ಬಲ್ಗೇರಿಯಾ… ಯೂರೋಪ್ ಅತ್ಯಂತ ಪ್ರಾಚೀನ ಹಾಗೂ ಸುಂದರ ದೇಶ…!!
ಅಧಿಕೃತ ಹೆಸರು ಬರಿಪಬ್ಲಿಕ್ ಆಫ್ ಬಲ್ಗೇರಿಯಾ..
ಬಲ್ಗೇರಿಯಾದ ರಾಜಧಾನಿ – ಸೋಫಿಯಾ ಸಿಟಿ
ರಷ್ಯಾ, ಟರ್ಕಿ , ಉಕ್ರೇನ್ , ರೊಮಾನಿಯಾದ ಜೊತೆಗೆ ಈ ದೇಶ ತನ್ನ ಗಡಿ ಹಂಚಿಕೊಂಡಿದೆ.
ಬಲ್ಗೇರಿಯಾ ( ವಿಸ್ತೀರ್ಣದಲ್ಲಿ ) ವಿಶ್ವದ 105 ಹಾಗೂ ಯೂರೋಪ್ ನ 16 ನೇ ದೊಡ್ಡ ದೇಶ.
ಆಕಾರ ವಿಸ್ತೀರ್ಣದಲ್ಲಿ ನೋಡುವುದಾದ್ರೆ ತಮ್ಮ ದೇಶದ ತೆಲಂಗಾಣಾ ರಾಜ್ಯದಷ್ಟು ಈ ದೇಶ ದೊಡ್ಡದಿದೆ.
ಸುಮಾರು 70 ಲಕ್ಷ ಜನಸಂಖ್ಯೆ ಹೊಂದಿರುವ ದೇಶ. ಕಡಿಮೆ ಜನಸಂಖ್ಯೆ ಹೊಂದಿರುವುದು ಈ ದೇಶ ಶ್ರೀಮಂತ ಹಾಗೂ ಅಭಿವೃದ್ಧಿ ದೇಶ ಎನಿಸಿಕೊಳ್ಳಲು ಪ್ರಮುಖ ಕಾರಣ.
ಈ ದೇಶದ ಲಿಟ್ರೆಸಿ ರೇಟ್ 92 % ಸ್ಥಾಪನೆಯಾದಾಗಿನಿಂದ ಹಿಡಿದು ಇಲ್ಲಿಯ ವರೆಗೂ ಸಹ ಹೆಸರು ಬದಲಾಯಿಸಿದ ವಿಶ್ವದ ಏಕಮಾತ್ರ ರಾಷ್ಟ್ರ ಬಲ್ಗೇರಿಯಾ. ಈ ದೇಶದಲ್ಲಿ 80 % ರಷ್ಟು ಜನ ಕ್ರೈಸ್ತರು , ಸುಮಾರು 10 ರಷ್ಟು ಮುಸ್ಲಿಮರು , ಬಾಕಿ ಇತರೇ ಧರ್ಮದ ಜನರಿದ್ದಾರೆ.
ಆಟೋಮನ್ ಸಾಮ್ರಾಜ್ಯದ ವಶದಲ್ಲಿದ್ದ ಬಲ್ಗೇರಿಯಾಗೆ 1908ರಲ್ಲಿ ಸ್ವತಂತ್ರ್ಯ ಸಿಕ್ಕಿತ್ತು. 90 % ರಷ್ಟು ಜನರು ಮಾತನಾಡುವ ಬಾಷೆ ಬಲ್ಗೇರಿಯನ್.. ಇದರ ಹೊರತಾಗಿ ಇಲ್ಲಿನ ಜನರು , ಟರ್ಕಿಶ್ , ಇಂಗ್ಲಿಷ್ , ಫ್ರೆಂಚ್ , ರೋಮೇನಿಯನ್ , ಜರ್ಮನ್ ಭಾಷೆಗಳನ್ನೂ ಮಾತನಾಡ್ತಾರೆ.
ಬಲ್ಗೇರಿಯಾದ ಸೆಟಾರಾ ಪ್ಲೆನೀನಾ , ಶೃದಾರಾ ಗೋರಾ ಮೌಂಟೆನ್ಸ್ ನಲ್ಲಿ ಸ್ಥಿತವಾಗಿರುವ ರೋಸ್ ವಾಲಿಯಲ್ಲಿ ಇಡೀ ವಿಶ್ವದ ಅರ್ಧಕ್ಕಿಂತ ಹೆಚ್ಚು ರೋಸ್ ಆಯಿಲ್ ಉತ್ಪಾದನೆ ಮಾಡಿ ವಿಶ್ವಾದ್ಯಂತ ರಫ್ತು ಮಾಡಲಾಗುತ್ತೆ.. ಇದ್ರಿಂದ ಪರ್ಫ್ಯೂಮ್ , ಕಾಸ್ಮೆಟಿಕ್ಸ್ ಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಬಲ್ಗೇರಿಯಾದ 1 /3 ರಷ್ಟು ಬಾಗ ದಟ್ಟಾರಣ್ಯದಿಂದ ಕೂಡಿದೆ.
ಸಾಂಸ್ಕೃತಿಕ ತಾಣಗಳು , ಬೀಚ್ ಗಳು , ಪ್ರಾಚೀನ ಚರ್ಚ್ ಗಳು ಇನ್ನೂ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳು , ನೈ ಕ್ಲಬ್ಸ್ ಗಳು ಬಲ್ಗೇರಿಯಾದಲ್ಲಿವೆ. ಇವುಗಳ ಹೊರತಾಗಿ ಸೆಂಟ್ರಲ್ ಬಾಲ್ಕನ್ ನ್ಯಾಷನಲ್ ಪಾರ್ಕ್ , ನೇಚರ್ ಪಾರ್ಕ್ ಬುಲ್ಗಾಕಾ, ರೀಲಾ ನ್ಯಾಷನಲ್ ಪಾರ್ಕ್ ಗಳು ತುಂಬಾ ಫೇಮಸ್. ಇಲ್ಲಿನ ಸನ್ನಿ ಬೀಚ್ ದೇಶದ ದೊಡ್ಡ ಸಮುದ್ರಿ ತಟ ಹೊಂದಿದ್ದು ಪ್ರವಾಸಿಗರೂ ಫೇಮಸ್ ತಾಣವೂ ಆಗಿದೆ.
ಬಲ್ಗೇರಿಯನ್ ನ ಧ್ವಜವು ಭಾರತದ ಧ್ವಜದಂತೆಯೇ ಮೂರು ಬಣ್ಣಗಳಿಂದ ಕೂಡಿದೆ.. ಬಿಳಿ, ಹಸಿರು, ಕೆಂಪು..
ಬಲ್ಗೇರಿಯ ಏರ್ ಫೋರ್ಸ್ ನ ಮಹಿಳಾ ಪೈಲೆಟ್ ರೈನಾ ವಾಸಿಲೆವಾ ಕಸಬೊವಾ ವಿಶ್ವದ ವಿಶ್ವದ ಮೊದಲ ಏರ್ ಫೋರ್ಸ್ ಫೇಮೇಲ್ ಫೈಲೆಟ್ ಆಗಿದ್ದವರು.
ವಿಶ್ವದ ಐಕ್ಯೂ ಟೆಸ್ಟ್ ನಲ್ಲಿ ಬಲ್ಗೇರಿಯಾಗೆ 2ನೇ ಸ್ಥಾನ ಸಿಕ್ಕಿದೆ.
ವಿಶ್ವಕ್ಕೆ ಮೊದಲ ಎಲೆಕ್ಟ್ರಾನಿಕ್ ಡಿಜಿಟಲ್ ಕಂಪ್ಯೂಟರ್ ನೀಡಿದ ಜಾನ್ ವೆನ್ಸೆನ್ ಅವರು ಸಹ ಬಲ್ಗೇರಿಯಾ ಮೂಲದವರೇ.
ಇಲ್ಲಿನ ಸ್ತಾರಾ ಜಗೋರಾ ಎಂಬಲ್ಲಿ ಮೂರು ವರ್ಷಕ್ಕೊಮ್ಮೆ ವಧು , ಮದುಮಗಳ ಮೇಳ ಏರ್ಪಡಿಸಲಾಗುತ್ತದೆ. ಇಲ್ಲಿ ವರ ತನ್ನಿಷ್ಟದ ವಧುವನ್ನ ಖರೀದಿಸಿ ಮದುವೆಯಾಗಬಹುದು.
ಪ್ರತ್ಯೇಕ ಸಮುದಾಯದ ನಡುವೆ ಈ ಪರಂಪರೆ ಇದ್ದು, ಕುಟುಂಬಸ್ಥರು ತಮ್ಮ ಮನೆಯ ಮದುವೆಯಾಗದ ಹೆಣ್ಣುಮಕ್ಕಳನ್ನ ಹರಾಜಿಗಿಡುತ್ತಾರೆ.. ಇದು ಬಹಳ ವರ್ಷಗಳಿಂದಲೂ ನಡೆದುಕೊಂಡು ಬಂದಿದೆ.
ಆದ್ರೆ ಮೂಲಗಳ ಪ್ರಕಾರ ಈ ಪರಂಪರೆಯ ಹೆಸರಲ್ಲಿ ಕೆಲವರು ಅನ್ಯ ಹುಡುಗೀಯರನ್ನೂ ಬಲವಂತವಾಗಿ ಮಾರಾಟ ಮಾಡ್ತಿದ್ದಾರೆ ಎನ್ನಲಾಗ್ತಿದೆ.. ಹೀಗಾಗಿ ಇಲ್ಲಿನ ಸರ್ಕಾರ ಶೀಘ್ರವೇ ಈ ಪರಂಪರೆಯನ್ನ ಬ್ಯಾನ್ ಮಾಡಲಿದೆ ಎನ್ನಲಾಗಿದೆ.
ಬಲ್ಗೇರಿಯಾದ ಕರೆನ್ಸಿ – ಬಲ್ಗೇರಿಯನ್ ಲೆವ್ – ಒಂದು ಬಲ್ಗೇರಿಯನ್ ಲೆವ್ ಭಾರತದ 40 – 45 ರೂಗಳಿಗೆ ಸಮ..ಬಲ್ಗೇರಿಯಾದಲ್ಲಿ ತೋಳಗಳು ಹಾಗೂ ಬಿಳಿ ಕರಡಿಗಳು ದೊಡ್ಡ ಸಂಖ್ಯೆಯಲ್ಲಿವೆ.
ವರದಿ :ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy