ತಿಪಟೂರು: ಕಲ್ಪತರು ಕ್ರೀಡಾಂಗಣದಲ್ಲಿ ಜನಸ್ಪಂದನ ಹಾಗೂ ಕ್ರೀಡಾ ಸಂಘದ ನೇತೃತ್ವದಲ್ಲಿ ಫೆಬ್ರುವರಿ 13 ರಿಂದ 4 ದಿನಗಳ ಕಾಲ ನಡೆಯುವ ಪುರುಷರು ಹಾಗೂ ಮಹಿಳೆಯರ ಒನಲುಬೆಳಕಿನ ಅಂತರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಗೆ ಸಂಪೂರ್ಣವಾಗಿ ಅಲಂಕಾರಗೊಂಡಿದೆ ಎಂದು ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ನವೀನ್ ತಿಳಿಸಿದರು.
ಈ ಕ್ರೀಡಾಕೂಟಕ್ಕೆ ಅಂತರರಾಷ್ಟ್ರೀಯ ವಾಲಿಬಾಲ್ ತಂಡಗಳಾದ ಕೇರಳ ಪೊಲೀಸ್, ವಾಯು ಸೇನೆ, ಹಾಗೂ ಭಾರತೀಯ ಭೂಸೇನೆ, ಹಾಗೂ ಅನೇಕ ಕ್ರೀಡಾ ತಂಡಗಳು ಭಾಗವಹಿಸಲಿದ್ದು, 13ರಂದು ಸಂಜೆ 6 ಗಂಟೆಗೆ ಶಾಸಕ ಕೆ., ಷಡಕ್ಷರಿ ಉದ್ಘಾಟನೆ ಮಾಡಲಿದ್ದಾರೆ.
ಮಾಜಿ ಸಚಿವ ಮಾಧುಸ್ವಾಮಿ ಕ್ರೀಡಾ ಜ್ಯೋತಿ ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ ವಾಲಿಬಾಲ್ ಆಟಗಾರರಿಗೆ ಸನ್ಮಾನ, ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಇದೇ ಎರಡನೇ ದಿನ ಇಂಡಿಯನ್ ಕೋಕೋ ಫೆಡರೇಶನ್ ಉಪಾಧ್ಯಕ್ಷರು ಹಾಗೂ ರಾಜ್ಯ ಕೋಕೋ ಫೆಡರೇಶನ್ ಅಧ್ಯಕ್ಷ ಲೋಕೇಶ್ವರ್ ಉದ್ಘಾಟಿಸಲಿದ್ದಾರೆ, ಜನಸ್ಪಂದನ ಸಂಸ್ಥೆಯ ಅಧ್ಯಕ್ಷ ಸಿ.ಬಿ.ಶಶಿಧರ್ ರವರು ಆಟಗಾರರನ್ನು ಸನ್ಮಾನಿಸಲಿದ್ದು, 16ನೇ ತಾರೀಕು ಕಡೆಯ ದಿನ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಉದ್ಘಾಟಿಸಲಿದ್ದು, ಮಾಜಿ ಸಚಿವ ಬಿ.ಸಿ.ನಾಗೇಶ್ ಸನ್ಮಾನಿಸಲಿದ್ದಾರೆ. ಸಮಾರೋಪ ಸಮಾರಂಭವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್ ಉದ್ಘಾಟಿಸಲಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ವೈದ್ಯಾಧಿಕಾರಿ ಡಾ.ವಿವೇಚನ, ಡಾ.ಶ್ರೀಧರ್, ನಿಖಿಲ್, ರಾಜಣ್ಣ, ಶಿವ್ ಕುಮಾರ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಸುದ್ದಿಗೋಷ್ಠಿಯಲ್ಲಿ ವೀರಶೈವ ಮಹಾಸಭಾ ಹಾಸನ ಜಿಲ್ಲಾಧ್ಯಕ್ಷರಾದ ನವಿಲೇ ಪರಮೇಶ್, ನಗರಸಭಾ ಸದಸ್ಯರಾದ ಓಹಿಲಾ ಗಂಗಾಧರ್ , ಸಂಗಮೇಶ್ ಹಲವಾರು ಸಂಘ ಸದಸ್ಯರು ಭಾಗವಹಿಸಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4