nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬಸ್—ಕಾರಿನ ನಡುವೆ ಭೀಕರ ಅಪಘಾತ: ಮೂವರು ಸಾವು, ಇಬ್ಬರ ಸ್ಥಿತಿ ಗಂಭೀರ

    October 5, 2025

    ಕೆಆರ್ ಎಸ್ ಗೆ ಅಡಿಗಲ್ಲು ಹಾಕಿದ್ದೇ ಟಿಪ್ಪು ಸುಲ್ತಾನ್: ಕೆ.ಎನ್.ರಾಜಣ್ಣ ಹೇಳಿಕೆ

    October 5, 2025

    ತುಮಕೂರು |  ಬೇಗೂರು ಡೇರಿ ಸೂಪರ್ ಸೀಡ್: ಪ್ರತಿಭಟನೆ

    October 4, 2025
    Facebook Twitter Instagram
    ಟ್ರೆಂಡಿಂಗ್
    • ಬಸ್—ಕಾರಿನ ನಡುವೆ ಭೀಕರ ಅಪಘಾತ: ಮೂವರು ಸಾವು, ಇಬ್ಬರ ಸ್ಥಿತಿ ಗಂಭೀರ
    • ಕೆಆರ್ ಎಸ್ ಗೆ ಅಡಿಗಲ್ಲು ಹಾಕಿದ್ದೇ ಟಿಪ್ಪು ಸುಲ್ತಾನ್: ಕೆ.ಎನ್.ರಾಜಣ್ಣ ಹೇಳಿಕೆ
    • ತುಮಕೂರು |  ಬೇಗೂರು ಡೇರಿ ಸೂಪರ್ ಸೀಡ್: ಪ್ರತಿಭಟನೆ
    • ದೇಶಕ್ಕೆ ಅನ್ನ ನೀಡುವ ರೈತನ ಯಾರು ಕೂಡ ಮರೆಯಬಾರದು: ವೀರಬಸವ ಮಹಾಸ್ವಾಮಿ
    • ನಕ್ಷತ್ರಗಳ ಬೆಳಕ ಹೊರತಾಗಿಯೂ ರಾತ್ರಿ ಆಕಾಶ ಕಪ್ಪೇಕೆ ?
    • ಜನ ಅಲೆಯುವುದನ್ನು ತಪ್ಪಿಸಲು ಪ್ರಜಾಸೌಧ: ಅನಿಲ್ ಚಿಕ್ಕಮಾದು
    • ಬೆಳಕುಣಿ ಚೌದ್ರಿ ಗ್ರಾಮದಲ್ಲಿ ಭವಾನಿ ಮಾತಾ ದೇವಿ ಮೆರವಣಿಗೆ
    • ಪಾವಗಡ | ಕೆ.ಟಿ.ಹಳ್ಳಿ ಗ್ರಾಮದಲ್ಲಿ ಕೆಂಪೇಗೌಡರ ಪುತ್ಥಳಿ ಅನಾವರಣ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಗೊನೆಗಾರರು ಕೇರಾ ಸುರಕ್ಷಾ ವಿಮಾ ಯೋಜನೆ ಪ್ರಯೋಜನ ಪಡೆಯಲು ತೋಟಗಾರಿಕೆ ಇಲಾಖೆ ಮನವಿ
    ತುಮಕೂರು December 29, 2024

    ಗೊನೆಗಾರರು ಕೇರಾ ಸುರಕ್ಷಾ ವಿಮಾ ಯೋಜನೆ ಪ್ರಯೋಜನ ಪಡೆಯಲು ತೋಟಗಾರಿಕೆ ಇಲಾಖೆ ಮನವಿ

    By adminDecember 29, 2024No Comments2 Mins Read
    suraksha

    ತುಮಕೂರು:  ಜಿಲ್ಲೆಯ ಗೊನೆಗಾರರು ಕೇರಾ ಸುರಕ್ಷಾ ವಿಮಾ ಯೋಜನೆಯ ಪ್ರಯೋಜನವನ್ನು ಪಡೆಯಬೇಕೆಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಶಾರದಮ್ಮ ಮನವಿ ಮಾಡಿದ್ದಾರೆ.

    ಕೇರಾ ಸುರಕ್ಷಾ ವಿಮಾ ಯೋಜನೆಯು ವೈಯಕ್ತಿಕ ಅಪಘಾತ ವಿಮಾ ಯೋಜನೆಯಾಗಿದ್ದು, ತೆಂಗು ಅಭಿವೃದ್ಧಿ ಮಂಡಳಿಯು ” Friends of Coconut Tree” ಕಾರ್ಯಕ್ರಮದಡಿ ಈ ಯೋಜನೆಯನ್ನು ಅನುಷ್ಟಾನಗೊಳಿಸಿದೆ.


    Provided by
    Provided by
    Provided by

    ಜಿಲ್ಲೆಯಲ್ಲಿ ಸುಮಾರು 2,24,507 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದ್ದು, ಕಾಯಿ ಅಥವಾ ಎಳನೀರು ಕೊಯ್ಲು ಮಾಡುವ ಗೊನೆಗಾರರ ಸುರಕ್ಷತಾ ದೃಷ್ಟಿಯಿಂದ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಗೊನೆಗಾರರಿಗೆ ಏನೇ ಅಪಘಾತ ಸಂಭವಿಸಿದರೂ ಕೇರಾ ಸುರಕ್ಷಾ ವಿಮಾ ಯೋಜನೆಯಡಿ ವಿವಿಧ ಸೌಲಭ್ಯ ಒದಗಿಸಲಾಗುವುದು. ತೆಂಗಿನ ಮರ ಹತ್ತುವವರು/ತೆಂಗಿನಕಾಯಿ ಕೀಳುವವರು/ನೀರಾ ತಂತ್ರಜ್ಞರು ಅಪಘಾತಕ್ಕೊಳಗಾಗಿ ಮರಣ ಹೊಂದಿದ್ದಲ್ಲಿ ಅಥವಾ ಅಂಗವಿಕಲರಾದಲ್ಲಿ ದುರ್ಘಟನೆ/ ಅಪಘಾತವಾದ 7 ದಿನಗಳೊಳಗಾಗಿ ತೆಂಗು ಅಭಿವೃದ್ಧಿ ಮಂಡಳಿಗೆ ಮಾಹಿತಿ ನೀಡಬೇಕು. ಮರಣ ಹೊಂದಿದಲ್ಲಿ 7 ಲಕ್ಷ ರೂ., ಶಾಶ್ವತ ಭಾಗಶಃ ಅಂಗವಿಕಲತೆ ಹೊಂದಿದಲ್ಲಿ 3.50 ಲಕ್ಷ ರೂ., ಆಸ್ಪತ್ರೆ ವೆಚ್ಚ(24 Hours IP) 2 ಲಕ್ಷ ರೂ., ತಾತ್ಕಾಲಿಕ ಅಂಗವಿಕಲತೆಯನ್ನು ಹೊಂದಿದ ಕೊಯ್ಲುಗಾರನಿಗೆ ಗರಿಷ್ಠ 21,000 ರೂ.(ಪ್ರತಿ ವಾರ 3500 ರೂ.ನಂತೆ), ಆಂಬುಲೆನ್ಸ್ ಖರ್ಚು 3,500 ರೂ. ಹಾಗೂ ಪಾಲಿಸಿದಾರ ಮೃತಪಟ್ಟರೆ ಅಂತ್ಯ ಸಂಸ್ಕಾರಕ್ಕೆ 5,500 ರೂ.ಗಳನ್ನು ವಿಮಾ ಕಂಪನಿಯಿಂದ ನೀಡಲಾಗುವುದು.

    ಆಸಕ್ತ ತೆಂಗು ತೋಟಗಾರರು ತೆಂಗು ಅಭಿವೃದ್ಧಿ ಮಂಡಳಿಯ ನಿಗಧಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಆಧಾರ್‌ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ರೈತರ ವಾರ್ಷಿಕ ವಂತಿಕೆ ಪಾವತಿಸಿದ ರಶೀದಿಯೊಂದಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ವಿಮಾ ಪಾಲಿಸಿ ಹೊಂದಬಹುದಾಗಿದೆ.

    ವಾರ್ಷಿಕ ವಿಮಾ ಕಂತಿನ ಹಣವನ್ನು 956 ರೂ.ಗಳಿಗೆ ನಿಗದಿಪಡಿಸಲಾಗಿದೆ. ಇದರಲ್ಲಿ ಶೇ.75:25 ರಂತೆ ತೆಂಗು ಅಭಿವೃದ್ದಿ ಮಂಡಳಿಯವಂತಿಕೆ 717ರೂ. ಹಾಗೂ ರೈತರ ವಂತಿಕೆ 239 ರೂ.ಗಳನ್ನು ಒಳಗೊಂಡಿರುತ್ತದೆ. ರೈತರು ವಿಮಾ ಕಂತಿನ ವಂತಿಕೆಯನ್ನು ತೆಂಗು ಅಭಿವೃದ್ದಿ ಮಂಡಳಿ(Coconut development board payable at cochin)ಗೆ ಡಿಡಿ ಮೂಲಕ ಅಥವಾ ಆನ್‌ಲೈನ್ NEFT/ BHIM/Phone pe/ Google pay/Pay- tm ಮೂಲಕ State bank of India, Iyyatti Jn., Ernakulam ಶಾಖೆ(Account No.61124170321, IFSC Code: SBIN0031449)ಗೆ ಪಾವತಿಸಬಹುದಾಗಿದೆ.

    ಹೆಚ್ಚಿನ ಮಾಹಿತಿಗಾಗಿ ಜಾಲತಾಣ www.coconut.board.gov.in/Scheme.aspx#kera suraksha insurance ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

    admin
    • Website

    Related Posts

    ಬಸ್—ಕಾರಿನ ನಡುವೆ ಭೀಕರ ಅಪಘಾತ: ಮೂವರು ಸಾವು, ಇಬ್ಬರ ಸ್ಥಿತಿ ಗಂಭೀರ

    October 5, 2025

    ಕೆಆರ್ ಎಸ್ ಗೆ ಅಡಿಗಲ್ಲು ಹಾಕಿದ್ದೇ ಟಿಪ್ಪು ಸುಲ್ತಾನ್: ಕೆ.ಎನ್.ರಾಜಣ್ಣ ಹೇಳಿಕೆ

    October 5, 2025

    ತುಮಕೂರು |  ಬೇಗೂರು ಡೇರಿ ಸೂಪರ್ ಸೀಡ್: ಪ್ರತಿಭಟನೆ

    October 4, 2025

    Comments are closed.

    Our Picks

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಬಸ್—ಕಾರಿನ ನಡುವೆ ಭೀಕರ ಅಪಘಾತ: ಮೂವರು ಸಾವು, ಇಬ್ಬರ ಸ್ಥಿತಿ ಗಂಭೀರ

    October 5, 2025

    ತುಮಕೂರು: ಖಾಸಗಿ ಬಸ್ ಮತ್ತು ಕಾರಿನ ಮಧ್ಯೆ ನಡೆದ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ…

    ಕೆಆರ್ ಎಸ್ ಗೆ ಅಡಿಗಲ್ಲು ಹಾಕಿದ್ದೇ ಟಿಪ್ಪು ಸುಲ್ತಾನ್: ಕೆ.ಎನ್.ರಾಜಣ್ಣ ಹೇಳಿಕೆ

    October 5, 2025

    ತುಮಕೂರು |  ಬೇಗೂರು ಡೇರಿ ಸೂಪರ್ ಸೀಡ್: ಪ್ರತಿಭಟನೆ

    October 4, 2025

    ದೇಶಕ್ಕೆ ಅನ್ನ ನೀಡುವ ರೈತನ ಯಾರು ಕೂಡ ಮರೆಯಬಾರದು: ವೀರಬಸವ ಮಹಾಸ್ವಾಮಿ

    October 4, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.