ಚಿಕ್ಕನಾಯಕನಹಳ್ಳಿ: ಪಟ್ಟಣದ ಪುರಸಭೆಯಲ್ಲಿ ಆರ್ಥಿಕ ಲೋಪದೋಷಗಳ ಅನುಮಾನ ವ್ಯಕ್ತಪಡಿಸಿರುವ ಪುರಸಭಾ ಸದಸ್ಯ ರೇಣುಕಾಪ್ರಸಾದ್, ತಮ್ಮ RTI ಅರ್ಜಿಗೆ ತಕ್ಕ ಉತ್ತರ ನೀಡಲಾಗಿಲ್ಲ ಎಂಬ ಕಾರಣಕ್ಕಾಗಿ ಪುರಸಭೆ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.
ರೇಣುಕಾಪ್ರಸಾದ್ ಹೇಳುವಂತೆ, ಪುರಸಭೆಯ ಜಮಾ–ಖರ್ಚು ವಿವರಗಳ ಕುರಿತು ಮಾಹಿತಿ ಕೇಳಿದರೂ, ಅಧಿಕಾರಿಗಳು ಸ್ಪಷ್ಟವಾದ ಉತ್ತರ ನೀಡಲು ತಯಾರಿಲ್ಲ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಸ್ಪಂದನೆ ಇಲ್ಲದ ಹಿನ್ನೆಲೆಯಲ್ಲಿ, ಅವರು ಪುರಸಭೆ ಇತಿಹಾಸದಲ್ಲೇ ಮೊದಲ ಬಾರಿಗೆ ಆರ್ ಟಿಐ ಮಾಹಿತಿಗಾಗಿ ಪ್ರತಿಭಟನೆ ನಡೆಸುವ ಹಂತಕ್ಕೆ ಬಂದಿದ್ದಾರೆ.
“ಸಾರ್ವಜನಿಕ ಹಣದ ಖರ್ಚು ಬಳಕೆಯಾಗಿರುವ ಬಗ್ಗೆ ಜನರಿಗೆ ಸ್ಪಷ್ಟತೆ ಅಗತ್ಯವಿದೆ. ಆದರೆ ಪುರಸಭೆ ಅಧಿಕಾರಿಗಳು ಮಾಹಿತಿ ನೀಡಲು ತಯಾರಿಲ್ಲ. ಇದು ಪ್ರಜಾಪ್ರಭುತ್ವದ ಅವಮಾನ!” ಎಂದು ಪ್ರತಿಭಟನೆಯ ವೇಳೆ ರೇಣುಕಾಪ್ರಸಾದ್ ಕಿಡಿಕಾರಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4