nammatumakuru

    Subscribe to Updates

    Get the latest creative news from FooBar about art, design and business.

    What's Hot

    ಅಣೆಕಟ್ಟುಗಳ ಸುರಕ್ಷತಾ ಮಾನದಂಡಗಳು ರಾಜಕೀಯ ಗಡಿಗಳಿಗೆ ಸೀಮಿತವಾಗಿರಬಾರದು: ಸಿಎಂ ಸಿದ್ದರಾಮಯ್ಯ

    February 13, 2026

    ಶಾಸಕ ಅನಿಲ್ ಚಿಕ್ಕಮಾದುರವರ 38ನೇ ಹುಟ್ಟುಹಬ್ಬ: ಆಸ್ಪತ್ರೆ ರೋಗಿಗಳಿಗೆ ಹಣ್ಣುಹಂಪಲು

    February 13, 2026

    ಲಿಂಗಮ್ಮನಹಳ್ಳಿಯಲ್ಲಿ 150ನೇ ನೂತನ ಹಾಲು ಉತ್ಪಾದಕರ ಸಹಕಾರ ಸಂಘದ ಉದ್ಘಾಟನೆ

    February 13, 2026
    Facebook Twitter Instagram
    ಟ್ರೆಂಡಿಂಗ್
    • ಅಣೆಕಟ್ಟುಗಳ ಸುರಕ್ಷತಾ ಮಾನದಂಡಗಳು ರಾಜಕೀಯ ಗಡಿಗಳಿಗೆ ಸೀಮಿತವಾಗಿರಬಾರದು: ಸಿಎಂ ಸಿದ್ದರಾಮಯ್ಯ
    • ಶಾಸಕ ಅನಿಲ್ ಚಿಕ್ಕಮಾದುರವರ 38ನೇ ಹುಟ್ಟುಹಬ್ಬ: ಆಸ್ಪತ್ರೆ ರೋಗಿಗಳಿಗೆ ಹಣ್ಣುಹಂಪಲು
    • ಲಿಂಗಮ್ಮನಹಳ್ಳಿಯಲ್ಲಿ 150ನೇ ನೂತನ ಹಾಲು ಉತ್ಪಾದಕರ ಸಹಕಾರ ಸಂಘದ ಉದ್ಘಾಟನೆ
    • ಜ್ಯೋತಿಷಿ ಮಾತು ನಂಬಿ ತಾಯಿಯನ್ನೇ ಕೊಂದ ಮಗಳು: ಸಿನಿಮೀಯ ರೀತಿ ಕಥೆ ಬಯಲಾಗಿದ್ದು ಹೇಗೆ?
    • ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪಗೆ ಪಕ್ಷದಲ್ಲೇ ಪ್ರತಿಸ್ಪರ್ಧಿ | ವಿಧಾನ ಸಭಾ ಚುನಾವಣೆಗೆ ನಾನು ಸ್ಪರ್ಧಾಕಾಂಕ್ಷಿ ಎಂದ ದೊಡ್ಡಘಟ್ಟ ಚಂದ್ರೇಶ್
    • ಕ್ವಿಂಟಾಲ್‌ ಗೆ 4,886 ರೂ.: ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ | ಶಾಸಕ ಕೆ.ಷಡಕ್ಷರಿ
    • ಬೆಂಗಳೂರು ರೇಸ್‌ ಕೋರ್ಸ್ ತುಮಕೂರಿನ ಕುಣಿಗಲ್‌ ಗೆ ಸ್ಥಳಾಂತರ: ಸಂಪುಟ ನಿರ್ಣಯ
    • ವಿದ್ಯುತ್ ಖಾಸಗೀಕರಣ, ಬೀಜ ಮಸೂದೆ ವಿರುದ್ಧ ಕಾರ್ಮಿಕ ಸಂಘಟನೆಗಳ ಪ್ರತಿಭಟನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಪತ್ನಿಯ ಕೈ ತಪ್ಪಿದ ತುಮುಲ್ ಅಧ್ಯಕ್ಷ ಸ್ಥಾನ: ಸಚಿವ ಪರಮೇಶ್ವರ್, ರಾಜಣ್ಣ ವಿರುದ್ಧ ಸಿಡಿದೆದ್ದ ಎಸ್.ಆರ್. ಶ್ರೀನಿವಾಸ್  
    ತುಮಕೂರು January 23, 2025

    ಪತ್ನಿಯ ಕೈ ತಪ್ಪಿದ ತುಮುಲ್ ಅಧ್ಯಕ್ಷ ಸ್ಥಾನ: ಸಚಿವ ಪರಮೇಶ್ವರ್, ರಾಜಣ್ಣ ವಿರುದ್ಧ ಸಿಡಿದೆದ್ದ ಎಸ್.ಆರ್. ಶ್ರೀನಿವಾಸ್  

    By adminJanuary 23, 2025No Comments2 Mins Read
    s r shrinivas

    ತುಮಕೂರು:  ಶಾಸಕ ಎಸ್.ಆರ್. ಶ್ರೀನಿವಾಸ್ ಪತ್ನಿಗೆ  ತುಮುಲ್ ಅಧ್ಯಕ್ಷ ಸ್ಥಾನ ಕೈ ತಪ್ಪಿದ ಹಿನ್ನೆಲೆ ಇಬ್ಬರು ಸಚಿವರ ವಿರುದ್ಧ ಗುಬ್ಬಿ ಕಾಂಗ್ರೆಸ್ ಶಾಸಕ ಎಸ್.ಆರ್. ಶ್ರೀನಿವಾಸ್  ಸಿಡಿದೆದ್ದಿದ್ದಾರೆ.

    ಸಚಿವ ಪರಮೇಶ್ವರ್ ಹಾಗೂ ಕೆ.ಎನ್.ರಾಜಣ್ಣ ವಿರುದ್ಧ ಶಾಸಕ ಎಸ್.ಆರ್. ಶ್ರೀನಿವಾಸ್ ಅಸಮಾಧಾನ  ವ್ಯಕ್ತಪಡಿಸಿದ್ದು,  ಜಿಲ್ಲೆಯಲ್ಲಿ ತೊಘಲಕ್ ಆಡಳಿತ ನಡೆಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


    Provided by
    Provided by

    ಇಬ್ಬರು ಸಚಿವರಿಂದ ತೊಘಲಕ್ ಆಡಳಿತ ನಡೆಯುತ್ತಿದೆ. ಜಿಲ್ಲೆಯಲ್ಲಿ ಏನ್ ನಡಿತಿದೆ ಅನ್ನೋದೆ ಗೊತ್ತಾಗ್ತಿಲ್ಲ. ಇಬ್ಬರು ಮಂತ್ರಿಗಳು ಸೇರಿಕೊಂಡು ಏನ್ ಮಾಡ್ಬೇಕು ಅದನ್ನ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಮ್ಮನ್ನ ಮೀಟಿಂಗ್ ಗೂ ಸಹ ಕರಿತಿಲ್ಲ.  ಏನ್ ಮಾಡ್ತಿವಿ ಅಂತ ನಮ್ಮನ್ನ ಕೇಳ್ತಿಲ್ಲ. ತೊಘಲಕ್ ಆಡಳಿತ ಜಿಲ್ಲೆಯಲ್ಲಿ ನಡಿತಿದೆ.  ಪರಮೇಶ್ವರ್ ಗೆ ಪೋನ್ ಮಾಡಿ ಏನ್ ಹೇಳ್ಬೇಕು ಅದನ್ನೆಲ್ಲಾ ಹೇಳಿದಿನಿ.  ಆ ಇಬ್ಬರು ಸಾಮಾಜಿಕ ನ್ಯಾಯ ಕೊಡೋ ಹರಿಕಾರರು. ಎಡಗೈ ಜನಾಂಗಕ್ಕೆ ಅನ್ಯಾಯ ಆಗಿದೆ. ಇಡೀ ಜಿಲ್ಲೆಯಲ್ಲಿ ಎಸ್ ಟಿ, ಭೋವಿಗಳನ್ನ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಬಲಗೈ ಸಮುದಾಯದವರು ಮಿನಿಸ್ಟರ್ ಇದ್ದಾರೆ.  ಲಿಂಗಾಯತರು, ಒಕ್ಕಲಿಗರು ಎಂಎಲ್ ಎಗಳು ಇದ್ದಾರೆ. ಅನ್ಯಾಯ ಆಗಿರೋದು ಹಿಂದುಳಿದ ವರ್ಗ ಬಲಗೈ ಸಮುದಾಯಕ್ಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮುಂದೆ ಡಿಸಿಸಿ ಬ್ಯಾಂಕ್ ಚುನಾವಣೆ ಬರುತ್ತೆ‌‌,  ಯಾರಾದ್ರು ಒಬ್ಬ ಎಡಗೈ ಸಮುದಾಯದವರನ್ನ ಅಧ್ಯಕ್ಷರನ್ನಾಗಿ ಮಾಡಿದ್ರೆ.  ಇವರು ಸಾಮಾಜಿಕ ನ್ಯಾಯದ ಹರಿಕಾರರು ಅಂತ ನಾನು ಅಂದುಕೊಳ್ತಿನಿ, ನಾನು ಸ್ವಾಗತ ಮಾಡ್ತಿನಿ ಎಂದರು.

    ಜಿಲ್ಲೆಯಲ್ಲಿ ಎರಡು ಮೀಸಲು ಕ್ಷೇತ್ರ ಇದೆ.  ಆ ಮೀಸಲು ಕ್ಷೇತ್ರದಲ್ಲಿ ಒಬ್ಬರು ಭೋವಿ ಜನಾಂಗ,  ಮತ್ತೊಬ್ಬರು ಬಲಗೈ ಜನಾಂಗ ಗೆದ್ದಿದ್ದಾರೆ. ಎಡಗೈ ನವರು ಇನ್ನು ಶೋಷಿತರಾಗಿಯೇ ಇದ್ದಾರೆ. ಈ ಸಮುದಾಯಕ್ಕೆ ನ್ಯಾಯ ಸಿಗ್ಬೇಕು ಅಂದ್ರೆ ಮುಂದಿನ ದಿನಗಳಲ್ಲಿ ಡಿಸಿಸಿ ಬ್ಯಾಂಕ್ ಗೆ ನಾಮಿನಿ ಮಾಡಿ ಅಧ್ಯಕ್ಷ ಸ್ಥಾನ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

    ಸರ್ಕಾರದ್ದು ಇದರಲ್ಲಿ ಏನು ಪಾತ್ರ ಇಲ್ಲ.  ಇಬ್ಬರು ಸಚಿವರ ವರ್ತನೆ ಬಗ್ಗೆ ನಾನು ಸಿಎಂ‌ ಗಮನಕ್ಕೆ ತಂದಿದ್ದೆ.  ಸಹಕಾರ ಸಚಿವ ಹಾಗೂ ಗೃಹ ಸಚಿವರಿಗೆ ಹೇಳ್ತಿನಿ ಅಂತ ಹೇಳಿದ್ರು. ಜಿಲ್ಲೆಯಲ್ಲಿ ಯಾರದ್ದು ನಡಿತಿದೆ, ಏನ್ ನಡಿತಿದೆ ಯಾರಿಗೂ ಗೊತ್ತಾಗ್ತಿಲ್ಲ.  ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಿಲ್ಕ್ ಯುನಿಯನ್ ಗೆ ನಾಮಿನಿ ಸದಸ್ಯರನ್ನ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಇವರು ಮಾತು ಎತ್ತಿದ್ದರೆ ಶೋಷಿತ ವರ್ಗಕ್ಕೆ ನ್ಯಾಯ ಕೊಡ್ತಿವಿ ಅಂತಾರೆ.  ನೋಡಿದ್ರೆ ಶೋಷಿತರನ್ನ ಇವರು ನಿಷ್ಕೃಷ್ಟವಾಗಿ ಕಾಣ್ತಿದ್ದಾರೆ.  ಅಧ್ಯಕ್ಷರ ಆಯ್ಕೆ ಬಗ್ಗೆ ಜಿಲ್ಲೆಯಲ್ಲಿ ಒಬ್ಬರನ್ನು ಮಾತಾಡಿಸಿಲ್ಲ. ಇದು ಒಂಥರ ತೊಘಲಕ್ ದರ್ಬಾರ್ ನಡಿತಿದೆ.  ಎಲ್ಲರನ್ನೂ ನಿರ್ಲಕ್ಷ್ಯ ಮಾಡಿದ್ದಾರೆ. ಯಾವ್ ಎಂಎಲ್ ಎ ಹತ್ರನು ಮಾತಾಡಿಲ್ಲ.  ಇವರಿಬ್ಬರಿದ್ದರು ಸಾಕು ಇಡೀ ಜಿಲ್ಲೆಯನ್ನೇ ಕಂಟ್ರೋಲ್ ಮಾಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ 11 ಕ್ಕೆ 11 ಗೆಲ್ಲಿಸಿಕೊಂಡು ಬರ್ತಾರೆ.  ಬೇರೆಯವರು ಯಾರು ಬೇಡ, ಇವರಿಬ್ಬರು ಇದ್ರೆ ಎಲ್ಲಾ ಆಗಿಹೋಗುತ್ತೆ.  ನನಗೆ ಕಾಂಗ್ರೆಸ್ ಪಕ್ಷದಿಂದ ತಪ್ಪು ಮಾಡಿಲ್ಲ. ನಾವು ಎಂಎಲ್ ಎ ಗಳಿದ್ದೀವಿ, ನಮ್ಮನ್ನ ಕೇಳಲಿಲ್ಲವಲ್ಲ ಅನ್ನೋದು ನಮಗೆ ಅಸಮಾಧಾನ ಇದೆ ಎಂದರು.

    ಮೊನ್ನೆ ಸಿಎಲ್ ಪಿ ಮೀಟಿಂಗ್ ಇತ್ತು. ಆ ಮೀಟಿಂಗ್ ಬಳಿಕ ಎಲ್ಲರೂ ಸೇರಿ ಗೃಹ ಸಚಿವ ಪರಮೇಶ್ವರ್ ಜೊತೆ ಮಾತಾಡಿದ್ದೀವಿ‌. ರಾಜಣ್ಣ ಸಹ ಇದ್ರು, ಮೀಟಿಂಗ್ ಕರೆಯುತ್ತೇವೆ ಅಂದ್ರು ರಾಜಣ್ಣ ನಾನು ಬರ್ತಿನಿ ಅಂದ್ರು.  ಅದಾದ ಮೇಲೆ ಎಲ್ಲಿದ್ದೀರಾ..? ಯಾರು, ಏನು ಒಂದು ಗೊತ್ತಿಲ್ಲ. ಒಂದು ರೀತಿಯಲ್ಲಿ ತೊಘಲಕ್ ಆಡಳಿತ ನಡೆಸ್ತಿದ್ದಾರೆ. ಸರ್ಕಾರದ ವಿರುದ್ಧ ನನ್ನ ಅಸಮಾಧಾನ ಇಲ್ಲ. ಸಚಿವರ ವಿರುದ್ಧವೂ ಅಸಮಾಧಾನ ಇಲ್ಲ.  ಅವರ ನಡವಳಿಕೆ ವಿರುದ್ಧ ಅಸಮಾಧಾನ ಇರೋದು‌. ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಅಲ್ವಾ.? ನಮ್ಮಿಂದ ತಾನೆ ಇವರು ಗೆದ್ದು ಮಿನಿಸ್ಟರ್ ಆಗಿದ್ದು.  ವೆಂಕಟೇಶ್ ನಾ ನಾಮಿನಿ ಮಾಡ್ತಿವಿ ಅಂತ ಒಂದು ಮಾತು ಕೇಳ್ಬೆಕಿತ್ತು ಅಲ್ವಾ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

    admin
    • Website

    Related Posts

    ಜ್ಯೋತಿಷಿ ಮಾತು ನಂಬಿ ತಾಯಿಯನ್ನೇ ಕೊಂದ ಮಗಳು: ಸಿನಿಮೀಯ ರೀತಿ ಕಥೆ ಬಯಲಾಗಿದ್ದು ಹೇಗೆ?

    February 13, 2026

    ಬೆಂಗಳೂರು ರೇಸ್‌ ಕೋರ್ಸ್ ತುಮಕೂರಿನ ಕುಣಿಗಲ್‌ ಗೆ ಸ್ಥಳಾಂತರ: ಸಂಪುಟ ನಿರ್ಣಯ

    February 13, 2026

    ವಿದ್ಯುತ್ ಖಾಸಗೀಕರಣ, ಬೀಜ ಮಸೂದೆ ವಿರುದ್ಧ ಕಾರ್ಮಿಕ ಸಂಘಟನೆಗಳ ಪ್ರತಿಭಟನೆ

    February 13, 2026

    Comments are closed.

    Our Picks

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026

    ದೈಹಿಕ ಸಂಬಂಧದಲ್ಲಿ ತೃಪ್ತಿಯಿಲ್ಲ: ಮದುವೆಯಾದ ಒಂದೇ ತಿಂಗಳಲ್ಲಿ ಗಂಡನನ್ನು ತೊರೆದ ಪತ್ನಿ!

    February 3, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಅಣೆಕಟ್ಟುಗಳ ಸುರಕ್ಷತಾ ಮಾನದಂಡಗಳು ರಾಜಕೀಯ ಗಡಿಗಳಿಗೆ ಸೀಮಿತವಾಗಿರಬಾರದು: ಸಿಎಂ ಸಿದ್ದರಾಮಯ್ಯ

    February 13, 2026

    ಬೆಂಗಳೂರು: ಅಣೆಕಟ್ಟುಗಳ ಸುರಕ್ಷತೆ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. “ನೀರು ಯಾವುದೇ ರಾಜಕೀಯ…

    ಶಾಸಕ ಅನಿಲ್ ಚಿಕ್ಕಮಾದುರವರ 38ನೇ ಹುಟ್ಟುಹಬ್ಬ: ಆಸ್ಪತ್ರೆ ರೋಗಿಗಳಿಗೆ ಹಣ್ಣುಹಂಪಲು

    February 13, 2026

    ಲಿಂಗಮ್ಮನಹಳ್ಳಿಯಲ್ಲಿ 150ನೇ ನೂತನ ಹಾಲು ಉತ್ಪಾದಕರ ಸಹಕಾರ ಸಂಘದ ಉದ್ಘಾಟನೆ

    February 13, 2026

    ಜ್ಯೋತಿಷಿ ಮಾತು ನಂಬಿ ತಾಯಿಯನ್ನೇ ಕೊಂದ ಮಗಳು: ಸಿನಿಮೀಯ ರೀತಿ ಕಥೆ ಬಯಲಾಗಿದ್ದು ಹೇಗೆ?

    February 13, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.