ತುಮಕೂರು: ಸಿದ್ದಗಂಗಾ ಮಠದ ಆವರಣದಲ್ಲಿ ಚಿರತೆಯೊಂದು ರಾತ್ರಿ ಪ್ರತ್ಯಕ್ಷವಾಗಿರುವ ದೃಶ್ಯ ಆತಂಕ ಮೂಡಿಸಿದೆ.
ತುಮಕೂರಿನ ಕ್ಯಾತಸಂದ್ರದಲ್ಲಿ ಇರುವ ಸಿದ್ದಗಂಗ ಮಠದ ಹಳೆಮಠದ ಆವರಣದಲ್ಲಿ ಕಾಣಿಸಿಕೊಂಡ ಚಿರತೆ ಅಲ್ಲಿದ್ದ ನಾಯಿಗಳನ್ನು ಅಟ್ಟಾಡಿಸಿದೆ.
ಚಿರತೆ ಮಠದ ಆವರಣದಲ್ಲಿ ಓಡಾಡುತ್ತಿರುವಂತಹ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಶನಿವಾರ ರಾತ್ರಿ 11:30 ಸಂದರ್ಭದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ನಾಯಿಗಳನ್ನ ಬೇಟೆಯಾಡಲು ಯತ್ನಿಸುತ್ತಿರುವ ದೃಶ್ಯ ಕಂಡು ಬಂತು. ಮಠದ ಮಕ್ಕಳಲ್ಲಿ ಚಿರತೆ ಓಡಾಟ ಆತಂಕ ಮೂಡಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx