ತುಮಕೂರು: ನಗರದ ಜಯನಗರದಲ್ಲಿರುವ ಕ್ಯಾಲ್ಸಿ ಅಬಾಕಸ್ ಶಾಲೆಯ ಬಾಲಕ ಕುಮಾರ ಅನಿಶ್ ಎಂ. ಅವರು ಹುಬ್ಬಳಿಯಲ್ಲಿ ರೇಡಿಯಂಟ್ ಮೆಂಟಲ್ ಅರ್ಥಮೆಟಿಕ್ ಸಂಸ್ಥೆ ನಡೆಸಿದ ರಾಜ್ಯ ಮಟ್ಟದ ಅಬ್ಯಾಕಸ್ ಮೆಂಟಲ್ ಅರ್ಥಮೆಟಿಕ್ಸ್ ಸ್ಪರ್ಧೆಯಲ್ಲಿ ಚಾಂಪಿಯನ್ ಬಹುಮಾನ ಪಡೆದಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತುಮಕೂರಿನ ಕ್ಯಾಲ್ಸಿ ಅಬಾಕಸ್ ಶಾಲೆಯ ಮಕ್ಕಳಿಗೆ ರೆಡಿಮೆಂಟ್ ಅಕಾಡೆಮಿ ಸಂಸ್ಥೆಯ ಮುಖ್ಯಸ್ಥರಾದ ಗೀತಾ ಕಬಾಡಿ ಅವರು ಪ್ರಶಸ್ತಿಗಳನ್ನು ವಿತರಿಸಿದರು. ಟೇಬಲ್ ಟೆಲ್ಲಿಂಗ್ ಪ್ರಕ್ರಿಯೆಯನ್ನು ಕಲಿಯವುದರಿಂದ ಮಕ್ಕಳ ಮೆದುಳಿನ ಪ್ರಕ್ರಿಯೆ ವೇಗಗೊಳ್ಳುತ್ತದೆ. ಗಣಿತಶಾಸ್ತ್ರದಲ್ಲಿ ಹೆಚ್ಚು ಪರಿಣಿತಿ ಸಾಧಿಸುತ್ತಾರೆಂದು ಗೀತಾ ಕಬಾಡಿ ಹೇಳಿದರು.
ತುಮಕೂರಿನ ಕ್ಯಾಲ್ಸಿ ಅಬಾಕಸ್ ಸಂಸ್ಥೆಯ ಮುಖ್ಯಸ್ಥರಾದ ಸಂತೋಷ, ಪ್ರಾಂಶುಪಾಲರಾದ ಸೌಮ್ಯ. ಎಸ್. ಶಿರೂರ್ ಮತ್ತು ಶಿಕ್ಷಕಿ ಚೇತನ ಅವರು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಹಾಜರಿದ್ದರು.
19 ಮಕ್ಕಳಿಗೆ ಪ್ರಶಸ್ತಿ:
ಹುಬ್ಬಳಿಯಲ್ಲಿ ರೇಡಿಯಂಟ್ ಮೆಂಟಲ್ ಅರ್ಥಮೆಟಿಕ್ ಸಂಸ್ಥೆ ನಡೆಸಿದ ಅಬಾಕಸ್ ಮೆಂಟೆಲ್ ಅರ್ಥಮಿಟಿಕ್ಸ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ 60 ವಿದ್ಯಾರ್ಥಿಗಳಲ್ಲಿ ಚಾಂಪಿಯನ್ ಪಟ್ಟ ಪಡೆದಿರುವುದು ಸೇರಿದಂತೆ 19 ಮಂದಿ ಮಕ್ಕಳು ಪ್ರಶಸ್ತಿ ಗಳಿಸಿದ್ದಾರೆ.
ಅಬಾಕಸ್ ಸ್ಪರ್ಧೆಯಲ್ಲಿ ಟಿ.ಎ. ನಿಕಲೇಶ್, ಪಿ.ಎಂ.ಸಮರ್ಥ, ಹರ್ಷಿಣಿ, ದಿಯಾನ್, ಪಿ.ಮಿತ್ರವಿಂದ, ಎಂ. ಇಥನ್, ದುಥಿ, ಶಿವಣ್ಣ. ಕೆ, ಮನ್ವಿತ್ ಸುವಾಸ, ಅನುಷಾ, ಶಿವಾಂಕ, ಗನೀಂಕ, ಪುನೀತ್ ರಾಜ್, ರೀತಿಕ್, ಹಸ್ಮಿತಾ, ನಾಗ ಚರಿತಾ, ಮನಸ್ವಿ, ಮೈತ್ರೀ ಮತ್ತು ಪರಿಣಿತಾ ಅವರು ಸಮಾಧಾನಕರ ಬಹುಮಾನ ಪಡೆದರು. ಅಲ್ಲದೆ ಇದೇ ಸಂಸ್ಥೆಯ 25 ಮಕ್ಕಳು ಅಬಾಕಸ್ ಕಲಿಕೆಯಲ್ಲಿ ಪದವಿ ಪಡೆದಿದ್ದಾರೆ. ಮಕ್ಕಳ ಈ ಸಾಧನೆಗೆ ಕ್ಯಾಲ್ಸಿ ಸಂಸ್ಥೆಯ ಶುಭ ಕೋರಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx