nammatumakuru

    Subscribe to Updates

    Get the latest creative news from FooBar about art, design and business.

    What's Hot

    ದರೋಡೆಕೋರನಿಂದ ಆದಿಕವಿಯವರೆಗೆ; ಮಹರ್ಷಿ ವಾಲ್ಮೀಕಿಯವರ ಬದುಕಿನ ರೋಚಕ ಕಥೆ ಇಲ್ಲಿದೆ

    October 26, 2026

    ಅನ್ನ ನೀಡುವ ಭೂಮಿಗೆ ಕೃತಜ್ಞತೆ ಸಲ್ಲಿಸುವ ದಿನ; ಭೂಮಿ ಹುಣ್ಣಿಮೆಯ ಮಹತ್ವ ತಿಳಿಯಿರಿ

    October 26, 2026

    ನವೆಂಬರ್ 1 ರಿಂದ ‘ಮತ ಬಚಾವೋ ದೇಶ ಬಚಾವೋ’ ಅಭಿಯಾನ: ಕಾಂಗ್ರೆಸ್ ವಕ್ತಾರ ಬಾಲಕೃಷ್ಣ ಸ್ವಾಮಿ ಯಾದವ್

    October 26, 2026
    Facebook Twitter Instagram
    ಟ್ರೆಂಡಿಂಗ್
    • ದರೋಡೆಕೋರನಿಂದ ಆದಿಕವಿಯವರೆಗೆ; ಮಹರ್ಷಿ ವಾಲ್ಮೀಕಿಯವರ ಬದುಕಿನ ರೋಚಕ ಕಥೆ ಇಲ್ಲಿದೆ
    • ಅನ್ನ ನೀಡುವ ಭೂಮಿಗೆ ಕೃತಜ್ಞತೆ ಸಲ್ಲಿಸುವ ದಿನ; ಭೂಮಿ ಹುಣ್ಣಿಮೆಯ ಮಹತ್ವ ತಿಳಿಯಿರಿ
    • ನವೆಂಬರ್ 1 ರಿಂದ ‘ಮತ ಬಚಾವೋ ದೇಶ ಬಚಾವೋ’ ಅಭಿಯಾನ: ಕಾಂಗ್ರೆಸ್ ವಕ್ತಾರ ಬಾಲಕೃಷ್ಣ ಸ್ವಾಮಿ ಯಾದವ್
    • ಕೊರಟಗೆರೆ: ಮೋಹನ್‌ ಲಾಲ್ ಅವರ ಅಂತಿಮ ದರ್ಶನ ಪಡೆದ ಡಿಸಿಎಂ ಡಾ.ಜಿ. ಪರಮೇಶ್ವರ್
    • ಕ್ರೆಡಿಟ್ ಕಾರ್ಡ್ ಹೊಂದಿರುವ ಪತಿ ಮೃತಪಟ್ಟರೆ ಸಾಲವನ್ನು ಪತ್ನಿ ತೀರಿಸಬೇಕಾ? ಬ್ಯಾಂಕಿಂಗ್ ನಿಯಮಗಳೇನು?
    • PM Kisan ಹಣ ಯಾವಾಗ ಬರುತ್ತೆ? ರೈತರು ಈ ಕೆಲಸಗಳನ್ನು ಮಾಡದಿದ್ದರೆ ಕಂತು ಸ್ಥಗಿತವಾಗಬಹುದು!
    • JEE Main 2027 ವೇಳಾಪಟ್ಟಿ ಪ್ರಕಟ: ಪರೀಕ್ಷೆ ಯಾವಾಗ? ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಯಾವುದು?
    • ಜೆನ್ ಝಿ ಭಾಷೆಯಲ್ಲಿ ‘ರೆಡ್ ಫ್ಲ್ಯಾಗ್’, ‘ಗ್ರೀನ್ ಫ್ಲ್ಯಾಗ್’ ಎಂದರೇನು? ವ್ಯಕ್ತಿಯ ಗುಣ ಗುರುತಿಸಲು ಯುವಜನರ ಹೊಸ ಟ್ರೆಂಡ್!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕಳಪೆ ದರ್ಜೆಯ ಜೈವಿಕ ಪ್ರಚೋದಕ ಪರಿಕರಗಳ ಮಾರಾಟ: ದಾಸ್ತಾನು ಜಪ್ತಿ
    ತುಮಕೂರು November 27, 2024

    ಕಳಪೆ ದರ್ಜೆಯ ಜೈವಿಕ ಪ್ರಚೋದಕ ಪರಿಕರಗಳ ಮಾರಾಟ: ದಾಸ್ತಾನು ಜಪ್ತಿ

    By adminNovember 27, 2024No Comments1 Min Read
    nagalamadike

    ತುಮಕೂರು: ಜಿಲ್ಲೆಯ ಪಾವಗಡ ತಾಲ್ಲೂಕು ನಾಗಲಮಡಿಕೆ ಗ್ರಾಮದ ಎಸ್.ಆರ್.ಎಂಟರ್ ಪ್ರೈಸಸ್ ಮಳಿಗೆಯಲ್ಲಿ ಮಾರಾಟ ಮಾಡಲಾಗುತ್ತಿದ್ದ ಕಳಪೆ ದರ್ಜೆಯ 2 ಜೈವಿಕ ಪ್ರಚೋದಕ(ಜೈವಿಕ/ಸಾವಯವ) ಪರಿಕರಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಪುಟ್ಟರಂಗಪ್ಪ ತಿಳಿಸಿದ್ದಾರೆ.

    ಜಪ್ತಿ ಮಾಡಲಾದ ಪರಿಕರಗಳಲ್ಲಿ ಹೆಚ್ಚಿನ ಪ್ರಮಾಣದ ಕೀಟನಾಶಕ ಅಂಶಗಳಿರುವ ಬಗ್ಗೆ ವಿಶ್ಲೇಷಣಾ ಪ್ರಯೋಗಾಲಯಗಳ ವರದಿಯಿಂದ ದೃಢಪಟ್ಟಿರುವುದರಿಂದ ಕೃಷಿ ಇಲಾಖೆಯ ಜಾರಿದಳ ವಿಭಾಗದಿಂದ ಕಳಪೆ ದರ್ಜೆಯ ಪರಿಕರಗಳನ್ನು ಜಪ್ತಿ ಮಾಡಿ ಇಲಾಖೆ ವಶಕ್ಕೆ ಪಡೆಯಲಾಗಿದೆ.

    ಕೃಷಿ ಇಲಾಖೆಯ ಜಾರಿದಳ ವಿಭಾಗವು ನವೆಂಬರ್ 25ರಂದು ಎಸ್.ಆರ್.ಎಂಟರ್ ಪ್ರೈಸಸ್ ಮಾರಾಟ ಮಳಿಗೆ ಮೇಲೆ ದಾಳಿ ಮಾಡಿ ನಿಯಮಾನುಸಾರ ಪರಿಶೀಲಿಸಿದಾಗ, ಅಂದಾಜು 29,400 ರೂ. ಮೌಲ್ಯದ 4.90 ಲೀಟರ್ ಪ್ರಮಾಣದ ಹೈದರಾಬಾದ್ ಉತ್ಪಾದಕ ಕಂಪನಿಗಳಾದ ಆಸ್ಕರ್ ಕ್ರಾಪ್ ಕೇರ್ ಹಾಗೂ ವಾಯು ಎಂಬ 2 ಜೈವಿಕ ಪರಿಕರ ಮಾದರಿಗಳನ್ನು ಅನುಮತಿ ಪಡೆಯದೆ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ.
    ಕಳೆದ ಬಾರಿ ಕ್ಷೇತ್ರ ಭೇಟಿ ಸಂದರ್ಭದಲ್ಲಿ ಸಂಶಯಾಸ್ಪದ ಹಿನ್ನೆಲೆಯಲ್ಲಿ ಕೀಟನಾಶಕ ತೇಷಾಂಶ ವಿಶ್ಲೇಷಣೆಗಾಗಿ ಗುಣಮಟ್ಟ ಖಾತ್ರಿಗಾಗಿ 2 ಪ್ರಯೋಗಾಲಯಗಳಿಗೆ ಕಳುಹಿಸಿಕೊಡಲಾಗಿತ್ತು. ಪ್ರಯೋಗಾಲಯಗಳ ವಿಶ್ಲೇಷಣಾ ವರದಿಯನ್ವಯ ಜಪ್ತಿ ಮಾಡಲಾದ ಜೈವಿಕ ಪರಿಕರದಲ್ಲಿ ಕ್ರಮವಾಗಿ ಘೋಷಿತ ಕೀಟನಾಶಕಗಳಾದ ಥಯೋಮೆತಾಕ್ಸಾಮ್ ಮತ್ತು ಹಿಮಾಮೆಕ್ಟಿನ್ ಬೆಂಜೋಯೇಟ್ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿರುವುದು ದೃಢಪಟ್ಟಿದೆ.

    ರಸಗೊಬ್ಬರ ಮಾರಾಟ ನಿಯಮಗಳನ್ನು ಉಲ್ಲಂಘನೆ ಮಾಡಿರುವುದರಿಂದ ಎಸ್.ಆರ್. ಎಂಟರ್ ಪ್ರೈಸಸ್ ಮಳಿಗೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ದಾಳಿಯಲ್ಲಿ ಸಹಾಯಕ ಕೃಷಿ ನಿರ್ದೇಶಕ(ಜಾರಿದಳ-2) ಅಶ್ವತ್ಥನಾರಾಯಣ ವೈ., ಕೃಷಿ ಅಧಿಕಾರಿ ಶಂಷದ್ ಉನ್ನಿಸಾ ಅವರು ಪಾಲ್ಗೊಂಡಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

     

    admin
    • Website

    Related Posts

    ಬಸವರಾಜ್ ಕನ್ನಾಳೆಗೆ ತುಮಕೂರು ವಿವಿಯಿಂದ ಶಾಕ್‌; ಸಿಂಡಿಕೇಟ್ ಸ್ಥಾನದಿಂದ ವಜಾ

    October 25, 2026

    ತುಮಕೂರಿನಲ್ಲಿ ತುಮುಲ್ ನೇಮಕಾತಿ ವಿವಾದಕ್ಕೆ ಹೊಸ ತಿರುವು; 31 ಅಭ್ಯರ್ಥಿಗಳಿಂದ ಕಾನೂನು ಹೋರಾಟಕ್ಕೆ ಸಿದ್ಧತೆ!

    October 25, 2026

    ತುಮಕೂರಿನಲ್ಲಿ ಚಿರತೆ ಹಿಡಿಯಲು ಹೋದ ಅರಣ್ಯಾಧಿಕಾರಿಗಳಿಗೆ ಗ್ರಾಮಸ್ಥರಿಂದಲೇ ಅಡ್ಡಿ? 15 ಮಂದಿ ವಿರುದ್ಧ ಪೊಲೀಸ್ ಪ್ರಕರಣ!

    October 25, 2026

    Comments are closed.

    Our Picks

    ಕ್ರೆಡಿಟ್ ಕಾರ್ಡ್ ಹೊಂದಿರುವ ಪತಿ ಮೃತಪಟ್ಟರೆ ಸಾಲವನ್ನು ಪತ್ನಿ ತೀರಿಸಬೇಕಾ? ಬ್ಯಾಂಕಿಂಗ್ ನಿಯಮಗಳೇನು?

    October 26, 2026

    PM Kisan ಹಣ ಯಾವಾಗ ಬರುತ್ತೆ? ರೈತರು ಈ ಕೆಲಸಗಳನ್ನು ಮಾಡದಿದ್ದರೆ ಕಂತು ಸ್ಥಗಿತವಾಗಬಹುದು!

    October 26, 2026

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ!  ಹವಾಮಾನ ಇಲಾಖೆಯಿಂದ ಮಹತ್ವದ ಸೂಚನೆ ಇಲ್ಲಿದೆ

    October 24, 2026

    ಪ್ರಧಾನಿ ಮೋದಿ ಯಾವ ಮೊಬೈಲ್ ಬಳಸುತ್ತಾರೆ? ರಹಸ್ಯ ಫೋನ್‌ ಹಿಂದಿನ ಸತ್ಯವೇನು?

    October 24, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಲೇಖನ

    ದರೋಡೆಕೋರನಿಂದ ಆದಿಕವಿಯವರೆಗೆ; ಮಹರ್ಷಿ ವಾಲ್ಮೀಕಿಯವರ ಬದುಕಿನ ರೋಚಕ ಕಥೆ ಇಲ್ಲಿದೆ

    October 26, 2026

    ಮಹರ್ಷಿ ವಾಲ್ಮೀಕಿಯವರ ಜಯಂತಿಯನ್ನು ಇಂದು (ಅಕ್ಟೋಬರ್ 26, ಸೋಮವಾರ) ದೇಶದಾದ್ಯಂತ ಆಚರಿಸಲಾಗುತ್ತಿದೆ. ಸಂಸ್ಕೃತದ ಆದಿಕವಿ ಎಂದೇ ಪ್ರಸಿದ್ಧರಾದ ಮಹರ್ಷಿ ವಾಲ್ಮೀಕಿಯವರು…

    ಅನ್ನ ನೀಡುವ ಭೂಮಿಗೆ ಕೃತಜ್ಞತೆ ಸಲ್ಲಿಸುವ ದಿನ; ಭೂಮಿ ಹುಣ್ಣಿಮೆಯ ಮಹತ್ವ ತಿಳಿಯಿರಿ

    October 26, 2026

    ನವೆಂಬರ್ 1 ರಿಂದ ‘ಮತ ಬಚಾವೋ ದೇಶ ಬಚಾವೋ’ ಅಭಿಯಾನ: ಕಾಂಗ್ರೆಸ್ ವಕ್ತಾರ ಬಾಲಕೃಷ್ಣ ಸ್ವಾಮಿ ಯಾದವ್

    October 26, 2026

    ಕೊರಟಗೆರೆ: ಮೋಹನ್‌ ಲಾಲ್ ಅವರ ಅಂತಿಮ ದರ್ಶನ ಪಡೆದ ಡಿಸಿಎಂ ಡಾ.ಜಿ. ಪರಮೇಶ್ವರ್

    October 26, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.