ಹಸುವನ್ನು ಎಲ್ಲರೂ ಶುದ್ಧ ಸಸ್ಯಾಹಾರಿ ಅಂತ ಅಂದುಕೊಂಡಿದ್ದೇವೆ ಆದ್ರೆ, ಕೆಲವೊಮ್ಮೆ ಹಸುಗಳು ಮಾಂಸವನ್ನೂ ತಿನ್ನಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಹಸುವೊಂದು ಕೋಳಿಯನ್ನು ಜೀವಂತವಾಗಿ ಜಗಿಯುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ನೋಡಿ ಜನರು ಅಚ್ಚರಿಗೀಡಾಗಿದ್ದಾರೆ.
ಈ ವಿಡಿಯೋ ಹಳೆಯ ವಿಡಿಯೋವಾಗಿದ್ದರೂ, ಇದೀಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ. ಹಸು ಸಸ್ಯಾಹಾರಿ, ಈ ವಿಡಿಯೋ ಆಘಾತಕಾರಿಯಾಗಿದೆ ಅಂತ ಕೆಲವು ಸಸ್ಯಾಹಾರಿಗಳು ಈ ವಿಡಿಯೋವನ್ನ ಪೋಸ್ಟ್ ಮಾಡಿದವರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಉರಿದು ಬೀಳುತ್ತಿರುವುದನ್ನು ನೋಡಬಹುದಾಗಿದೆ.
ಮೂಕ ಪ್ರಾಣಿಗಳಿಗೆ ಹಸಿವಿನ ಚಿಂತೆಯೇ ಹೊರತು, ಮಾಂಸವೋ ಸಸ್ಯವೋ ಅನ್ನೋದಲ್ಲ. ಪ್ರಕೃತಿ ದತ್ತವಾಗಿ ಹಸು ಸಸ್ಯಾಹಾರಿ ಪ್ರಾಣಿ. ಯಾಕೆಂದರೆ ಹಸು ಚಪ್ಪಟೆ ಹಲ್ಲನ್ನು ಹೊಂದಿದೆ. ಕೋರೆ ಹಲ್ಲು ಹೊಂದಿರುವ ಪ್ರಾಣಿಗಳು ಮಾತ್ರವೇ ಮಾಂಸಾಹಾರ ಅಥವಾ ಮಿಶ್ರಾಹಾರಿಗಳಾಗಿರಲು ಸಾಧ್ಯ. ಹೀಗಾಗಿ ಹಸು ಕೋಳಿಯನ್ನ ಜಗಿಯುತ್ತಿರುವ ದೃಶ್ಯ ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ.
ಅಪರೂಪಕ್ಕೆ ಇಂತಹ ಘಟನೆಗಳಾಗುವುದು ಸಹಜ, ಯಾಕೆಂದ್ರೆ ಪ್ರಾಣಿಗಳಿಗೆ ಸಸ್ಯಾಹಾರ ಮತ್ತು ಮಾಂಸಾಹಾರಗಳೆಂಬ ಸಿದ್ಧಾಂತಗಳು ಗೊತ್ತಿಲ್ಲ, ಆಹಾರವನ್ನು ಆಹಾರವಾಗಿ ಸ್ವೀಕರಿಸುತ್ತದೆ ಎಂದು ಹೇಳಬಹುದಷ್ಟೆ…
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx