nammatumakuru

    Subscribe to Updates

    Get the latest creative news from FooBar about art, design and business.

    What's Hot

    ವಿಜೃಂಭಣೆಯಿಂದ ನೆರವೇರಿದ ಗೊರವನಹಳ್ಳಿ ರಥೋತ್ಸವ

    November 15, 2025

    ಕೊಳ್ಳುರ: ಮಕ್ಕಳ ದಿನಾಚರಣೆ, ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ

    November 15, 2025

    ಬೀದರ್: ತೇಗಂಪೂರ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಣೆ

    November 15, 2025
    Facebook Twitter Instagram
    ಟ್ರೆಂಡಿಂಗ್
    • ವಿಜೃಂಭಣೆಯಿಂದ ನೆರವೇರಿದ ಗೊರವನಹಳ್ಳಿ ರಥೋತ್ಸವ
    • ಕೊಳ್ಳುರ: ಮಕ್ಕಳ ದಿನಾಚರಣೆ, ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ
    • ಬೀದರ್: ತೇಗಂಪೂರ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಣೆ
    • ಹುಲಿ ದಾಳಿಯಿಂದ ಮೃತಪಟ್ಟ ರಾಜಶೇಖರಪ್ಪ ಕುಟುಂಬಕ್ಕೆ ಧರ್ಮಸ್ಥಳ ಸಂಘದಿಂದ ಧನ ಸಹಾಯ
    • ನವೆಂಬರ್ 19:  ಚಿಕ್ಕಪೇಟೆ ಶ್ರೀ ಪ್ರಸನ್ನ ಗಂಗಾಧರೇಶ್ವರ ದೇಗುಲದಲ್ಲಿ ಲಕ್ಷ ದೀಪೋತ್ಸವ
    • ತುಮಕೂರು: ನಗರದ ವಿವಿಧೆಡೆ ಉಪಲೋಕಾಯುಕ್ತ ನ್ಯಾಯಮೂರ್ತಿ ದಿಢೀರ್ ಭೇಟಿ: ಅಧಿಕಾರಿಗಳು, ಅಂಗಡಿ ಮಾಲಿಕರಿಗೆ ತರಾಟೆ
    • ಗುಬ್ಬಿ: ತಾಲೂಕು ಯೋಜನಾ ಹುದ್ದೆಗೆ ಅರ್ಜಿ ಆಹ್ವಾನ
    • ನವೆಂಬರ್ 20: ಎಡೆಯೂರು ಲಕ್ಷದೀಪೋತ್ಸವ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ” ಕುಚ್ಚಂಗಿ ಶ್ರೀ ಪಾರ್ಶ್ವನಾಥ ಜೈನ ಬಸದಿ”
    ಲೇಖನ December 27, 2024

    ” ಕುಚ್ಚಂಗಿ ಶ್ರೀ ಪಾರ್ಶ್ವನಾಥ ಜೈನ ಬಸದಿ”

    By adminDecember 27, 2024No Comments3 Mins Read
    kucchangi
    •  ಜೆ.ರಂಗನಾಥ,  ತುಮಕೂರು

    ಸುತ್ತಲೂ ಆಚ್ಚ ಹಸಿರು, ತೆಂಗು –ಕಂಗು ಗಳ ನಡುವೆ ನವಿಲುಗಳ ನರ್ತನ ,ಈ ನಡುವೆ ಕಂಗೊಳಿಸುವ ಐತಿಹಾಸಿಕ ತಾಣವೇ ಕುಚ್ಚಂಗಿ.

    ಸುಮಾರು 900 ವರ್ಷಗಳ ಇತಿಹಾಸ ವಿರುವ ಈ ಜೈನ  ಬಸದಿ ಕ್ರಿಸ್ತಶಕ. 1180.  ರಲ್ಲಿ ಬಮ್ಮಸೆಟ್ಟಿ ಕುಟುಂಬಸ್ಥರು ನಿರ್ಮಿಸಿದ್ದಾರೆ. ಮೂಲ ಸಂಘದ ದೇಸಿ ಗಣಿಯ ಹನಸೋಗೆ ಶಾಖೆಯ ನಯಸೇನಾ ಸಿದ್ಧಾಂತ ಶ್ರೀಗಳವರ ಶಿಷ್ಯರಾದ ಆಧ್ಯಾತ್ಮ ಬಾಲಚಂದ್ರ ದೇವರ ಪ್ರಭಾವದಿಂದ ನಿರ್ಮಿಸಿದೆ. ಈ ಬಸದಿಗೆ, ಬಮ್ಮ ಶೆಟ್ಟಿ  ವಂಶಸ್ಥರು ಅಡಿಕೆ ವ್ಯಾಪಾರದಲ್ಲಿ ಹೆಚ್ಚು ಪ್ರವೃತ್ತರಾಗಿ ಹೆಸರು ಮಾಡಿದ್ದರಿಂದ ಈ ವಂಶಸ್ಥರಿಗೆ ಈಗಲೂ ” ಗೊಟಡಿಕೆ” ವಂಶಸ್ಥರು ಎಂಬ ಹೆಸರಿದೆ. ಬಮ್ಮಾ ಶೆಟ್ಟಿ ಪುತ್ರ ಕೇಸರಿ ಶೆಟ್ಟಿ ಶ್ರೀ ಪಾರ್ಶ್ವನಾಥ ಬಸದಿಯನ್ನು ನಿರ್ಮಿಸಿ ದತ್ತಿ ನೀಡಿದ್ದರು. ಈ ಗೋಟಡಿಕೆ ವಂಶಸ್ಥರು  ಬೆಳ್ಳಾವಿ ,ಧಾರವಾಡ ,ಹುಬ್ಬಳ್ಳಿ, ಬೆಳಗಾವಿ ಹಾಗೂ ಉತ್ತರ ಕರ್ನಾಟಕದ ವಿವಿಧೇಡಿಗಳಲ್ಲಿ ನೆಲೆಸಿದ್ದಾರೆ.


    Provided by
    Provided by

    ಬೊಮ್ಮಾ ಶೆಟ್ಟಿಯು  ತನ್ನ ಪುತ್ರ ಕೇಸರಿ ಶೆಟ್ಟಿಯೊಡನೆ ಕುಚ್ಚಂಗಿಗೆ ಬರುವ ಮೊದಲು ಹುಬ್ಬಳ್ಳಿಗೆ 30 ಕಿ.ಮೀ. ದೂರದ   “ಆರಟ್ ಪಾಲ್”  ಎಂಬಲ್ಲಿ ವಾಸವಾಗಿದ್ದರು. ಚಾಲುಕ್ಯರ ರಾಜ್ಯಡಳಿತದ ಕಾಲದಲ್ಲಿ ಪ್ರಸಿದ್ಧ ವರ್ತಕರೇನಿಸಿದ್ದರೂ. ಕ್ರಿ.ಶ 1145 ರ ಚಾಲುಕ್ಯರ ಇಮ್ಮಡಿ ಜಗದೇವ ಮಲ್ಲನ ಆಳ್ವಿಕೆಯ ಕಾಲದಲ್ಲಿ ಧಾರವಾಡದ.  ” ಹರದ ಬಾಳೆಹಳ್ಳಿ”. ಯಲ್ಲಿ ಬಮ್ಮಶೆಟ್ಟಿಯು ಶ್ರೀ ಪಾರ್ಶ್ವನಾಥ ಜಿನಮಂದಿರ ವನ್ನು ನಿರ್ಮಿಸಿದನು. ಇದನ್ನು. ” ಕುಂದ ಕುಂದಾನ್ವಯದೇಸಿ ಗಣ ಪುಸ್ತಕ  ಗುಚ್ಛದ ಮಲದಾರಿ ದೇವರಿಗೆ “ವಹಿಸಿ ,ಸಂಪ್ರೋಕ್ಷಣೆ ಮಾಡಿಸಿ, ಅಪಾರವಾದ ದಾನದತ್ತಿಗಳನ್ನು ನೀಡಿದ್ದಾರೆ.

    ಅದೇ ವರ್ಷದಲ್ಲಿ ಬಮ್ಮಶೆಟ್ಟಿಯೂ “ಕರಗುದರಿ” ಗ್ರಾಮದಲ್ಲಿ ಶ್ರೀ ಭಗವಾನ್ ಶ್ರೀ ವಿಜಯ  ಪಾರ್ಶ್ವನಾಥ ಜೈನ ಮಂದಿರವನ್ನು ಕಟ್ಟಿಸಿದರು. ಇದನ್ನ ನಾಗಚಂದ್ರ ಭಟ್ಟರಕ ಸ್ವಾಮಿಗಳವರ ಮೇಲ್ವಿಚಾರಣೆಗೆ  ವಹಿಸಿ ದಾನದತ್ತಿ ನೀಡಿದರು. ಆನಂತರ ಬಮ್ಮಶೆಟ್ಟಿ ಯು ದಕ್ಷಿಣದ ಪ್ರಸಿದ್ಧ ವ್ಯಾಪಾರ ಸ್ಥಳವಾಗಿದ್ದ ತುಮಕೂರು ಸಮೀಪದ ಕುಚ್ಚಂಗಿಗೆ ಬಂದು ನೆಲೆಸಿದರು.

    ಬಸದಿಯ ಮಾನಸ್ತಂಭ 18.2 ಅಡಿಗಳ ಎತ್ತರವಿದ್ದು ,ಬಸದಿಯ ಮುಂಭಾಗ ಕೂಗಳತೆಯ ದೂರದಲ್ಲಿ “ಪಾದ ಬೆಟ್ಟ “ವಿರುವ ಗೋಪುರ ಮಂಟಪವಿದೆ. ಬಸದಿಯ ಆವರಣದಲ್ಲಿ  ತೀರ್ಥಂಕರರ ಭಿನ್ನ ವಿಗ್ರಹಗಳು, ಶಿಲಾ ಕಂಬಗಳು, ಶ್ರೀ ಶಾಂತಿ ಸಾಗರ  ರ ಪಾದಕೆ ಗಳು ಹಾಗೂ ನಾಗಬನವಿದೆ ಈ ಹಿಂದೆ ಕುಚ್ಛಂಗಿ ಪ್ರದೇಶ ಗಂಗಾ ಸಾಮ್ರಾಜ್ಯದ ಆಡಳಿತ ವ್ಯಾಪ್ತಿಗೆ  ಸೇರಿತ್ತು, ಕುಚ್ಚಂಗಿ ಒಂದು ಧಾರ್ಮಿಕ ಕೇಂದ್ರವಾಗಿದ್ದು, ವ್ಯಾಪಾರದಲ್ಲಿ ಉನ್ನತ ಸ್ಥಾನದಲ್ಲಿತ್ತು.

    ಈ ಬಸದಿಯಲ್ಲಿ ಅನಂತಮೂರ್ತಿ ಪೂಜೆ, ಅಭಿಷೇಕ, ಆರಾಧನೆಗಳು ,ಧಾರ್ಮಿಕ ಕಾರ್ಯಕ್ರಮ, ಭಕ್ತರ ಸಮ್ಮೇಳನದಲ್ಲಿ ನಡೆಯುತ್ತಿದ್ದವು .ನೋಂಪಿಯ ಅಂತಿಮ ದಿನ ವಸಂತ ಒಕಳಿ ಉತ್ಸವ ಹಾಗೂ ಪಾದ ಬೆಟ್ಟದಲ್ಲಿ ಪೂಜಾದಿ ಗಳು ನಡೆಯುತ್ತಿದ್ದವು ಇದರ ವಿಶೇಷತೆ ಎಂಬಂತೆ  ಅಂದು( ಮಳೆ)  ವರುಣ ದೇವ ಕೃಪೆ ತೋರಿಸುತ್ತಿತ್ತು ಎಂಬ ಪ್ರತೀತಿ ಇದೆ.

    ಅಡಿಕೆ ವ್ಯಾಪಾರದಲ್ಲಿ ಹೆಚ್ಚು ಹೆಸರು ಗಳಿಸಿ ಗೋಟ ಡಿಕೆ ವಂಶಸ್ಥರೆಂದು ಹೆಸರಾಗಿದ್ದ ಇವರು, ಹೆಚ್ಚು ವಹಿವಾಟಿನ ಉದ್ದೇಶದಿಂದ   ಬೆಳ್ಳಾವಿ ,ಬೆಳಗಾವಿ ಇನ್ನಿತರ ಸ್ಥಳಗಳಲ್ಲಿ ನೆಲೆ ಕಂಡಿದ್ದಾರೆ. ಕೆಲ ಕುಟುಂಬಗಳು ಪರಿಸರದ ಒತ್ತಡದಿಂದ ಸಾದರುಗಳಾಗಿ  ,ಸಾದರ್ ಜೈನರಾಗಿದ್ದಾರೆ .ಅದೇ ಮನೆತನದವರು ಕುಚ್ಚಂಗಿ ಗ್ರಾಮದಲ್ಲಿ ಶ್ರೀ ಪಾರ್ಶ್ವನಾಥ ಜೈನ ಬಸದಿ ನಿರ್ಮಿಸಿ ಮನೆ ದೇವರನ್ನ ಗಿಸಿಕೊಂಡು ನೆಲೆಸಿದ್ದಾರೆ.

    ಈ ಬಸದಿ ಗರ್ಭಗುಡಿ ,ನವರಂಗ, ಹೊಂದಿದ್ದು ಪೂರ್ವಭಿಮುಖವಾಗಿದ್ದು, ಪ್ರದಕ್ಷಿಣ ಪಥ ಹೊಂದಿದ್ದು, ಬಸದಿ ಎದುರು 18.2 ಅಡಿಗಳ ಎತ್ತರದ ಮಾನಸ್ತಂಭವಿದೆ. ಗರ್ಭಗುಡಿಯ ಪ್ರವೇಶ ದ್ವಾರದ ಪ್ರಭಾವಳಿಯಲ್ಲಿ ತಾಮ್ರದ ಯಕ್ಷ –ಯಕ್ಷರನ್ನು ಸ್ಥಾಪಿಸಲಾಗಿದೆ. ನವರಂಗದ ಎಡಗಡೆ ಪದ್ಮಾವತಿ ,ಬಲಗಡೆ ಮಹಾವೀರ ಇನ್ನಿತರ ಪ್ರತಿಮೆಗಳಿವೆ. ಗರ್ಭಗುಡಿ ಪ್ರವೇಶದ್ವಾರದಲ್ಲಿ ಕಳಸ  ಸಮೇತ ಬಳ್ಳಿ ವರಸೆ ಚಿತ್ರಗಳಿವೆ ಗರ್ಭಗುಡಿಯಲ್ಲಿ 5 ಅಡಿಗಳ ಎತ್ತರದ ಶ್ರೀ  ಪಾರ್ಶ್ವನಾಥರ ಖಡ್ಗಾಸನ ಬಂಗಿಯ ಮೂರ್ತಿ ವಿರಾಜಮಾನವಾಗಿದೆ. ಬಸದಿಯ ಸುತ್ತಲೂ ಇರುವ ಬೃಹದಾಕಾರದ ರಕ್ಷಣಾ ಗೋಡೆ ಪುರಾತನವಾದ ಗೋಡೆಯಂತಿದ್ದು, ಬಸದಿಯ ಸುತ್ತಲೂ  ಅಚ್ಚ ಹಸಿರಿನ ಮಧ್ಯೆ ಕಂಗೊಳಿಸುತ್ತದೆ.

    ಈ ಐತಿಹಾಸಿಕ ಶ್ರೀ ಕುಚ್ಚಂಗಿ ಪಾರ್ಶ್ವನಾಥ ಜೈನ ಬಸದಿ ರಾಜಧಾನಿ ಬೆಂಗಳೂರಿನಿಂದ 84 ಕಿ.ಮೀ,  ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರವಾಗಿರುವ ತುಮಕೂರಿನಿಂದ 12 ಕಿ.ಮೀ.ಗಳ ದೂರದಲ್ಲಿದೆ.

    ತುಮಕೂರಿನಿಂದ ಯಲ್ಲಾಪುರ– ತೊವಿನಕೆರೆ ಮಾರ್ಗವಾಗಿ ಕುಚ್ಚಂಗಿ ಗೇಟಿಗೆ ಬಸ್ ಅಥವ ಇತರೆ ವಾಹನಗಳಲ್ಲಿ 10 ಕಿ.ಮೀ. ಕ್ರಮಿಸಿದರೆ,  ಅಲ್ಲಿಂದ ಕುಚ್ಚಂಗಿ ಗ್ರಾಮಕ್ಕೆ 2  ಕಿ.ಮೀ. ಕಾಲು ನಡಿಗೆಯಲ್ಲಿ ಸಂಚರಿಸಬೇಕು. ಕುಚ್ಚಂಗಿ ಶ್ರೀ ಪಾರ್ಶ್ವನಾಥ ಜಿನಮಂದಿರ ದ 55ನೇ ವಾರ್ಷಿಕ ಪೂಜಾ ಮಹೋತ್ಸವ ಹಾಗೂ 108 ಕಳಸ ಗಳ ಮಹಾಭಿಷೇಕ ಪೂಜೆ 2024 ರ ಡಿಸೆಂಬರ್ 29 ರಂದು ಭಾನುವಾರ ನಡೆಯಲಿದೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

    admin
    • Website

    Related Posts

    ತೆಂಗು ಬೆಳೆ: ಕೆಂಪು ಮೂತಿ ಹುಳು, ಅಣಬೆ ರೋಗ ಹತೋಟಿ ಮಾಡುವುದು ಹೇಗೆ?: ರೈತರಿಗೆ ಮಾಹಿತಿ  

    November 15, 2025

    ತುಮಕೂರಿನ ಕಲಾತ್ಮಕ ತಂಡದಿಂದ ಹೊಸ ಪ್ರಯೋಗ – “ಪ್ರೊಡಕ್ಷನ್ ನಂ 01” !

    November 2, 2025

    ‘ನಮ್ಮ ತುಮಕೂರು’ ನಂಬಿಕೆಯ ಬೆಳಕು: 4ನೇ ವಾರ್ಷಿಕೋತ್ಸವದ ಶುಭಾಶಯಗಳು | ಆರ್.ಶೋಭಾ

    November 1, 2025

    Comments are closed.

    Our Picks

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ವಿಜೃಂಭಣೆಯಿಂದ ನೆರವೇರಿದ ಗೊರವನಹಳ್ಳಿ ರಥೋತ್ಸವ

    November 15, 2025

    ಕೊರಟಗೆರೆ: ತಾಲ್ಲೂಕಿನ ಗೊರವನಹಳ್ಳಿ ಮಹಾಲಕ್ಷ್ಮೀ  ದೇವಾಲಯದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಬ್ರಹ್ಮ ರಥೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ಲಕ್ಷದೀಪೋತ್ಸವ…

    ಕೊಳ್ಳುರ: ಮಕ್ಕಳ ದಿನಾಚರಣೆ, ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ

    November 15, 2025

    ಬೀದರ್: ತೇಗಂಪೂರ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಣೆ

    November 15, 2025

    ಹುಲಿ ದಾಳಿಯಿಂದ ಮೃತಪಟ್ಟ ರಾಜಶೇಖರಪ್ಪ ಕುಟುಂಬಕ್ಕೆ ಧರ್ಮಸ್ಥಳ ಸಂಘದಿಂದ ಧನ ಸಹಾಯ

    November 15, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.