ಮಧುಗಿರಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಧುಗಿರಿ ಮತ್ತು ಸಮಾಜಶಾಸ್ತ್ರ ವಿಭಾಗ ಹಾಗು ಐ.ಕ್ಯೂ.ಎ.ಸಿ. ಇವುಗಳ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದಿತು.
ಕಾರ್ಯಕ್ರಮದಲ್ಲಿ ಡಾ.ಆಶ್ವಾಖ್ ಅಹಮದ್, ಸಹ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಸಮಾಜಶಾಸ್ತ್ರ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತುಮಕೂರು ಇವರು ಪ್ರಮುಖ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ “ಲಿಂಗತಾರತಮ್ಯ ಮತ್ತು ಸ್ತ್ರೀ ಸಬಲೀಕರಣ: ಸಮಸ್ಯೆಗಳು ಮತ್ತು ಸವಾಲುಗಳು” ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡುತ್ತಾ ಲಿಂಗಸಮಾನತೆಯಿಂದ ಮಾತ್ರ ಸ್ತ್ರೀಸಬಲೀಕರಣ ಸಾಧ್ಯ, ಲಿಂಗತಾರತಮ್ಯವು ಒಂದು ಸಮಸ್ಯೆಯಾದರೆ ಸ್ತ್ರೀಸಬಲೀಕರಣವು ಈ ಸಮಸ್ಯೆಯ ಪರಿಹಾರವಾಗಿದೆ. ನಿರ್ದೆಷ್ಟ ಲಿಂಗ ಎನ್ನುವ ಕಾರಣಕ್ಕೆ ವ್ಯಕ್ತಿಯ ಹಕ್ಕುಗಳು ಮತ್ತು ಅವಕಾಶಗಳನ್ನು ನಿರಾಕರಿಸುವುದೆ ಲಿಂಗ ಅಸಮಾನತೆಯಾಗಿದೆ. ಲಿಂಗತಾರತಮ್ಯ ನಿವಾರಣೆಯಾದರೆ ಮಾತ್ರ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಸಾಧ್ಯ ಲಿಂಗತಾರತಮ್ಯವು ಸ್ತ್ರೀಸಬಲೀಕರಣಕ್ಕೆ ಸವಾಲನ್ನೋಡ್ಡುತ್ತಿದ್ದು ಲಿಂಗತಾರತಮ್ಯಕ್ಕೆ ಜೈವಿಕ ಅಂಶ ಕಾರಣವಾಗುವುದರ ಜೊತೆಗೆ ಮಾನಸಿಕ, ಸಾಮಾಜಿಕ ಅಂಶಗಳು ಕಾರಣವಾಗುತ್ತವೆ. ಸಮಾಜದಲ್ಲಿ ಲಿಂಗತಾರತಮ್ಯಕ್ಕೆ ಕಡಿವಾಣ ಹಾಕಬೇಕಾದರೆ ಜನರ ಮಾನಸಿಕ, ಸಾಮಾಜಿಕ ಅಂಶಗಳಲ್ಲಿ ಬದಲಾವಣೆಯಾಗಬೇಕಾಗುತ್ತದೆ. ಸ್ತ್ರೀ ಸಬಲೀಕರಣ ಕುಟುಂಬದಿಂದಲೇ ಪ್ರಾರಂಭವಾಗಬೇಕು, ತಾಯಿಯ ಪಾತ್ರ ಮುಖ್ಯವಾಗಿರುತ್ತದೆ. ಮಹಿಳೆಯರ ಹಕ್ಕನ್ನು ಗೌರವಿಸಬೇಕಾಗುತ್ತದೆ. ಗಂಡು ಮಕ್ಕಳಿಗೆ ಉತ್ತಮ ಸಾಮಾಜಿಕರಣದ ಮೂಲಕ ಬೆಳಸಬೇಕಾಗುತ್ತದೆ, ಸ್ತ್ರೀಯರಿಗೆ ಶಿಕ್ಷಣ, ಉದ್ಯೋಗ, ಆರ್ಥಿಕ ಸ್ವಾತಂತ್ರ್ಯ, ರಾಜಕೀಯ ಸಹಭಾಗಿತ್ವ ನಿರ್ಧಾರದ ಹಕ್ಕು ನೀಡಿ ಸಬಲೀಕರಣ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಡಾ.ವಿಜಯಲಕ್ಷ್ಮೀ ಎನ್., ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಧುಗಿರಿರವರು ಇಂದು ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಒಂದು ಉತ್ತಮ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಇದು ಉಪಯುಕ್ತ ಕಾರ್ಯಕ್ರಮವಾಗಿದೆ. ಲಿಂಗತಾರತಮ್ಯತೆ, ಅಸಮಾನತೆ ಹಾಗೂ ಇನ್ನಿತರ ಬಗೆಯ ಸಂಕಷ್ಟಗಳಿಗೆ ಒಳಗಾಗಿರುವ ಸ್ತ್ರೀಯರಿಗೂ ಕೂಡ ಪುರುಷರಿಗೆ ಸರಿಸಮಾನವಾದ ಅಂತಸ್ತು ಹಾಗೂ ಅವಕಾಶಗಳನ್ನು ನೀಡ ಸ್ತ್ರೀಯರನ್ನು ಸಶಕ್ತರನ್ನಾಗಿಸಬೇಕಾದ ಅನಿವಾರ್ಯತೆ ಇದೆ. ಸ್ತ್ರೀಯರು ಸ್ವಸಾಮರ್ಥ್ಯವನ್ನು ಬಳಸಿ ಶಕ್ತಿಯುತವಾಗಿ ಹೊರಹೊಮ್ಮಿ ಸಮಾಜದಲ್ಲಿ ಉತ್ತಮ ಸಾಧನೆ ಮಾಡುವುದರ ಮೂಲಕ ಈ ಸ್ಪರ್ಧಾತ್ಮಕ ಸಮಾಜದಲ್ಲಿ ಯಾವುದಕ್ಕೂ ಕಡಿಮೆ ಇಲ್ಲದಂತೆ ಬೆಳೆದು ಸಮಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಬೇಕೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕತೆಯನ್ನು ವಹಿಸಿದ್ದ ಪ್ರಭಾರ ಪ್ರಾಚಾರ್ಯರಾದ ಡಾ.ಶಂಕರ ಲಿಂಗಯ್ಯ ಎಂ. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಸಮಾಜಶಾಸ್ತ್ರ ವಿಭಾಗವು ವಿದ್ಯಾರ್ಥಿಗಳಿಗೆ ಉತ್ತಮ ಕಾರ್ಯಕ್ರಮವನ್ನು ರೂಪಿಸಿದೆ. ಲಿಂಗತಾರತಮ್ಯತೆ ಮತ್ತು ಸ್ತ್ರೀಸಬಲೀಕರಣ ಸಮಾಜದಲ್ಲಿ ಕಂಡುಬರುತ್ತವೆ. ಲಿಂಗತಾರತಮ್ಯತೆ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗುವುದಿಲ್ಲ. ಸ್ತ್ರೀಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸುತ್ತಿದ್ದು, ಆಧುನಿಕ ಮಹಿಳೆ ಸಬಲಳಾಗುತ್ತಿದ್ದಾಳೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಐ.ಕ್ಯೂ.ಎ.ಸಿ ಸಂಚಾಲಕರಾದ ವೇದಲಕ್ಷ್ಮೀ ಜಿ, ಅಧ್ಯಾಪಕರುಗಳಾದ ಪ್ರೊ.ಸುರೇಶ್.ಸಿ.ಜಿ., ಶ್ರೀನಿವಾಸ್, ಮಂಜುನಾಥ, ಸುನಂದ ಬಿ., ಮುರುಳೀಧರ ಕೆ., ಅಧೀಕ್ಷಕರುಗಳಾದ ಚಂದ್ರಕಲಾ ಎನ್., ಯೋಗಿಶ್ ಕುಮಾರ್, ಸುರೇಶ್ ಯಾದವ್, ಡಾ.ನಾರಾಯಣಸ್ವಾಮಿ ಹಾಜರಿದ್ದರು.
ಕಾರ್ಯಕ್ರಮದಲ್ಲಿ ರಕ್ಷಿತಾ ಮತ್ತು ಮೇಘನಾ ಪ್ರಾರ್ಥನೆ ಸಲ್ಲಿಸಿದರು, ರಶ್ಮಿರವರು ಸ್ವಾಗತಿಸಿದರೆ, ವಿದ್ಯಾರ್ಥಿಗಳು ಅನಿಸಿಕೆಗಳನ್ನು ತಿಳಿಸಿದರು. ನಾಗಶ್ರೀರವರು ವಂದನಾರ್ಪಣೆಯನ್ನು ಸಲ್ಲಿಸಿದರು. ರಂಜಿತಾರವರು ಕಾರ್ಯಕ್ರಮವನ್ನು ನಿರೂಪಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW