nammatumakuru

    Subscribe to Updates

    Get the latest creative news from FooBar about art, design and business.

    What's Hot

    ತುಮಕೂರು ಉಪ ವಿಭಾಗಾಧಿಕಾರಿ ಮೇಲೆ ಸುಳ್ಳು ಆರೋಪ: ತುಮಕೂರು ಜಿಲ್ಲಾ ನಾಗರಿಕರ ಹಿತರಕ್ಷಣಾ ಸಮಿತಿ ಖಂಡನೆ

    November 28, 2025

    ಕಲಾವಿದರಿಗೆ ಧನ ಸಹಾಯಕ್ಕಾಗಿ ಆನ್‌ ಲೈನ್‌ ಅರ್ಜಿ ಆಹ್ವಾನ

    November 28, 2025

    ಆಗ್ನೆಯ ಪದವೀಧರರ ಕ್ಷೇತ್ರದ ಚುನಾವಣೆ: ಮತದಾರರ ಪಟ್ಟಿಗೆ ನೋಂದಾಯಿಸಲು ಡಿ.10 ಕೊನೆಯ ದಿನ

    November 28, 2025
    Facebook Twitter Instagram
    ಟ್ರೆಂಡಿಂಗ್
    • ತುಮಕೂರು ಉಪ ವಿಭಾಗಾಧಿಕಾರಿ ಮೇಲೆ ಸುಳ್ಳು ಆರೋಪ: ತುಮಕೂರು ಜಿಲ್ಲಾ ನಾಗರಿಕರ ಹಿತರಕ್ಷಣಾ ಸಮಿತಿ ಖಂಡನೆ
    • ಕಲಾವಿದರಿಗೆ ಧನ ಸಹಾಯಕ್ಕಾಗಿ ಆನ್‌ ಲೈನ್‌ ಅರ್ಜಿ ಆಹ್ವಾನ
    • ಆಗ್ನೆಯ ಪದವೀಧರರ ಕ್ಷೇತ್ರದ ಚುನಾವಣೆ: ಮತದಾರರ ಪಟ್ಟಿಗೆ ನೋಂದಾಯಿಸಲು ಡಿ.10 ಕೊನೆಯ ದಿನ
    • ನ.28 ರಂದು ಪತ್ರಿಕಾ ವಿತರಕರ ಕ್ರೀಡಾಕೂಟದ ಬಹುಮಾನ ವಿತರಣೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ
    • ಡಿ.6–7ರಂದು ಶ್ರೀ ಅಯ್ಯಪ್ಪಸ್ವಾಮಿಯ ಚರಬಿಂಬ ಪ್ರತಿಷ್ಠಾಪನಾ ಮಹೋತ್ಸವ
    • ಮಹಿಳೆಗೆ ಚಾಕು ತೋರಿಸಿ ಚಿನ್ನದ ಸರ ಕಳವು!
    • ಡಕಾಯಿತಿಗೆ ಸಂಚು: ಐವರ ಬಂಧನ
    • ಪದವೀಧರರ ಮತದಾರರ ಕರಡು ಪಟ್ಟಿ ಪ್ರಕಟ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಪರಿಶಿಷ್ಠ ಜಾತಿ, ಪಂಗಡದವರು ಆರ್ಥಿಕವಾಗಿ ಸಬಲರಾದರೆ ಸಾಮಾಜಿಕ ಬದಲಾವಣೆ ಸಾಧ್ಯ: ತುಂಬುಲ ರಾಮಣ್ಣ
    ತುಮಕೂರು March 2, 2025

    ಪರಿಶಿಷ್ಠ ಜಾತಿ, ಪಂಗಡದವರು ಆರ್ಥಿಕವಾಗಿ ಸಬಲರಾದರೆ ಸಾಮಾಜಿಕ ಬದಲಾವಣೆ ಸಾಧ್ಯ: ತುಂಬುಲ ರಾಮಣ್ಣ

    By adminMarch 2, 2025No Comments2 Mins Read
    avss

    ತುಮಕೂರು: ಇಂದು ಉದ್ದೇಶಿತ ತುಮಕೂರು ತಾಲ್ಲೂಕು ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘ ನಿ., ಇದರ ಉದ್ಘಾಟನೆಯನ್ನು ನಗರದ ಬೀರೇಶ್ವರ ಕನ್ವೇನ್ಷನ್ ಹಾಲ್ ನಲ್ಲಿ ನೆರವೇರಿಸಲಾಯಿತು. ಇದಕ್ಕೂ ಮುಂಚಿತವಾಗಿ ಸದಾಶಿವನಗರದಲ್ಲಿ ಅಧಿಕೃತ ತಾಲ್ಲೂಕು ಕಛೇರಿಯ ಉದ್ಘಾಟನೆ ಮಾಡಲಾಯಿತು.

    ಕಾರ್ಯಕ್ರಮಕ್ಕೆ ಅಧ್ಯಕ್ಷತೆಯನ್ನು ಎವಿಎಸ್ ಎಸ್ ನ ರಾಜ್ಯಾಧ್ಯಕ್ಷರಾದ ತುಂಬುಲ ರಾಮಣ್ಣನವರು ವಹಿಸಿ ಮಾತನಾಡುತ್ತಾ, ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡದ ಸಮುದಾಯದವರು ಆರ್ಥಿಕವಾಗಿ ಸದೃಢರಾದಾಗ ಮಾತ್ರ ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಮುಂದೆ ಬರಲು ಸಾಧ್ಯ, ಆದ ಕಾರಣ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ವರ್ಗ ಸಮುದಾಯದವರು ಸ್ವ–ಸಹಾಯ ಸಂಘಗಳ ಮೂಲಕ ಆರ್ಥಿಕ ಪ್ರಗತಿಯನ್ನು ಕಾಣಬೇಕು ಎಂದರು.


    Provided by
    Provided by

    ದೇಶದಲ್ಲಿ ಅಂದಾಜು 45 ಕೋಟಿಯಷ್ಟು ಜನರು ದಲಿತ ಸಮುದಾಯಗಳಿಗೆ ಸೇರಿದವರಾಗಿದ್ದು ಅವರುಗಳೆಲ್ಲರೂ ರಾಷ್ಟ್ರೀಕೃತ ಹಾಗೂ ಕಾರ್ಪೋರೇಟ್ ಬ್ಯಾಂಕ್ ಗಳಲ್ಲಿ ವ್ಯವಹಾರವನ್ನು ಮಾಡದೇ ದಲಿತ ಸಮುದಾಯದ ವತಿಯಿಂದ ಸ್ಥಾಪಿಸಲಾಗಿರುವ ಸಹಕಾರ ಸಂಘಗಳಲ್ಲಿ ವ್ಯವಹಾರವನ್ನು ಮಾಡಿದ್ದಲ್ಲಿ ನಮ್ಮ ಸಮುದಾಯಗಳ ಏಳ್ಗೆ ಸಾಧ್ಯವಾಗುತ್ತದೆ, ಜೊತೆಗೆ ಸಹಕಾರ ಸಂಘಗಳು ನಡೆಯುವುದೇ ನಮ್ಮಗಳ ಪಾಲುದಾರಿಕೆಗಳಿಂದ ಎಂಬುದನ್ನು ನಾವು ಅರಿತುಕೊಳ್ಳಬೇಕು, ಸಹಕಾರ ಸಂಘಗಳಲ್ಲಿ ಸಾಮಾನ್ಯ ನಾಗರೀಕರು ಸಹ ಪಾಲುದಾರಿಕೆಯನ್ನು ಪಡೆಯುವುದರ ಮೂಲಕ ಅದರ ಉನ್ನತಿಗೆ ಶ್ರಮಿಸುವುದಲ್ಲದೇ ಅದನ್ನು ಇನ್ನಷ್ಟು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯವಲ್ಲಿ ಕಾಳಜಿ ವಹಿಸುತ್ತಾರೆ, ಆದುದರಿಂದ ದಲಿತ ಸಮುದಾಯದವರು ಆದಷ್ಟು ಸಹಕಾರ ಸಂಘಗಳ ಬ್ಯಾಂಕ್ಗಳಲ್ಲಿ ವ್ಯವಹಾರ ಮಾಡುವುದನ್ನು ರೂಢಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.

    ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪಾವನ ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ.ಪಾವನರವರು ಮಾತನಾಡಿ, ರಾಜ್ಯಾದ್ಯಂತ ಕಾರ್ಯಕ್ಷೇತ್ರವನ್ನು ಒಳಗೊಂಡಿರುವ ಎವಿಎಸ್ ಎಸ್ ಶಾಖೆಯು ತುಮಕೂರಿನಲ್ಲಿ ಉದ್ಘಾಟನೆಯಾಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ, ಇದರ ಬೆಳವಣಿಗೆಗೆ ಸಮುದಾಯದ ಪ್ರತಿಯೊಬ್ಬರೂ ಶ್ರಮಿಸಬೇಕಾಗಿದೆ ಎಂದು ತಿಳಿಸಿದರು.

    ಛಲವಾದಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಭಾನುಪ್ರಕಾಶ್ ಮಾತನಾಡಿ, ದಲಿತ ಸಮುದಾಯಗಳ ಮಾಲೀಕತ್ವದಲ್ಲಿ ಅಂದರೇ ಷೇರುಗಳನ್ನು ಪಡೆದು ಸಹಕಾರ ಸಂಘ / ಬ್ಯಾಂಕ್ ಗಳು ಸ್ಥಾಪಿತವಾಗಿವೆ, ಅವುಗಳಲ್ಲಿಯೇ ನಮ್ಮ ದೈನಂದಿನ ಹಣಕಾಸು ವ್ಯವಹಾರ ಮಾಡುವುದರಿಂದ ನಮ್ಮದೇ ಸಮುದಾಯದ ಸಹಕಾರ ಸಂಘಗಳು ಬೆಳೆಯಲು ಅನುಕೂಲವಾಗುತ್ತದೆ ಬ್ಯಾಂಕ್ ಗಳು ಬೆಳೆಯುವುದರೊಟ್ಟಿಗೆ ನಾವುಗಳು ಸಹ ಸಮಾಜದಲ್ಲಿ ಸದೃಢ ಬದುಕನ್ನು ಕಟ್ಟಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

    ಗುಬ್ಬಿ ತಾಲ್ಲೂಕಿನ ಚಾಲುಕ್ಯ ಆಸ್ಪತ್ರೆಯ ವೈದ್ಯರಾದ ಡಾ.ನಾಗಭೂಷಣ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ರವರು ಬರೆದ ಒಂದು ಲೇಖನ ದೇಶದ ಪ್ರಮುಖ ಬ್ಯಾಂಕ್ ಆದ ಆರ್.ಬಿ.ಐ. ಸ್ಥಾಪಿತವಾಗಲು ಬುನಾದಿಯಾಗಿರುವುದು ಇದೀಗ ಇತಿಹಾಸ, ಅದನ್ನು ಪ್ರತಿಯೊಬ್ಬರೂ ನೆನಪಿನಲ್ಲಿಟ್ಟುಕೊಳ್ಳಬೇಕು, ಜೊತೆಗೆ ಅವರ ಮಾದರಿಯಲ್ಲಿಯೇ ನಾವು ದೂರ ಚಿಂತನೆಯನ್ನು ಮಾಡುವ ಸಮಯ ಇದೀಗ ಬಂದಿದೆ, ಏಕೆಂದರೆ ರಾಷ್ಟ್ರೀಕೃತ ಸೇರಿದಂತೆ ಹಲವಾರು ಕಾರ್ಪೋರೇಟ್ ಬ್ಯಾಂಕ್ಗಳು ಅತೀ ಹೆಚ್ಚು ಸೇವಾ ಶುಲ್ಕವನ್ನು ಸಾಮಾನ್ಯ ಜನರ ಮೇಲೆ ಹೊರಿಸುವಂತಹ ಸ್ಥಿತಿಯಿದ್ದು ಆದರೆ ಸಹಕಾರ ಸಂಘಗಳಲ್ಲಿ ಹಣಕಾಸು ವ್ಯವಹಾರ ಮಾಡುವುದರಿಂದ ಇವುಗಳ ಹೊರೆ ನಮಗೆ ಆಗುವುದಿಲ್ಲ ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನು ರಾಮಾಂಜನೇಯ ಎಂ.ಎನ್, ಸ್ವಾಗತವನ್ನು ಶಶಿಧರ್, ಪ್ರಾರ್ಥನೆ ಶಿವಕುಮಾರ್, ವಂದನಾರ್ಪಣೆಯನ್ನು ನಿವೃತ್ತ ಮುಖ್ಯ ಶಿಕ್ಷಕರಾದ ರಂಗನಾಥಯ್ಯ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಪರಿಯಾಪಟ್ಟಣ ಎವಿಎಸ್ ಎಸ್ ಅಧ್ಯಕ್ಷರಾದ ರಾಮು, ಮಂಡ್ಯ ಎವಿಎಸ್ ಎಸ್ ಅಧ್ಯಕ್ಷರಾದ ರಾಜೇಶ್, ಶಿವಶೈಕ್ಷಣಿಕ ಸೇವಾಶ್ರಮದ ಅಧ್ಯಕ್ಷರಾದ ಲೇಪಾಕ್ಷಪ್ಪ, ತುಮಕೂರು ಎವಿಎಸ್ ಎಸ್ ನ ಪದಾಧಿಕಾರಿಗಳಾದ ಧರ್ಮವೀರ ಕೆ.ಹೆಚ್, ಕಂಬಯ್ಯ, ನಾಗರಾಜು, ಮಾರುತಿ ಪ್ರಸಾದ್ ಕೆ.ಟಿ, ಇಂದ್ರಕುಮಾರ್ ಡಿ.ಕೆ, ಸುರೇಶ್, ಶ್ರೀಮತಿ ಧನಲಕ್ಷ್ಮೀ ಎಂ.ಆರ್, ಜಯಂತಿ, ಸಾಕ್ಷಿ ಜಗನ್ನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

     

    admin
    • Website

    Related Posts

    ತುಮಕೂರು ಉಪ ವಿಭಾಗಾಧಿಕಾರಿ ಮೇಲೆ ಸುಳ್ಳು ಆರೋಪ: ತುಮಕೂರು ಜಿಲ್ಲಾ ನಾಗರಿಕರ ಹಿತರಕ್ಷಣಾ ಸಮಿತಿ ಖಂಡನೆ

    November 28, 2025

    ಕಲಾವಿದರಿಗೆ ಧನ ಸಹಾಯಕ್ಕಾಗಿ ಆನ್‌ ಲೈನ್‌ ಅರ್ಜಿ ಆಹ್ವಾನ

    November 28, 2025

    ಆಗ್ನೆಯ ಪದವೀಧರರ ಕ್ಷೇತ್ರದ ಚುನಾವಣೆ: ಮತದಾರರ ಪಟ್ಟಿಗೆ ನೋಂದಾಯಿಸಲು ಡಿ.10 ಕೊನೆಯ ದಿನ

    November 28, 2025

    Comments are closed.

    Our Picks

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ತುಮಕೂರು ಉಪ ವಿಭಾಗಾಧಿಕಾರಿ ಮೇಲೆ ಸುಳ್ಳು ಆರೋಪ: ತುಮಕೂರು ಜಿಲ್ಲಾ ನಾಗರಿಕರ ಹಿತರಕ್ಷಣಾ ಸಮಿತಿ ಖಂಡನೆ

    November 28, 2025

    ತುಮಕೂರು: ಸರ್ಕಾರಿ ಭೂಮಿ ಆಸ್ತಿ ರಕ್ಷಣೆಗೆ ಮುಂದಾದ ತುಮಕೂರು ಉಪ ವಿಭಾಗಾಧಿಕಾರಿ ನಾಹಿದಾ ಜಮ್ ಜಮ್ ರವರ ಮೇಲೆ ಸಾಮಾಜಿಕ…

    ಕಲಾವಿದರಿಗೆ ಧನ ಸಹಾಯಕ್ಕಾಗಿ ಆನ್‌ ಲೈನ್‌ ಅರ್ಜಿ ಆಹ್ವಾನ

    November 28, 2025

    ಆಗ್ನೆಯ ಪದವೀಧರರ ಕ್ಷೇತ್ರದ ಚುನಾವಣೆ: ಮತದಾರರ ಪಟ್ಟಿಗೆ ನೋಂದಾಯಿಸಲು ಡಿ.10 ಕೊನೆಯ ದಿನ

    November 28, 2025

    ನ.28 ರಂದು ಪತ್ರಿಕಾ ವಿತರಕರ ಕ್ರೀಡಾಕೂಟದ ಬಹುಮಾನ ವಿತರಣೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

    November 27, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.