ಹತ್ತೇನಹಳ್ಳಿ ಮಾರಮ್ಮನಿಗೆ ಹೊಸ ತಾಳಿ ಸಮರ್ಪಣೆ: ಭಕ್ತರಿಗೆ ಸಂಭ್ರಮ
    • ಸಾರ್ವಜನಿಕರ ರಸ್ತೆಗೆ ಕಾಂಪೌಂಡ್ ನಿರ್ಮಾಣ: ತೆರವಿಗೆ ಆಗ್ರಹಿಸಿ ತಹಶೀಲ್ದಾರ್‌ ಗೆ ಮನವಿ
    • ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರ ಖಾಯಂಗೆ ಒತ್ತಾಯಿಸಿ ಪ್ರತಿಭಟನೆ
    • ಕೆಎಎಸ್ ಅಧಿಕಾರಿ ವಿರುದ್ಧ ನಕಲಿ ದಾಖಲೆ ಸೃಷ್ಟಿ ಆರೋಪ: ಸ್ನೇಹಮಯಿ ಕೃಷ್ಣ ಬಂಧನ
    • ಔರಾದ್: ಸಂತಪುರ ಗುರುಕುಲ ಶಾಲೆಯಲ್ಲಿ ರಾಷ್ಟ್ರೀಯ ಬಾಯಿ ಹಲ್ಲು ತಪಾಸಣೆ ಶಿಬಿರ
    • ಕೊರಟಗೆರೆ ಪೊಲೀಸರಿಂದ ಭರ್ಜರಿ ಬೇಟೆ: ಅಂತಾರಾಜ್ಯ ಮೊಬೈಲ್ ಪೋನ್ ಕಳ್ಳರ ಬಂಧನ
    • ಬಳ್ಳಾರಿ: ದ್ವಿತೀಯ PUC–15,652 ವಿದ್ಯಾರ್ಥಿಗಳು, SSLC–23,271 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಜೈನ ಸಮಾಜದ ಬೆಳವಣಿಗೆಗೆ ಧೈರ್ಯ–ಆತ್ಮವಿಶ್ವಾಸ ಅಗತ್ಯ:   ಉಷಾ ಜಯಪ್ರಕಾಶ್
    ಜಿಲ್ಲಾ ಸುದ್ದಿ November 17, 2024

    ಜೈನ ಸಮಾಜದ ಬೆಳವಣಿಗೆಗೆ ಧೈರ್ಯ–ಆತ್ಮವಿಶ್ವಾಸ ಅಗತ್ಯ:   ಉಷಾ ಜಯಪ್ರಕಾಶ್

    By adminNovember 17, 2024No Comments2 Mins Read
    jain

    ದಾವಣಗೆರೆ:  ಜೈನ ಧರ್ಮ  ಪುರಾತನವಾದ ಧರ್ಮವಾಗಿದ್ದು ಸಂಸ್ಕೃತಿ, ಸಂಸ್ಕಾರ ಹೊಂದಿದ್ದು, ಜೈನ ಧರ್ಮದ ಬೆಳವಣಿಗೆಗೆ ಧೈರ್ಯ ಮತ್ತು ಆತ್ಮ ವಿಶ್ವಾಸ ಅತಿ ಅಗತ್ಯವಾಗಿದೆ ಎಂದು ಹಿರಿಯ ಶ್ರಾವಕಿ, ಸ್ಥಾಪಕ ಅಧ್ಯಕ್ಷೆ, ಮಾರ್ಗದರ್ಶಿಗಳಾದ ಉಷಾ ಜಯಪ್ರಕಾಶ್ ತಿಳಿಸಿದರು.

    ಅವರಿಂದು ದಾವಣಗೆರೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಭವನದಲ್ಲಿ ನಡೆದ ಭಾರತೀಯ  ಜೈನ್ ಮಿಲನ್ ವಲಯ —  8ರ ದಾವಣಗೆರೆ ಜೈನ್ ಮಿಲನ್ ದಾವಣಗೆರೆ, ಶ್ರೀ ಆದಿನಾಥ ಜೈನ್ ಮಿಲನ್, ಸಮಸ್ತ ದಿಗಂಬರ ಜೈನ ಸಮಾಜ ದಾವಣಗೆರೆ ಇವರ     ಆತಿಥ್ಯದಲ್ಲಿ ನಡೆದ ದಾವಣಗೆರೆ ವಿಭಾಗ ಮಟ್ಟದ ಕಿರಿಯರ ಹಾಗೂ ಹಿರಿಯರ  ಜಿನ ಭಜನೆ ಸ್ಪರ್ಧೆಯ 8 ನೇ ಆವೃತ್ತಿ ಉದ್ಘಾಟಿಸಿ ಮಾತನಾಡಿದರು.


    Provided by
    Provided by

    ಜೈನ ಧರ್ಮದ  ಬೆಳವಣಿಗೆಗೆ ಉತ್ತಮ ಮಾರ್ಗದರ್ಶನ –ಒಗ್ಗಟ್ಟು ಅಗತ್ಯ. ಜೈನ ಧರ್ಮ  ಉತ್ತಮ ಪ್ರಗತಿಯಲ್ಲಿ ಮುನ್ನಡೆಯುತ್ತಿದ್ದು, ಧರ್ಮದ ಹಲವಾರು ವಿಭಾಗಗಳಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಿಸಿರುವ ಬಗ್ಗೆ ನನಗೆ ಸಂತಸ ತಂದಿದೆ, ವನಿತ ಸಮಾಜ ಹಾಗೂ ಪದ್ಮಂಬಾ ಮಹಿಳಾ ಸಮಾಜದ ಏಳಿಗೆ ನನ್ನ ಪ್ರತಿಭೆ ತೋರಿಸಲು ಸಹಕಾರಿಯಾಗಿದೆ. ಸಮಾಜ ಸೇವೆ ಸಂತಸ ತಂದಿದೆ ಎಂದು ಅವರು, ಯಾವುದಕ್ಕೂ ಧೈರ್ಯ ಆತ್ಮ ವಿಶ್ವಾಸ ಅಗತ್ಯ ಎಂದರು.

    ಎಲ್ಲರ ಸಹಕಾರದಿಂದ ನಮ್ಮ ಬೆಳವಣಿಗೆ ಯಾಗಿದ್ದು ಯಾವುದೇ  ಸ್ಪರ್ಧಾ ಕಾರ್ಯಕ್ಕೆ ಪ್ರಯತ್ನ ಅಗತ್ಯವಾಗಿದ್ದು,  ಸ್ಪರ್ಧೆ ಪ್ರಶಸ್ತಿಗೆ ಸೀಮಿತವಾಗಬಾರದು ಎಂದರು.

    ಭಾರತೀಯ ಜೈನ ವಲಯ– 8ರ ದಾವಣಗೆರೆ ವಿಭಾಗದ ಕಾರ್ಯದರ್ಶಿ ಭರತ್ ರಾಜ್. ಎಸ್.  ಹಜಾರಿ ಮಾತನಾಡಿ, ಜಿನ ಭಜನಾ ಕಾರ್ಯಕ್ರಮ ಈ ಹಿಂದೆ  ಶಿವಮೊಗ್ಗ ಹಾಗೂ ಹಾವೇರಿಯಲ್ಲಿ ನಡೆದು  ಯಶಸ್ಸು ಕಂಡಿತ್ತು. ಈಗ ದಾವಣಗೆರೆಯಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ ಎಂದರು.

    ಭಾರತೀಯ  ಜೈನ್ ಮಿಲನ್  ವಲಯ — 8 ರ ಮಂಗಳೂರು ವಿಭಾಗದ  ಸೋಮಶೇಖರ ಶೆಟ್ಟಿ ಮಾತನಾಡಿ, ಮಕ್ಕಳಿಗೆ  ಜಿನ ಭಜನ ಸಂಸ್ಕೃತಿ ಬೆಳೆಸುವುದು ಅಗತ್ಯ, ಸ್ಪರ್ಧಾತ್ಮಕ ಮನೋಭಾವನೆಗಳು ಅಗತ್ಯ ವಿದ್ಯಾರ್ಥಿಗಳಲ್ಲಿ ಸಂಸ್ಕೃತಿ –ಸಂಸ್ಕಾರ ಬೆಳವಣಿಗೆಗೆ ಸಹಕಾರಿಯಾಗಲಿದ್ದು ಮನೆ –ಮನಗಳಲ್ಲಿ ಜಿನ ಸಂಸ್ಕೃತಿ   ಬೆಳೆಯಲಿ ಎಂದರು.

    ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಭಾರತೀಯ  ಜೈನ್ ಮಿಲನ ದಾವಣಗೆರೆ ವಿಭಾಗದ ವಲಯ  –8 ರ  ಎಚ್‌.ಪಿ.ಸುಮತಿ ಕುಮಾರ್ ಮಾತನಾಡಿ, ಜಿನ ಭಜನೆ ಪರಿಕಲ್ಪನೆ, ಮಾತೆ ಅನಿತಾ  ಸುರೇಂದ್ರ ಕುಮಾರ ರವರ ಕನಸಿನ ಕೂಸು, ದಾವಣಗೆರೆ ಜೈನ ಸಮಾಜ ಬಲಿಷ್ಠ ವಾಗಿದ್ದು, ಇದರ ರೂವಾರಿ ಉಷಾ ಜಯಪ್ರಕಾಶ್ ರವರ ಕೊಡುಗೆಯನ್ನು ಸ್ಮರಿಸಿದರು.

    ಭಗವಂತನ ಸ್ಮರಣೆಯಿಂದ ನಮ್ಮ ಸಮಾಜ ಮುನ್ನಡೆಯುತ್ತಿದ್ದು, ಜಿನ ಭಜನೆ ಹೊಸ ಆಯಾಮ ನೀಡಿದೆ. ಇದರಿಂದ ಧರ್ಮ ಪ್ರಭಾವನೆಯಾಗಿ, ಮನೆ, ಮನ, ಸಮಾಜದಲ್ಲಿ ಪ್ರಭಾವ ಬೀರುತ್ತದೆ ಎಂದರು.

    ಕಾರ್ಯಕ್ರಮದಲ್ಲಿ ಭಾರತೀಯ  ಜೈನ್ ಮಿಲನ್ ದಾವಣಗೆರೆ ವಿಭಾಗದ ಅಧ್ಯಕ್ಷ ಶಾಂತರಾಜು  ವನಕುದುರೆ, ಆದಿನಾಥ ಜೈಮಿಲನ್ ಅಧ್ಯಕ್ಷ ಪ್ರವೀಣ್ ಸುದರ್ಶನ್ ಶ್ರೀ ಪದ್ಮಾಂಬ ಮಹಿಳಾ ಸಮಾಜದ  ಅಧ್ಯಕ್ಷರಾದ ಶ್ರೀಮತಿ ವರ್ಷಹೊಲಿ, ಪ್ರೀತಮ್ ದುಂಡಸಿ,  ಸಂತೋಷ್ ಜೈನ್ , ಅರಿಹಂತ್ ದುಂಡಣ್ಣನವರ್, ವಿಮಲ್ ಕುಮಾರ್ ಬೋಗಾರ್, ಆರ್. ಪದ್ಮರಾಜ್, ಪ್ರಸನ್ನ ಚಂದ್ರಪ್ರಭು ,ಚೇತನ ಪದ್ಮರಾಜ್ ಬರಿಗಾಲಿ ಇನ್ನಿತರರು ಭಾಗವಹಿಸಿದ್ದರು.

    ದಾವಣಗೆರೆ ವಿಭಾಗದ ಎಲ್ಲ ಜೈನ್ ಮಿಲನ್ ಗಳ ಅಧ್ಯಕ್ಷರು, ಉಪಾಧ್ಯಕ್ಷರುಗಳು, ಕಾರ್ಯದರ್ಶಿಗಳು, ಖಜಾಂಚಿಗಳು, ಹಾಗೂ ಪದಾಧಿಕಾರಿಗಳು,  ಶ್ರೀ ಮಹಾವೀರ ಸಂಘ, ಶ್ರೀ ಮಹಾವೀರ   ಯುವ ಮಂಚ್, ಶ್ರೀ ಪದ್ಮಾಂಬ ಜೈನ ಮಹಿಳಾ ಸಮಾಜ,ಅಭಿಕ್ಷಣ ಸ್ವಾಧ್ಯಾಯ ಮಂಡಳಿ, ದಾವಣಗೆರೆ ದಿಗಂಬರ ಜೈನ ಸಮಾಜ, ಸೇರಿದಂತೆ ವಿವಿಧ ಜೈನ ಸಂಘಟನೆಗಳು ಶ್ರಾವಕ ಶ್ರಾವತಿಯರು ಭಾಗವಹಿಸಿದ್ದರು.

    ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಕಾರ್ಯದರ್ಶಿ ಹರ್ಷ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.   ನಾಗಶ್ರೀ ಜಯಕೀರ್ತಿ ಸ್ವಾಗತಿಸಿದರು.  ಸವಿತಾ ಅಭಿನಂದನ್ ಮಂಗಳಾಚಾರಣೆ ನೆರವೇರಿಸಿದರು. ವಿನೋದ ವಂದಿಸಿದರು. ಈ ಜಿನ ಭಜನಾ ತಂಡದಲ್ಲಿ ದಾವಣಗೆರೆ ವಿಭಾಗದಿಂದ ಸುಮಾರು 60 ತಂಡಗಳು   ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.

    ವರದಿ: ಜೆ. ರಂಗನಾಥ, ತುಮಕೂರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

    admin
    • Website

    Related Posts

    ಔರಾದ್: ಸಂತಪುರ ಗುರುಕುಲ ಶಾಲೆಯಲ್ಲಿ ರಾಷ್ಟ್ರೀಯ ಬಾಯಿ ಹಲ್ಲು ತಪಾಸಣೆ ಶಿಬಿರ

    February 20, 2026

    ಬಳ್ಳಾರಿ: ದ್ವಿತೀಯ PUC–15,652 ವಿದ್ಯಾರ್ಥಿಗಳು, SSLC–23,271 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ

    February 20, 2026

    ಕಾರವಾರ: ಛತ್ರಪತಿ ಶಿವಾಜಿ ಜಯಂತಿ ಆಚರಣೆ

    February 20, 2026

    Comments are closed.

    Our Picks

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ವಿಕಲಚೇತನರಿಗೆ ರಾಜಕೀಯ ಮೀಸಲಾತಿಗೆ ಒತ್ತಾಯಿಸಿ ಪ್ರತಿಭಟನೆ: ಫೆ.22ರಂದು ತುಮಕೂರಿನಲ್ಲಿ ರ‍್ಯಾಲಿ

    February 21, 2026

    ತುಮಕೂರು: ವಿಕಲಚೇತನರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಶೇ.05ರಷ್ಟು ರಾಜಕೀಯ ಮೀಸಲಾತಿ ನೀಡಬೇಕು, ಬಜೆಟ್‌ ನಲ್ಲಿ ಹೆಚ್ಚುವರಿ ಅನುದಾನ ಸೇರಿದಂತೆ ವಿವಿಧ ಬೇಡಿಕೆಗಳ…

    ಹತ್ತೇನಹಳ್ಳಿ ಮಾರಮ್ಮನಿಗೆ ಹೊಸ ತಾಳಿ ಸಮರ್ಪಣೆ: ಭಕ್ತರಿಗೆ ಸಂಭ್ರಮ

    February 21, 2026

    ಸಾರ್ವಜನಿಕರ ರಸ್ತೆಗೆ ಕಾಂಪೌಂಡ್ ನಿರ್ಮಾಣ: ತೆರವಿಗೆ ಆಗ್ರಹಿಸಿ ತಹಶೀಲ್ದಾರ್‌ ಗೆ ಮನವಿ

    February 21, 2026

    ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರ ಖಾಯಂಗೆ ಒತ್ತಾಯಿಸಿ ಪ್ರತಿಭಟನೆ

    February 21, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.