ಬೀದರ್: ಮಾರ್ಚ್ 21ರಿಂದ ಜರುಗಲಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸದ್ಯದ ಶೈಕ್ಷಣಿಕ ಚಟುವಟಿಕೆಯನ್ನು ವೀಕ್ಷಿಸಲು ಬೀದರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ನಗರದ ನೌಬಾದ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ ಮಕ್ಕಳ ಅಭ್ಯಾಸ ಕ್ರಮವನ್ನು ಪರಿಶೀಲಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಗಣಿತ ವಿಷಯ ಕುರಿತು ಸಂವಾದ ನಡೆಸಿ, ಈವರೆಗೆ ಕಲಿತ ಗಣಿತ ಪಾಠಗಳ ಪ್ರಶ್ನೆಗಳನ್ನು ಬಿಡಿಸುವಂತೆ ಹೇಳಿದಾಗ ವಿದ್ಯಾರ್ಥಿಗಳು ಒಂದೆರಡು ಪ್ರಶ್ನೆಗಳನ್ನು ಸರಾಗವಾಗಿ ಬಿಡಿಸಿದರು. ನಂತರ ಗಣಿತ ಪಠ್ಯ ಕ್ರಮದ ಒಂದೆರಡು ಪಾಠಗಳನ್ನು ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿಗಳು ಬೋಧಿಸಿದರು. ವಿದ್ಯಾರ್ಥಿಗಳಿಗೆ ಇನ್ನು ಹೆಚ್ಚಿನ ತರಬೇತಿಯನ್ನು ಹಾಗೂ ನಿರಂತರ ಪರೀಕ್ಷೆಯನ್ನು ವಾರಕ್ಕೊಮ್ಮೆ ಕೈಗೊಳ್ಳುವಂತೆ ಬೀದರ ತಾಲ್ಲೂಕಾ ಬಿಇಓ ಡಾ.ಬಿ.ಆರ್.ದೊಡ್ಡೆ ಇವರಿಗೆ ಸೂಚಿಸಿದರು.
ಈಗಾಗಲೇ ಡಿಸೆಂಬರ ತಿಂಗಳಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳ ಪಠ್ಯಕ್ರಮ ಪೂರ್ಣಗೊಂಡಿದ್ದು, ಉಳಿದ ಮೂರು ತಿಂಗಳಲ್ಲಿ ಪಠ್ಯಕ್ರಮ ಪುನರಾವರ್ತನೆ ಹಾಗೂ ಪಾಸಿಂಗ್ ಪ್ಯಾಕೇಜ್ ನಿಟ್ಟಿನಲ್ಲಿ ವಿಶೇಷ ತರಗತಿಗಳನ್ನು ನಿರಂತರವಾಗಿ ಬೋಧಿಸಲಾಗುತ್ತಿದೆ. ಸದ್ಯ ಬೀದರನಲ್ಲಿ ಸುಮಾರು 8 ಸಾವಿರ ವಿದ್ಯಾರ್ಥಿಳು ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯಲಿದ್ದಾರೆ ಎಂದು ಬೀದರ್ ತಾಲ್ಲೂಕಾ ಬಿಇಓ ಡಾ.ಬಿ.ಆರ್.ದೊಡ್ಡೆ ಅವರು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx