ತುಮಕೂರು: ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಗಳು, ಶಿಕ್ಷಣ ಭೀಷ್ಮ ಡಾ. ಹೆಚ್.ಎಂ. ಗಂಗಾಧರಯ್ಯ ರವರ ಸ್ಮರಣಾರ್ಥ ಜನವರಿ 11ರಂದು ಸಿದ್ಧಾರ್ಥ ಗಾನ ಕಲಾ ಸಂಭ್ರಮ—29 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಪ್ರತಿವರ್ಷದಂತೆ ತುಮಕೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಜನಪದಗೀತೆ, ಭಾವಗೀತೆ ಮತ್ತು ಚಿತ್ರಕಲಾಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ತುಮಕೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪದವಿ ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಲು ಕೋರಲಾಗಿದೆ. ಸಿದ್ದಾರ್ಥ ಕಾಲೇಜಿನ ಡಾ.ಕೆ.ಎಂ.ಗಂಗಾಧರಯ್ಯ ಸಭಾಂಗಣದಲ್ಲಿ ಸ್ಪರ್ಧೆ ನಡೆಯಲಿದೆ.
ಸ್ಪರ್ಧೆಯ ನಿಯಮಗಳು :
* ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಬಹುದು.
* ಪ್ರತಿ ಸ್ಪರ್ಧಿಗೆ 4-5 ನಿಮಿಷಗಳ ಕಾಲಾವಧಿಯನ್ನು ನಿಗಧಿ ಮಾಡಲಾಗುವುದು.
* ಪ್ರತಿ ಸ್ಪರ್ಧೆಗೆ ಪ್ರಥಮ ಬಹುಮಾನ ರೂ. 1000, ದ್ವಿತೀಯ ಬಹುಮಾನ ರೂ.750, ತೃತೀಯ ಬಹುಮಾನ ರೂ 500. ಹಾಗೂ ಪ್ರಶಸ್ತಿ ಪತ್ರವನ್ನು ನೀಡಲಾಗುವುದು.
* ಸ್ಪರ್ಧೆಗೆ ಭಾಗವಹಿಸುವವರು ದಿನಾಂಕ. 10-01-2025 ರೊಳಗೆ ಪ್ರವೇಶ ಪತ್ರವನ್ನು ಕಳುಹಿಸಬೇಕು. ಅಥವಾ ಸ್ಥಳದಲ್ಲೇ ನೊಂದಾಯಿಸಲು ಸಹ ಅವಕಾಶವಿದೆ.
* ಸ್ಪರ್ಧಿಗಳಿಗೆ ಊಟದ ವ್ಯವಸ್ಥೆ ಇರುತ್ತದೆ.
* ಪ್ರವೇಶ ಶುಲ್ಕವಿರುವುದಿಲ್ಲ. ಚಿತ್ರಕಲೆಗೆ ಅವಶ್ಯಕವಿರುವ ಪರಿಕರಗಳನ್ನು ತಾವೇ ತರುವುದು.
* ಭಾಗವಹಿಸುವ ವಿದ್ಯಾರ್ಥಿ ಕಾಲೇಜಿನ ಗುರುತಿನ ಪತ್ರವನ್ನು ಕಡ್ಡಾಯವಾಗಿ ತರುವುದು.
* ತೀರ್ಪುಗಾರರ ತೀರ್ಮಾನವೇ ಅಂತಿಮ.
ಹೆಚ್ಚಿನ ಮಾಹಿತಿಗಾಗಿ ಡಾ.ಪಿ.ಹೇಮಲತಾ ಪ್ರಾಂಶುಪಾಲರು, ಶ್ರೀ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜು, ತುಮಕೂರು—9480186500, ಪ್ರೊ. ರಮೇಶ್ ಮಣ್ಣೆ ಸಂಚಾಲಕರು, ಸಾಂಸ್ಕೃತಿಕ ವಿಭಾಗ & ಮುಖ್ಯಸ್ಥರು ಕನ್ನಡ ವಿಭಾಗ ಶ್ರೀ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜು, ತುಮಕೂರು–9740369556 ಇವರನ್ನು ಸಂಪರ್ಕಿಸಬಹುದು.
ವರದಿ: ನಂದೀಶ್ ನಾಯ್ಕ, ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx