ಧಾರವಾಡ: ಜಾಗತೀಕರಣ ಹಾಗೂ ಉದಾರೀಕರಣದ ಇಂದಿನ ಕಾಲಘಟ್ಟದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಯಲ್ಲಿ ಸಾಮಾಜಿಕ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಾಗ ಮಾನವ, ಸಂಘಟನೆಗಳು ಯಶಸ್ಸು ಕಾಣಲು ಸಾಧ್ಯ ಎಂದು ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಕಾರ್ಯಧ್ಯಕ್ಷರಾದ ಪದ್ಮಪ್ರಕಾಶ್ ತಿಳಿಸಿದರು.
ಅವರಿಂದು ಧಾರವಾಡದಲ್ಲಿ ನಡೆದ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಪ್ರಥಮ ವಲಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೈನ ಸಮಾಜದ ಅಭಿವೃದ್ಧಿಯ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನ ಹೊತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಸಮಾಜದ ಅಭಿವೃದ್ಧಿಗೆ ಪ್ರಗತಿಪರ ಕಾಳಜಿ ಹೊಂದಿ ಕಾರ್ಯಕ್ರಮ ಗಳನ್ನ ರೂಪಿಸಬೇಕು ಎಂದು ಸಲಹೆ ನೀಡಿದರು.
ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಉಪಾಧ್ಯಕ್ಷರು ಹಾಗೂ ರತ್ನತ್ತ್ರೆಯ ಕ್ರಿಯೇಷನ್ ನಿರ್ದೇಶಿಕ ಡಾ.ನೀರಜಾ ನಾಗೇಂದ್ರ ಕುಮಾರ್ ಮಾತನಾಡಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮಹಿಳಾ ಸಮಾಜಗಳು ಕಾರ್ಯ ಪ್ರವೃತ್ತರಾಗಬೇಕು. ಅಲ್ಲದೇ ಮಹಿಳಾ ಸಮಾಜದ ಕಾರ್ಯದರ್ಶಿಗಳು ತಮ್ಮ ಸಮಾಜದ ಕಾರ್ಯಕ್ರಮಗಳ ಬಗ್ಗೆ ವರದಿ ಮಾಡಬೇಕೆಂದರು.
ಕಾರ್ಯಕ್ರಮದಲ್ಲಿ ಡಾ. ಪದ್ಮಲತಾ ನಿರಂಜನ್ ಒಕ್ಕೂಟದ ಬಗ್ಗೆ ಅರ್ಥಪೂರ್ಣ ನುಡಿಗಳನ್ನಾಡಿ ಸಮಾಜದಲ್ಲಿನ ಜವಾಬ್ದಾರಿ, ಕಾಳಜಿಗಳ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾ.ನಿರಂಜನ್, ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಉಪಾಧ್ಯಕ್ಷರಾದ ಚಂದ್ರಕಲಾ ಸೋಲಾಪುರೆ, ನಿರ್ದೇಶಕರುಗಳು, ಧಾರವಾಡ — ಹುಬ್ಬಳ್ಳಿ ವಲಯಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಕಾರ್ಯದರ್ಶಿ ಹರ್ಷ ನಾಗರಾಜ್ ಪ್ರಾಸ್ತಾವಿಕ ನುಡಿಗಳ ನಾಡಿ ಮಹಿಳಾ ಒಕ್ಕೂಟ ನಡೆದು ಬಂದ ಹಾದಿ, ಪ್ರಸ್ತುತ ಕಾರ್ಯಕ್ರಮಗಳು ಇನ್ನಿತರ ಬಗ್ಗೆ ಮಾಹಿತಿ ನೀಡಿದರು.
ಧಾರವಾಡದ ಸಮ್ಯಕ್ ಪ್ರಜ್ಞ ಮಹಿಳಾ ಸಮಾಜದ ಕಾರ್ಯಕರ್ತರು ಗಳು ಆತಿಥ್ಯ ವಹಿಸಿದ್ದರು. ಭವ್ಯ ಮೆರವಣಿಗೆಯೊಂದಿಗೆ ವೇದಿಕೆಯಲ್ಲಿ ಜನ ಬಿಂಬ ಪ್ರತಿಷ್ಠಾಪಿಸಲಾಯಿತು.
ಇದೇ ಸಂದರ್ಭದಲ್ಲಿ ಕಾರ್ಯದರ್ಶಿಗಳು ತಮ್ಮ ಮಹಿಳಾ ಸಂಘಗಳು ಹಮ್ಮಿಕೊಂಡಿದ್ದ ಕಾರ್ಯಕ್ರಮಗಳ ವರದಿ ಮಂಡಿಸಿದರು. ಕೆಲವು ವಲಯ ನಿರ್ದೇಶಕರುಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಮಂತ್ರದೊಂದಿಗೆ ಸಭೆ ಆರಂಭವಾಯಿತು. ವರ್ಷ ಸುಧೀರ್ ಪ್ರಾರ್ಥಿಸಿದರು . ಜಂಟಿ ಕಾರ್ಯದರ್ಶಿ ಕವಿತಾ ಸ್ವಾಗತಿಸಿದರು .
ವರದಿ: ಜೆ. ರಂಗನಾಥ, ತುಮಕೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx