ಬೆಂಗಳೂರು: ಎಸ್.ಎಂ.ಕೃಷ್ಣ ಆಧುನಿಕ ಕರ್ನಾಟಕದ ಮಹಾನ್ ಶಿಲ್ಪಿ, ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಅವರು ಸಹಕಾರ ನೀಡದ ಇಲಾಖೆ, ವರ್ಗ ಇಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಬಣ್ಣಿಸಿದ್ದಾರೆ.
ವಿಧಾನಸಭೆಯಲ್ಲಿಂದು ಸಂತಾಪ ನಿರ್ಣಯ ವೇಳೆ ಮಾತನಾಡಿದ ಅವರು, ಎಸ್.ಎಂ.ಕೃಷ್ಣ ಅವರು ಕೇವಲ ಐಟಿ–ಬಿಟಿ ವಲಯಕ್ಕೆ ಉತ್ತೇಜನ ನೀಡಲಿಲ್ಲ. ಸಮಗ್ರ ಕರ್ನಾಟಕದ ಅಭಿವೃದ್ಧಿಗೂ ಆದ್ಯತೆ ನೀಡಿದ್ದರು ಎಂದು ಅವರು ತಿಳಿಸಿದರು.
ಎಸ್.ಎಂ.ಕೃಷ್ಣ ಅವರು ತಂದೆ ಮಗನನ್ನು ಪೋಷಿಸುವಂತೆ ನನ್ನನ್ನು ಬೆಂಬಲಿಸಿದರು. ನನಗೂ ಅವರಿಗೂ ಒಂದೆರಡು ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿದ್ದವು. ಈಗಲೂ ಆ ನಿರ್ಧಾರಗಳು ಸರಿಯಲ್ಲ ಎಂದು ಹೇಳುತ್ತೇನೆ. ಉಳಿದಂತೆ ನಮ್ಮಿಬ್ಬರ ಸಂಬಂಧ ಅವಿನಾಭಾವದಿಂದಿತ್ತು ಎಂದು ಅವರು ಹೇಳಿದರು.
ಎಸ್.ಎಂ.ಕೃಷ್ಣ ಅವರ ಸಾವು ನನಗೆ ದುಃಖ ತಂದಿಲ್ಲ. ಬದಲಾಗಿ ಸಂತೋಷ ತಂದಿದೆ. 92 ವರ್ಷ ತುಂಬಿದ ಜೀವನದಲ್ಲಿ ಮೂರ್ನಾಲ್ಕು ತಿಂಗಳಷ್ಟೇ ಅವರು ಅನಾರೋಗ್ಯದಲ್ಲಿದ್ದರು. ಉಳಿದಂತೆ ಅವರ ಉಡುಪು, ಜೀವನಶೈಲಿ ಎಲ್ಲವೂ ವರ್ಣನೀಯವಾಗಿತ್ತು ಎಂದು ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx