ಕೊರಟಗೆರೆ : ಬಿಜಾಪುರ ಜಿಲ್ಲೆಯ ವಿಶೇಷ ಮುಖ್ಯಪೇದೆ ಮಲ್ಲಿಕಾರ್ಜುನ್ ಚವಾರ್(32) ಎಂಬುವರಿಗೆ ತುಂಬುಗಾನಹಳ್ಳಿಯ 12ನೇ ಕೆಎ ಆರ್ಪಿ ಘಟಕದಲ್ಲಿ ತಡರಾತ್ರಿ ಅನಾರೋಗ್ಯ ಉಂಟಾಗಿ ಆಸ್ಪತ್ರೆಗೆ ರವಾನಿಸುವ ಮಾರ್ಗಮಧ್ಯೆ ಹೃದಯಘಾತದಿಂದ ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ.
ಕೊರಟಗೆರೆ ತಾಲುಕು ಕೋಳಾಲ ಹೋಬಳಿ ತೀತಾ ಗ್ರಾಪಂ ತುಂಬುಗಾನಹಳ್ಳಿ ಗ್ರಾಮದ ಸಮೀಪದ ಕೆಎಸ್ಆರ್ ಪಿ 12ನೇ ಪಡೆಯ ವಸತಿ ಗೃಹದಲ್ಲಿ ವಾಸವಾಗಿದ್ದರು. ಬುಧವಾರ ಮುಂಜಾನೆ 3ಗಂಟೆ ವೇಳೆಯಲ್ಲಿ ಆರೋಗ್ಯದಲ್ಲಿ ಏರುಪೇರು ಉಂಟಾದ ತಕ್ಷಣವೇ ಸಿಬ್ಬಂದಿ ವರ್ಗ ಸಾರ್ವಜನಿಕ ಆಸ್ಪತ್ರೆಗೆ ರವಾನಿಸುವ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ.
ಬಿಜಾಪುರ ಜಿಲ್ಲೆ ಸಿಂಧಗಿ ತಾಲೂಕಿನ ಬೋರ್ಗಿ ಗ್ರಾಮದ ಮಲ್ಲಿಕಾರ್ಜುನ್ ಚಾವರ 2014ರಲ್ಲಿ ಕರ್ತವ್ಯಕ್ಕೆ ಸೇರಿದ್ದಾರೆ. 2021ರಲ್ಲಿ ಕೊರಟಗೆರೆಗೆ ಆಗಮಿಸಿ ಕಳೆದ 3 ವರ್ಷದಿಂದ ತುಂಬುಗಾನಹಳ್ಳಿ 12ನೇ ಕೆಎಸ್ ಆಪ್ ಪಿ ಘಟಕದಲ್ಲಿ ವಿಶೇಷ ಪೊಲೀಸ್ ಮುಖ್ಯಪೇದೆಯಾಗಿ ಸೇವೆ ಸಲ್ಲಿಸಿದ್ದು ಇವರ ದಿಢೀರ್ ಸಾವಿನಿಂದ ಘಟಕದಲ್ಲಿ ಮೌನ ಆವರಿಸಿದೆ.
ಮೃತ ಮಲ್ಲಿಕಾರ್ಜುನ್ ಮಡದಿಯ ಜೊತೆ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. 12ನೇ ಪಡೆಯ ಕಮಾಂಡೆಂಡ್ ಹಮ್ಜಹುಸೇನ್, ಸಹಾಯಕ ಕಮಾಂಡೆಂಡ್ ನವೀನಕುಮಾರ್ ಮತ್ತು ಸಿಬ್ಬಂದಿವರ್ಗ ಮೃತರ ಕುಟುಂಬಕ್ಕೆ ಸ್ವಾಂತನ ತಿಳಿಸಿದ್ದಾರೆ. ಮೃತದೇಹವನ್ನು ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx