ತಿಪಟೂರು: ಭೂಮಿ ಥಿಯೇಟರ್ ಹಾಗೂ ಜನಸ್ಪಂದನ ಟ್ರಸ್ಟ್ ಇವರ ಸಹಯೋಗದೊಂದಿಗೆ ತಿಪಟೂರಿನ ಬಯಲು ರಂಗ ಮಂದಿರದಲ್ಲಿ ಇದೇ ತಿಂಗಳು ಫೆಬ್ರವರಿ 2ನೇ ತಾರೀಖಿನವರೆಗೆ ನಾಟಕವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರ್ ತಿಳಿಸಿದರು.
ನಾಲ್ಕು ದಿನಗಳ ಕಾಲ ನಡೆಯುವ ರಂಗ ಉತ್ಸವದ ಪ್ರಯುಕ್ತ ಮಾಲತಿ ಮಾಧವ್, ಅಂಕದ ಪರದೆ, ತಿಂಡಿಗೆ ಬಂದ ತುಂಡೇರಾಯ, ಹಾಗೂ ಬಾಬಾ ಮರ್ಲಿಂಗ್ ಫಾರ್ಮ್ ಕೊಡಿಹಳ್ಳಿ ಎಂಬ ನಾಟಕದ ಪ್ರದರ್ಶನವು ನಡೆಯಲಿದ್ದು, ಕಲಾಸಕ್ತರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಜನ ಸ್ಪಂದನ ಟ್ರಸ್ಟ್ ನ ಅಧ್ಯಕ್ಷ ಸಿ.ಬಿ. ಶಶಿಧರ್ ಮಾತನಾಡಿ, ತಿಪಟೂರು ನಗರದ ಭೂಮಿ ಥಿಯೇಟರ್ ಸುಮಾರು 30 ವರ್ಷಗಳಿಂದ ರಂಗಭೂಮಿಗೆ ತನ್ನದೇ ಕೊಡುಗೆಗಳನ್ನು ನೀಡಿದ್ದು, ಮುಂದೆಯೂ ತಿಪಟೂರು ಸತೀಶ್ ರವರ ಮೂಲಕ ಇನ್ನು ಅನೇಕ ನಾಟಕಗಳನ್ನು ನಗರದಲ್ಲಿ ನಡೆಸಲಾಗುವುದು ಎಂದರು.
ಈ ಕಾರ್ಯಕ್ರಮಗಳನ್ನು ಸಾರ್ವಜನಿಕರು ಪ್ರೋತ್ಸಾಹಿಸಬೇಕು ಮತ್ತು ಈ ಮೂಲಕ ಯಶಸ್ವಿಗೊಳಿಸಬೇಕೆಂದು ತಿಳಿಸಿದರು
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4