ತಿಪಟೂರು: ತಾಲೂಕಿನ ಬಿದರೆಗುಡಿ ವಲಯದ ಗೋವಿನಪುರ ಕಾರ್ಯಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ ಸ್ಥಳೀಯ ಮುಖಂಡರಾದ ಮಂಜುನಾಥ್ ರವರು ಯೋಜನಾಧಿಕಾರಿ ಉದಯ್ ಕೆ. ರವರ ಉಪಸ್ಥಿತಿಯಲ್ಲಿ ನೂತನ ಗ್ರಾಹಕ ಕೇಂದ್ರವನ್ನು ಉದ್ಘಾಟಿಸಲಾಯಿತು.
ನಂತರ ಮಾತನಾಡಿದ ತಾಲೂಕಿನ ಯೋಜನಾಧಿಕಾರಿಗಳಾದ ಉದಯ ಕೆ., ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಾಲುದಾರ ಬಂಧುಗಳಿಗೆ ಉಪಯುಕ್ತವಾಗಲೆಂದು ಯೋಜನೆಯ ವತಿಯಿಂದ ಗ್ರಾಹಕ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಪ್ರಸ್ತುತ ಪಾಸ್ಪೋರ್ಟ್ ನೋಂದಾವಣಿ ಅಭಿಯಾನ ನಡೆಯುತ್ತಿದ್ದು, ಕೇವಲ ಸರಕಾರ ನಿಗದಿಪಡಿಸಿದ ಶುಲ್ಕ ರೂ 1,600/- ಕಡಿಮೆ ಮೊತ್ತದಲ್ಲಿ ಮಾಡಿಸಲಾಗುತ್ತಿದೆ. ಹಾಗೂ ಪಾಲುದಾರ ಬಂಧುಗಳ ಆರ್ಥಿಕ ಬದುಕು ಕಟ್ಟಿಕೊಳ್ಳಲು ಬ್ಯಾಂಕಿನ ಮುಖಾಂತರ ಸಾಲ ಸೌಲಭ್ಯದ ವ್ಯವಸ್ಥೆ, ಹಣ ಮರುಪಾವತಿಯ ಕರ್ತವ್ಯವು ಅಚ್ಚುಕಟ್ಟಾಗಿ ನಡೆಯುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಇದಲ್ಲದೆ ಪಾಲುದಾರ ಬಂಧುಗಳಿಗೆ ಹಾಗೂ ರೈತಪಿ ವರ್ಗದವರಿಗೆ ಉಪಯುಕ್ತವಾಗಲೆಂದು ಸರ್ಕಾರದ ಕಾರ್ಯಕ್ರಮಗಳಾದ ಆಯುಷ್ಮಾನ್, ಈ ಶ್ರಮ್ , ಸ್ವಉದ್ಯೋಗಕ್ಕೆ ಪೂರಕವಾದ ವಿಶ್ವಕರ್ಮ ಯೋಜನೆ ಹೀಗೆ ಹತ್ತು ಹಲವರು ಕಾರ್ಯಕ್ರಮಗಳನ್ನು ಗ್ರಾಮ ಮಟ್ಟದಲ್ಲಿ ಫಲಾನುಭವಿಗಳಿಗೆ ಒದಗಿಸಿ ಕೊಡಲಾಗುತ್ತಿದೆ.
ರೈತರಿಗೆ ಪ್ರಸ್ತುತ ಕೃಷಿಗೆ ಹಾಗೂ ಬೆಳೆ ವಿಮೆಗೆ ಸಂಬಂಧಿಸಿದ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ಬೆಳೆ ಹಾನಿಯಾದ ರೈತರಿಗೆ ನೋಂದಾವಣಿ ಮಾಡಲಾಗುವುದು ಜೊತೆಗೆ ಪಾನ್ ಕಾರ್ಡ್, ರಿಚಾರ್ಜ್, ಗ್ಯಾಸ್ ಬುಕಿಂಗ್, ಟಿಕೆಟ್ ಬುಕಿಂಗ್, ಸೂರ್ಯಾಗರ್ ಸೋಲಾರ್, ಹೀಗೆ ಹಲವು ಸೌಲಭ್ಯಗಳನ್ನು ಈ ಸೇವಾ ಕೇಂದ್ರಗಳಲ್ಲಿ ದೊರೆಯುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕಿ ಅನಿತಾ ಹಾಗೂ ಸೇವಾ ಪ್ರತಿನಿಧಿಗಳಾದ ತಾರ ಗಾಯತ್ರಿ ಒಕ್ಕೂಟದ ಪದಾಧಿಕಾರಿಗಳು ಹಾಗೂ ಪಾಲುದಾರ ಬಂಧುಗಳು ಉಪಸ್ಥಿತರಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296