ತುಮಕೂರು: ಬೆಸ್ಕಾಂ ಕಂಪನಿಯು ಜಂಪ್ ಬದಲಿಸುವ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಟಿ.ಎಂ.ಟಿ.ಪಿ., ಕೋರಾ, ಅಂಕಸಂದ್ರ, ಹೊಸಕೆರೆ, ಹಾಗಲವಾಡಿ, ನಂದಿಹಳ್ಳಿ ಕ್ರಾಸ್, ಚೇಳೂರು ಉಪಸ್ಥಾವರದಿಂದ ಹೊರಹೊಮ್ಮುವ ಎಲ್ಲಾ 11ಕೆವಿ ಪೂರಕಗಳಿಗೆ ಒಳಪಡುವ ಗ್ರಾಮಗಳಲ್ಲಿ ಡಿಸೆಂಬರ್ 11ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಕಡಿತ ಉಂಟಾಗಲಿದೆ.
ಅದೇ ರೀತಿ ಡಿಸೆಂಬರ್ 13, 17, 19ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಟಿ.ಎಂ.ಟಿ.ಪಿ., ಕೋರಾ, ಅಂಕಸಂದ್ರ ಉಪಸ್ಥಾವರದಿಂದ ಹೊರಹೊಮ್ಮುವ ಎಲ್ಲಾ 11ಕೆವಿ ಪೂರಕಗಳಿಗೆ ಒಳಪಡುವ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ.
ಗುಬ್ಬಿ : 6 ದಿನಗಳ ಕಾಲ ವಿದ್ಯುತ್ ಕಡಿತ
ತುಮಕೂರು: ಬೆಸ್ಕಾಂ ಗುಬ್ಬಿ ಉಪವಿಭಾಗ ವ್ಯಾಪ್ತಿಯಲ್ಲಿ ಲಿಂಕ್ ಲೈನ್ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಕಲ್ಲೂರು, ಬಂಡಿಹಳ್ಳಿ, ಬೆನಕನಗೊಂದಿ, ಕೆ.ಕಲ್ಲಹಳ್ಳಿ, ಪೆದ್ದನಹಳ್ಳಿ, ಮಾದಪಟ್ಟಣ, ಪಡುಗುಡಿ, ಹಿಂಡಿಸಿಗೆರೆ, ಹುಲ್ಲೇಕೆರೆ, ಬಿಟ್ಟಗೊಂಡನಹಳ್ಳಿ, ಶನಿವಾರನಪಾಳ್ಯ, ವರಹಸಂದ್ರ, ಬೋಚಿಹಳ್ಳಿ ಪ್ರದೇಶಗಳಲ್ಲಿ ಡಿಸೆಂಬರ್ 9, 11, 13, 15, 18 ಹಾಗೂ 20ರಂದು ವಿದ್ಯುತ್ ಕಡಿತ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx