ಔರಾದ್: ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಡಾ.ಬಿ. ಆರ್ ಅಂಬೇಡ್ಕರ್ ಹೋರಾಟ ಸಮಿತಿ ವತಿಯಿಂದ ಔರಾದ್ ಬಂದ್ ಪ್ರತಿಭಟನೆ ನಡೆಯಿತು.
ಹೋರಾಟ ಸಮಿತಿಯ ಪದಾಧಿಕಾರಿಗಳು ಔರಾದ್ ಪಟ್ಟಣದ ಸರ್ಕಾರಿ ಆಸ್ಪತ್ರೆ ಬಳಿಯಿಂದ ಎಪಿಎಂಸಿ ವೃತ್ತದವರೆಗೆ ಮೆರವಣಿಗೆ ಮೂಲಕ ತೆರಳಿದ್ದರು ಬಳಿಕ ಟೈರ್ ಬೆಂಕಿ ಹಚ್ಚಿ ಅಮಿತ್ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಎ ಪಿ ಎಂ ಸಿ ಕ್ರಾಸ್ ನಿಂದ ಮೆರವಣಿಗೆ ಮೂಲಕ ಬಸ್ ನಿಲ್ದಾಣದ ವರೆಗೆ ಅಮಿತ್ ಶಾ ಪ್ರತಿಕೃತಿಗೆ ಬೆಂಕಿಯಿಟ್ಟು ಆಕ್ರೋಶ ವ್ಯಕ್ತಪಡಿಸಿದರು. ನಂತರ ರಾಷ್ಟ್ರಪತಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಔರಾದ ತಹಶೀಲ್ದಾರ್ ಮಲಶೆಟ್ಟಿ ಚಿದ್ರೆ ಮೂಲಕ ಮನವಿ ಸಲ್ಲಿಸಿದ್ದರು.
ಈ ಸಮಯದಲ್ಲಿ ಹೋರಾಟರಾರರಾದ ಧನರಾಜ್ ಮುಸ್ತಾಪುರೆ, ಗೌತಮ್ ಮೇತ್ರೆ, ಸುಭಾಷ್ ಲಾಧಾ, ರಾಹುಲ್ ಖಂಡಾರೆ, ರತ್ನಾದೀಪ ಕಸ್ತುರೆ, ರಾಮಣ್ಣ ವಡೆಯರ, ದಲಿತ ಹಿರಿಯರ ಮುಖಂಡರು ಸುಧಾಕರ್ ಕೊಳ್ಳುರ್, ಎಮ್.ಡಿ.ನಯೂಮ, ಪರಮೇಶ್ವರ್ ಮೇತ್ರೆ, ಕರಬಸಪ್ಪಾ ಸೊರಾಳೆ, ಮನೋಜ ರೆಡ್ಡಿ, ಮಹೇಶ್ ಚಾಬೋಳೆ, ದೆವಿದಾಸ ಮಾಳಗೆ , ತುಕಾರಾಮ ಹಸನ್ಮುಖಿ ಮತ್ತು ವಿವಿಧ ಗ್ರಾಮಗಳಿಂಗ ಪ್ರತಿಭಟನಕಾರರು ಉಪಸ್ಥಿತರಿದ್ದರು. ಪ್ರತಿಭಟನೆ ವೇಳೆ ಪೊಲೀಸ್ ಅಧಿಕಾರಿಗಳು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx