ಬೆಂಗಳೂರು: ಯಶ್, ದರ್ಶನ್, ಉಪ್ಪಿ ಸರ್, ಶಿವಣ್ಣ ಎಲ್ಲರು ಸೇರಿದ್ರೆನೇ ಕನ್ನಡ ಚಿತ್ರರಂಗ ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.
ಮ್ಯಾಕ್ಸ್ ಸಿನಿಮಾ ಸಕ್ಸಸ್ ಮೀಟ್ ನಲ್ಲಿ ಮಾತನಾಡಿದ ಅವರು, ಬಾಸ್ ಕಾಲ ಮುಗಿತು ಮ್ಯಾಕ್ಸ್ ಮಾಸ್ ಆಟ ಶುರು ಎಂಬ ಕೇಕ್ ವಿವಾದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದರು.
ಯಶ್, ದರ್ಶನ್, ಉಪ್ಪಿ ಸರ್, ಶಿವಣ್ಣ ಎಲ್ಲಾ ಸೇರಿದ್ರೆನೆ ಕನ್ನಡ ಚಿತ್ರರಂಗ. ಇದೆ ದರ್ಶನ್ ಫ್ಯಾನ್ಸ್ ಬಗ್ಗೆ ಹೇಳ್ದಾಗ ನಾನು ಫ್ಯಾನ್ಸ್‌ಗೆ ಬೈಬೇಡಿ ಅಂದಿದ್ದೆ. ಅವರು ನೋವಿನಲ್ಲಿದ್ದಾರೆ ಏನ್ ಮಾತಾಡಬೇಕು ಅಂತ ಗೊತ್ತಾಗ್ತಿಲ್ಲ ಅಂತ ಹೇಳಿದೆ. ನಾವ್ಯಾಕೆ ಟಾಂಟ್ ಕೊಡಬೇಕು? ಯಶ್, ಶಿವಣ್ಣ, ಧ್ರುವ ಉಪ್ಪಿಗೆ ಬಾಸ್ ಅಂತ ಕರಿಯೋದಿಲ್ವಾ? ನನಗೂ ದರ್ಶನ್ ಗೂ ಏನು ಇಲ್ಲ ಸರ್… ದರ್ಶನ್ ನಾನು ಇಬ್ರು ಕಷ್ಟ ಪಟ್ಟು ಮೇಲೆ ಬಂದಿದ್ದೀವಿ. ನನ್ನ ಫ್ಯಾನ್ಸ್ ಎಲ್ಲಾ ಹೀರೋಗಳ ಸಿನಿಮಾ ನೋಡ್ತಾರೆ. ಕೆಟ್ಟ ಅಹಂಕಾರ ನಮ್ಮಲಿ ಇದೆ ಅಂದು ಕೊಂಡಿರೋದೇ ತಪ್ಪು ಎಂದು ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx