nammatumakuru

    Subscribe to Updates

    Get the latest creative news from FooBar about art, design and business.

    What's Hot

    ವಾಟರ್ ಹೀಟರ್ ಬಳಸುವಾಗ ಜೀವಕ್ಕೆ ಕುತ್ತು ಬರಬಹುದು! ಪಾಲಿಸಲೇಬೇಕಾದ ಮುನ್ನೆಚ್ಚರಿಕೆಗಳಿವು…!

    January 9, 2026

    ದಾಖಲೆ ಬರೆದ ಯಶ್ ‘ಟಾಕ್ಸಿಕ್’ ಟೀಸರ್; ಹಸಿಬಿಸಿ ದೃಶ್ಯ ಕಂಡು ಪ್ರೇಕ್ಷಕ ಶಾಕ್!

    January 9, 2026

    ಚಳಿಗಾಲದ ಸಿಹಿ ತಿನಿಸು ‘ಬೀಟ್‌ರೂಟ್ ಹಲ್ವಾ’: ರುಚಿಯ ಜೊತೆಗೆ ಆರೋಗ್ಯಕ್ಕೂ ಇದು ವರ!

    January 9, 2026
    Facebook Twitter Instagram
    ಟ್ರೆಂಡಿಂಗ್
    • ವಾಟರ್ ಹೀಟರ್ ಬಳಸುವಾಗ ಜೀವಕ್ಕೆ ಕುತ್ತು ಬರಬಹುದು! ಪಾಲಿಸಲೇಬೇಕಾದ ಮುನ್ನೆಚ್ಚರಿಕೆಗಳಿವು…!
    • ದಾಖಲೆ ಬರೆದ ಯಶ್ ‘ಟಾಕ್ಸಿಕ್’ ಟೀಸರ್; ಹಸಿಬಿಸಿ ದೃಶ್ಯ ಕಂಡು ಪ್ರೇಕ್ಷಕ ಶಾಕ್!
    • ಚಳಿಗಾಲದ ಸಿಹಿ ತಿನಿಸು ‘ಬೀಟ್‌ರೂಟ್ ಹಲ್ವಾ’: ರುಚಿಯ ಜೊತೆಗೆ ಆರೋಗ್ಯಕ್ಕೂ ಇದು ವರ!
    • ವಿಬಿ–ಜಿ ರಾಮ್ ಜಿ ಯೋಜನೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ: ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಆಕ್ರೋಶ
    • ತಿಪಟೂರು: ಬೀದಿ ನಾಯಿಗಳ ಹಾವಳಿ ತಡೆಗೆ ಅಧಿಕಾರಿಗಳಿಗೆ ಉಪವಿಭಾಗಾಧಿಕಾರಿ ಸೂಚನೆ
    • ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ಕೆ.ಎನ್. ರಾಜಣ್ಣ
    • ಕೊರಟಗೆರೆ | ಶಾಲಾ ಮಕ್ಕಳಿಗೆ ಟ್ರ್ಯಾಕ್ಸ್ ಶೂಟ್ ವಿತರಣೆ
    • ಶಬರಿಮಲೆ ದರ್ಶನ ಮುಗಿಸಿ ಮರಳುವಾಗ ಭೀಕರ ಅಪಘಾತ: 7 ವರ್ಷದ ಮಗು ಸೇರಿ ನಾಲ್ವರು ದುರ್ಮರಣ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » “ಅಮೃತ ಮಹೋತ್ಸವದ ಮಹಾ ಮಸ್ತಕಾಭಿಷೇಕ ಸಂಭ್ರಮದಲ್ಲಿ ಶ್ರೀ ಕ್ಷೇತ್ರ ಗೊಮ್ಮಟ ಗಿರಿ ಶ್ರೀಬಾಹುಬಲಿ”
    ಲೇಖನ December 12, 2024

    “ಅಮೃತ ಮಹೋತ್ಸವದ ಮಹಾ ಮಸ್ತಕಾಭಿಷೇಕ ಸಂಭ್ರಮದಲ್ಲಿ ಶ್ರೀ ಕ್ಷೇತ್ರ ಗೊಮ್ಮಟ ಗಿರಿ ಶ್ರೀಬಾಹುಬಲಿ”

    By adminDecember 12, 2024No Comments3 Mins Read
    bahubali
    • ಜೆ. ರಂಗನಾಥ, ತುಮಕೂರು

    ಸುತ್ತಲೂ ಅಚ್ಚಹಸಿರು, ಅಲ್ಲಲ್ಲಿ ಜಲ ರಾಶಿ, ಈ ಮಧ್ಯೆ ಹಾಸು ಹೊಕ್ಕಾದ ಬೃಹತ್ ಕಪ್ಪು ಕಲ್ಲಿನ ಬಂಡೆ, ಈ ನಡುವೆ ಕಂಗೊಳಿಸುವ ಐತಿಹಾಸಿಕ ತಾಣ ಗೊಮ್ಮಟಗಿರಿಯ ಬಾಹುಬಲಿಯ ನಗು ಮೊಗದ ಮನಮೋಹಕ ಮೂರ್ತಿ.ಅಮೃತ ಮಹೋತ್ಸವದ ಮಹಾ ಮಸ್ತಕಾಭಿಷೇಕಕ್ಕೆ ಕ್ಷೇತ್ರ ಸಜ್ಜುಗೊಂಡಿದೆ.

    ಕನ್ನಡ ನಾಡಿನ ಸಾಂಸ್ಕೃತಿಕ ನಾಡು, ಕಲೆ, ಸಾಹಿತ್ಯ, ಸಂಸ್ಕೃತಿಗಳ ವೈಭವದ ಬೀಡಾದ ಮೈಸೂರು ಜಿಲ್ಲೆಯು ಕಾವೇರಿ ಮಡಿಲಿನ ತಾಣ. ಶಾಂತಿ, ಅಹಿಂಸೆ, ತ್ಯಾಗದ ಬೀಡಾದ ಗೋಮ್ಮಟಗಿರಿ, ಪ್ರಕೃತಿಯ ನಡುವೆ ಹಾಸು ಹೊಕ್ಕದ ಕರಿ ಕಲ್ಲಿನ ಹೆಬ್ಬಂಡೆಯ ಮೇಲೆ 16 ಅಡಿಗಳ ಏಕಶಿಲಾ ಮೂರ್ತಿಗೆ ಈಗ ಅಮೃತ ಮಹೋತ್ಸವದ ಮಹಾಮಸ್ತಕಾಭಿಷೇಕದ ಸಂಭ್ರಮ ಸಡಗರ.


    Provided by
    Provided by

    ಕನ್ನಡ ನಾಡಿನಲ್ಲಿ ಹತ್ತಾರು ಗುಮ್ಮಟ ಮೂರ್ತಿಗಳಿದ್ದು, ಈ ಪೈಕಿ ಗುಮ್ಮಟಗಿರಿಯ ಶ್ರೀ ಬಾಹುಬಲಿ ಮೂರ್ತಿಯು ಒಂದು. 1949ರಲ್ಲಿ ಮೊಟ್ಟಮೊದಲ ಬಾರಿಗೆ ಈ ಗೊಮ್ಮಟ ಮೂರ್ತಿಗೆ ಮಹಾ ಮಸ್ತಕಾಭಿಷೇಕ ಮಾಡಲಾಯಿತು ಈಗ 75 ನೇ ಮಹಾಮಸ್ತಕಾಭಿಷೇಕ ದ ಅಮೃತ ಮಹೋತ್ಸವಕ್ಕೆ ಕ್ಷೇತ್ರ ಸಜ್ಜುಗೊಂಡಿದೆ.

    1948 ರಲ್ಲಿ ಈ ಗೊಮ್ಮಟಗಿರಿ ಪ್ರದೇಶದ ಅರಣ್ಯ ಭಾಗದಲ್ಲಿ ದನ ಕಾಯುವ ವ್ಯಕ್ತಿಯು ಒಮ್ಮೆ ಕಾಡಿನಲ್ಲಿ ದನ ಗಳೊಂದಿಗೆ ಸಂಚಾರದಲ್ಲಿದ್ದಾಗ ಈ ಬೃಹತ್ ಬಂಡೆಯ ಮೇಲೆ ಗುಮ್ಮಟ ಮೂರ್ತಿ ಇರುವುದು ಅವನ ಕಣ್ಣಿಗೆ ಬಿದ್ದಿತು, ಈ ವಿಚಾರವನ್ನು ಮೈಸೂರಿನ ಜೈನ ಸಮಾಜದ ಪ್ರಮುಖರಾದ ಸಿ.ಬಿ.ಎಂ ಚಂದ್ರಯ್ಯ ನವರ ಗಮನಕ್ಕೆ ತಂದರು. ಈ ಸಂಬಂಧ ಸ್ಥಳ ಪರಿಶೀಲನೆ ನಡೆಸಿದ ಚಂದ್ರಯ್ಯ ಹಾಗೂ ತಂಡದ ಸದಸ್ಯರು ಈ ಗುಮ್ಮಟ ಮೂರ್ತಿಯನ್ನು ಗಿಡ -ಗೆಂಟಿ , ಕಸ- ಕಡ್ಡಿ, ಎಲೆ –ತರಗು ಗಳಿಂದ ಸ್ವಚ್ಛಗೊಳಿಸಿ ಕ್ಷೇತ್ರಕ್ಕೆ ಹೊಸ ರೂಪ ನೀಡಿದರು.

    ಈ ವಿಚಾರವನ್ನು ಅಂದು ಶ್ರೀ ಕ್ಷೇತ್ರ ಹೊಂಬುಜ ಮಠದ ಆಡಳಿತ ವ್ಯಾಪ್ತಿಗೆ ಒಳಪಟ್ಟಿದ್ದರಿಂದ ಅಂದಿನ ಪೂಜ್ಯ ಭಟ್ಟಾರಕರ ಗಮನಕ್ಕೆ ತಂದು ಅದಕ್ಕೆ ಹೊಸ ರೂಪ ನೀಡಿ ಒಂದು ಶ್ರದ್ಧಾ ಕೇಂದ್ರವನ್ನಾಗಿ ಮಾಡಿ 1949 ರಲ್ಲಿ ಮೊದಲ ಮಸ್ತಕಾಭಿಷೇಕ ನೆರವೇರಿಸಲು ಕಾರಣರಾದರು. ಈಗ 75 ಮಹಾಮಸ್ತಕಾಭಿಷೇಕ ಕ್ಕೆ ಕ್ಷಣಗಣನೆ ಆರಂಭವಾಗಿದೆ.

    ಶ್ರೀ ಕ್ಷೇತ್ರಕ್ಕೆ ಈ ಹಿಂದೆ” ಗೊಮ್ಮಟಪುರ “ಎಂಬ ಹೆಸರಿತ್ತು ಶ್ರೀ ಕ್ಷೇತ್ರದ ಬಗ್ಗೆ ಕವಿ ಮಂಗರಸ ನೇಮಿಚಂದ್ರ ಜಿನ ಸ್ತುತಿಯಲ್ಲಿ ಕ್ಷೇತ್ರವನ್ನು ವರ್ಣಿಸಿದ್ದಾನೆ.
    ಶ್ರೀ ಕ್ಷೇತ್ರದ ಗೊಮ್ಮಟ ಮೂರ್ತಿಯ ದರ್ಶನ ಪಡೆಯಲು ನೆಲಮಟ್ಟದಿಂದ 80 –85 ಮೆಟ್ಟಿಲುಗಳನ್ನು ಕ್ರಮಿಸಬೇಕಿದೆ. ಎರಡು ಪಾದಗಳ ತಳದಿಂದ ಬಳ್ಳಿಯಂತೆ ಸರ್ಪಗಳು ಇರುವುದು ವಿಶೇಷವಾದದ್ದು ಇಲ್ಲಿ ನಾಗದೋಷ ಪರಿಹಾರ ಹಾಗೂ ಮದುವೆಗಳು ನಡೆಯುತ್ತವೆ.

    ಈ ಹಿಂದೆ ಜೈನ ಧರ್ಮದ ಸಾಂಸ್ಕೃತಿಕ ಕೇಂದ್ರವಾಗಿದ್ದ ಈ ಭಾಗವನ್ನು ಆಳ್ವಿಕೆ ನಡೆಸಿದ ಗಂಗರು, ಹೊಯ್ಸಳರು ,ವಿಜಯನಗರ ಅರಸರು, ಮೈಸೂರು ಅರಸರು ಹಾಗೂ ಸಾಮಂತ ಅರಸರು ಆಳ್ವಿಕೆ ನಡೆಸಿದ್ದಾರೆ. ಇವರುಗಳ ಕಾಲದಲ್ಲಿ ಜೈನ ಧರ್ಮ ಉಚ್ರಾಯ ಸ್ಥಿತಿಯಲ್ಲಿತ್ತು.

    ವಿಜಯನಗರ ಅರಸರ ಕಾಲದಲ್ಲಿ ಈ ಪ್ರದೇಶ ಅವರ ಸಾಮಂತ ದೊರೆಗಳಾದ ಚೆಂಗಾಳ್ವರ ಆಳ್ವಿಕೆಗೆ ಒಳಪಟ್ಟಿತ್ತು ,ಈ ಪ್ರದೇಶವನ್ನು” ಚೆಂಗು ನಾಡು” ಎಂದು ಕರೆಯಲಾಗಿದೆ . ಅಲ್ಲದೇ ಈ ಪ್ರದೇಶವು ಹನಸೋಗೆ (ಪನಸೋಗೆ) ಜೈನ ಮಠದ ವ್ಯಾಪ್ತಿಗೆ ಸೇರಿದ್ದು, ನಂತರದ ದಿನಗಳಲ್ಲಿ ಈ ಕ್ಷೇತ್ರವು ಹೊಂಬುಜ ಜೈನ ಮಠ ದ ವ್ಯಾಪ್ತಿಗೆ ಒಳಪಟ್ಟಿತು.

    ಅಲ್ಲದೇ ಹನಸೊಗೆ , ( ಪನಸೋಗೆ )ಕಲ್ಲಹಳ್ಳಿ, ಬಸದಿ ಹೊಸಕೋಟೆ, ಅರೆ ತಿಪ್ಪೂರು, (ಆರತಿಪುರ) ಹಾಗೂ ಕನಕಗಿರಿ ಸೇರಿದಂತೆ ಈ ಭಾಗದಲ್ಲಿ ಹಲವಾರು ಜೈನ ತಾಣಗಳಿದ್ದವು.
    ಚೆಂಗಾಳ್ವ ದೊರೆಗಳ ಆಳ್ವಿಕೆಯಲ್ಲಿ ಈ ಪ್ರದೇಶದಲ್ಲಿ ಜೈನ ಧರ್ಮ ಉನ್ನತ ಸ್ಥಾನದಲ್ಲಿತ್ತು. ನೆಲಮಟ್ಟದಿಂದ 200 ಅಡಿಗಳ ಎತ್ತರದ ಕರಿ ಬಂಡೆಯ ಮೇಲೆ ಪ್ರಕೃತಿಯ ಅಚ್ಚ ಹಸಿರಿನ ನಡುವೆ ನೆಲೆ ನಿಂತ ಈ ಗುಮ್ಮಟ ಮೂರ್ತಿ 16 ಅಡಿಗಳ ಎತ್ತರವಿದೆ. ಇದೊಂದು ಶ್ರದ್ಧಾ ಕೇಂದ್ರವಾಗಿದ್ದು, ಈ ಮೂರ್ತಿಯನ್ನು ನಿಲ್ಲಿಸಿದ್ದ ಕೀರ್ತಿ ಚಂಗಾಳ್ವ ದೊರೆಗಳಿಗೆ ಸಲ್ಲುತ್ತದೆ .ಇದನ್ನ ಶ್ರವಣಪ್ಪನ ಗುಡ್ಡ, ಸವಣಪ್ಪನ ಗುಡ್ಡ ಎಂದು ಕರೆದಿದ್ದು, ಚಂಗಾಳ್ವರ, ಅವನತಿಯ ನಂತರ ನಿರ್ಲಕ್ಷಕ್ಕೆ ಒಳಗಾದ ಈ ಪ್ರದೇಶ, ದಟ್ಟ ಅರಣ್ಯದ ಮುಳ್ಳು, ಬೇಲಿ, ಗಿಡ , ಗೆಂಟಿ ನಡುವೆ ಹುದುಗಿ ಹೋಗಿತ್ತು.ಅವನತಿಯ ನಂತರ ನಂತರದ ದಿನಗಳಲ್ಲಿ ಈ ಪ್ರದೇಶವನ್ನು ಕೊಂಗಾಳ್ವರು ಆಳ್ವಿಕೆ ನಡೆಸಿದರು. ಅಲ್ಲದೆ ಅರಣ್ಯ ಇಲಾಖೆ ನಿರ್ಲಕ್ಷಕ್ಕೂ ಕಾರಣವಾಗಿತ್ತು.

    ಈ ಗೋಮ್ಮಟಗಿರಿ ಶ್ರೀ ಕ್ಷೇತ್ರ ಹೊಂಬುಜ ಜೈನ ಮಠದ ಆಡಳಿತ ವ್ಯಾಪ್ತಿಗೆ ಸೇರಿದೆ. ಈ ಗೊಮ್ಮಟ ಮೂರ್ತಿಯನ್ನು ರಾಜ್ಯ ಸರ್ಕಾರ ಈ ಹಿಂದೆ. “ಸುರಕ್ಷಿತ ಸ್ಮಾರಕ “. ಎಂದು ಘೋಷಿಸಿದೆ. ಈ ಹಿಂದೆ ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ. ಡಿ.ದೇವರಾಜ ಅರಸು ರವರು ಈ ಗೊಮ್ಮಟ ಗಿರಿ ಕ್ಷೇತ್ರಕ್ಕೆ 25 ಎಕರೆ ಜಮೀನನ್ನು ಮಂಜೂರು ಮಾಡಿದ್ದರು .ಅಧಿಕಾರಿಗಳ ನಿರ್ಲಕ್ಷ ಹಾಗೂ ಜೈನ ಧರ್ಮಿಯರ ಬೇಜವಾಬ್ದಾರಿಯಿಂದ ಮಂಜೂರಾತಿ ಪತ್ರ ಕಸದ ಬುಟ್ಟಿ ಸೇರಿತು. ಅವರ ಆದೇಶವು ಇತಿಹಾಸ ಪುಟಗಳಲ್ಲಿ ಲೀನವಾಯಿತು.

    ಈ ಐತಿಹಾಸಿಕತಾಣ ಗೊಮ್ಮಟಗಿರಿ ರಾಜಧಾನಿ ಬೆಂಗಳೂರಿನಿಂದ 160 ಕಿ.ಮೀ, ಜಿಲ್ಲಾ ಕೇಂದ್ರ ಮೈಸೂರಿನಿಂದ 26 ಕಿ.ಮೀ., ತಾಲೂಕು ಕೇಂದ್ರ ಹುಣಸೂರಿನಿಂದ 29 ಕಿ.ಮೀ, ಹೋಬಳಿ ಕೇಂದ್ರ ಬಿಳಿ ಕೆರೆಯಿಂದ 10 ಕಿ.ಮೀ , ಮೈಸೂರು—ಮಾಣಿ- -ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯ ಇಲವಾಲದಿಂದ 5 ಕಿ.ಮೀ ದೂರವಿದೆ. ಶ್ರೀ ಗೊಮ್ಮಟಗಿರಿಯ ಗೊಮ್ಮಟಮೂರ್ತಿಗೆ 2024 ರ ಡಿಸೆಂಬರ್ 12 ,13 ,14 ,ರಂದು ಅಮೃತ ಮಹೋತ್ಸವದ ಅಂಗವಾಗಿ ಮಹಾ ಮಸ್ತಕಾಭಿಷೇಕ ನಡೆಯಲಿದೆ.

    ಶ್ರೀ ಗೊಮ್ಮಟಗಿರಿ ಬೆಟ್ಟದ ತಪ್ಪಲಿನಲ್ಲಿ 24 ತೀರ್ಥಂಕರರ ಕೂಟಗಳನ್ನು ಸ್ಥಾಪಿಸಲಾಗಿದೆ. ಶ್ರೀ ಭಗವಾನ್ ಮಹಾವೀರರ ಜಲಮಂದಿರ 23 ಅಡಿಗಳ ಬೃಹತ್ ಮಾನಸ್ಥಂಭ .ಅದರ ಮೇಲೆ ಬ್ರಹ್ಮ ಯಕ್ಷರನ್ನು ಇತ್ತೀಚಿಗೆ ಸ್ಥಾಪಿಸಲಾಗಿದೆ. ತ್ಯಾಗಿ ಮಂದಿರ ,ಸಮವಸರಣ ಮಂದಿರ, ಯಾತ್ರೆ ನಿವಾಸಗಳನ್ನು ಶ್ರೀ ಕ್ಷೇತ್ರದಲ್ಲಿ ನಿರ್ಮಿಸಲಾಗಿದೆ . ಬೆಟ್ಟದ ಮೇಲಿಂದ ಕಾಣುವ ಪ್ರಕೃತಿಯ ನೋಟ , ಕೆ.ಆರ್.ಎಸ್ ಜಲಾಶಯ ನೋಡುಗರ ಕಣ್ಮನ ಸೆಳೆಯುತ್ತದೆ. ಪ್ರಶಾಂತವಾದ ಪ್ರಕೃತಿ ಅಚ್ಚ ಹಸಿರಿನ ಮಧ್ಯ ಕಂಗೊಳಿಸುವ ಈ ಕ್ಷೇತ್ರದಲ್ಲಿ ಹಕ್ಕಿ ಪಕ್ಷಿಗಳ ಚಿಲಿಪಿಲಿ ನೀನಾದಗಳ ನಡುವೆ ಶಾಂತಿ ಹಾಗೂ ಅಹಿಂಸೆ ಸಾರುವ ಈ ಗೊಮ್ಮಟ ಗಿರಿ ನೋಡೋಣ ,ನಮಿಸೋಣ, ಕಣ್ತುಂಬಿ ಕೊಳ್ಳೋಣ, ತ್ಯಾಗ , ಶಾಂತಿ, ಅಹಿಂಸೆ ತತ್ವ ಸಾರೋಣ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

     

    admin
    • Website

    Related Posts

    ದಾಖಲೆ ಬರೆದ ಯಶ್ ‘ಟಾಕ್ಸಿಕ್’ ಟೀಸರ್; ಹಸಿಬಿಸಿ ದೃಶ್ಯ ಕಂಡು ಪ್ರೇಕ್ಷಕ ಶಾಕ್!

    January 9, 2026

    ಉದ್ಧಟತನ ಕಲಿಸಿದ ಪಾಠ

    January 7, 2026

    ವಾಸ್ತವ ಒಡೆದು ನೋಡಿದಾಗ?

    January 2, 2026

    Comments are closed.

    Our Picks

    ಆರ್‌ ಸಿಬಿ ತಂಡದ ಆಟಗಾರನಿಗೆ ಪೋಕ್ಸೋ ಸಂಕಷ್ಟ: ನಿರೀಕ್ಷಣಾ ಜಾಮೀನು ಅರ್ಜಿ ವಜಾ, ಬಂಧನ ಭೀತಿ

    December 25, 2025

    ಇಸ್ರೊ ಮೈಲಿಗಲ್ಲು: ಅತ್ಯಂತ ಭಾರವಾದ ಎಲ್‌ ವಿಎಂ3 ರಾಕೆಟ್ ಮೂಲಕ ‘ಬ್ಲೂಬರ್ಡ್’ ಉಪಗ್ರಹ ಉಡಾವಣೆ

    December 24, 2025

    ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!

    December 17, 2025

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ವಾಟರ್ ಹೀಟರ್ ಬಳಸುವಾಗ ಜೀವಕ್ಕೆ ಕುತ್ತು ಬರಬಹುದು! ಪಾಲಿಸಲೇಬೇಕಾದ ಮುನ್ನೆಚ್ಚರಿಕೆಗಳಿವು…!

    January 9, 2026

    ಬೆಂಗಳೂರು: ಚಳಿಗಾಲ ಆರಂಭವಾಗುತ್ತಿದ್ದಂತೆ ಮನೆಮನೆಗಳಲ್ಲಿ ಬಿಸಿನೀರಿಗಾಗಿ ವಾಟರ್ ಹೀಟರ್ ಅಥವಾ ಇಮ್ಮರ್ಶನ್ ರಾಡ್‌ಗಳ ಬಳಕೆ ಸಾಮಾನ್ಯ. ಆದರೆ, ಸಣ್ಣ ನಿರ್ಲಕ್ಷ್ಯವೂ…

    ದಾಖಲೆ ಬರೆದ ಯಶ್ ‘ಟಾಕ್ಸಿಕ್’ ಟೀಸರ್; ಹಸಿಬಿಸಿ ದೃಶ್ಯ ಕಂಡು ಪ್ರೇಕ್ಷಕ ಶಾಕ್!

    January 9, 2026

    ಚಳಿಗಾಲದ ಸಿಹಿ ತಿನಿಸು ‘ಬೀಟ್‌ರೂಟ್ ಹಲ್ವಾ’: ರುಚಿಯ ಜೊತೆಗೆ ಆರೋಗ್ಯಕ್ಕೂ ಇದು ವರ!

    January 9, 2026

    ವಿಬಿ–ಜಿ ರಾಮ್ ಜಿ ಯೋಜನೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ: ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಆಕ್ರೋಶ

    January 9, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.