nammatumakuru

    Subscribe to Updates

    Get the latest creative news from FooBar about art, design and business.

    What's Hot

    ನಕಾಶೆ ರಸ್ತೆ ತೆರವುಗೊಳಿಸಲು ವಿಳಂಬ: ಹಸಿರು ಸೇನೆಯಿಂದ ಪ್ರತಿಭಟನೆ

    December 19, 2025

    ಡಿ.21ರಿಂದ ಪಲ್ಸ್ ಪೋಲಿಯೋ ಕಾರ್ಯಕ್ರಮ: ತಪ್ಪದೇ ಲಸಿಕೆ ಹಾಕಿಸಿ: ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್

    December 19, 2025

    ನಾಟಕ, ಬದುಕನ್ನು ಕಟ್ಟಿಕೊಡುವ ಜೊತೆಗೆ ಸಾಮರಸ್ಯ ಬೆಳೆಸುತ್ತದೆ: ವೈ.ಎಂ.ಪುಟ್ಟಣ್ಣಯ್ಯ

    December 19, 2025
    Facebook Twitter Instagram
    ಟ್ರೆಂಡಿಂಗ್
    • ನಕಾಶೆ ರಸ್ತೆ ತೆರವುಗೊಳಿಸಲು ವಿಳಂಬ: ಹಸಿರು ಸೇನೆಯಿಂದ ಪ್ರತಿಭಟನೆ
    • ಡಿ.21ರಿಂದ ಪಲ್ಸ್ ಪೋಲಿಯೋ ಕಾರ್ಯಕ್ರಮ: ತಪ್ಪದೇ ಲಸಿಕೆ ಹಾಕಿಸಿ: ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್
    • ನಾಟಕ, ಬದುಕನ್ನು ಕಟ್ಟಿಕೊಡುವ ಜೊತೆಗೆ ಸಾಮರಸ್ಯ ಬೆಳೆಸುತ್ತದೆ: ವೈ.ಎಂ.ಪುಟ್ಟಣ್ಣಯ್ಯ
    • ಲೇಖಕಿಯರ ಸಂಘದ ದತ್ತಿ ಬಹುಮಾನಗಳಿಗೆ ಕಥೆ—ಕವನಗಳ ಆಹ್ವಾನ
    • ಡಿ.24ರಂದು ಮಧುಗಿರಿ ತಾಲ್ಲೂಕು ಸಾಹಿತ್ಯ ಸಮ್ಮೇಳನ: ಅಧ್ಯಕ್ಷರಾಗಿ ಕೆ.ಪಿ. ನಟರಾಜು ಆಯ್ಕೆ
    • ಶಿರಾ | ಜಮೀನು ವಿಚಾರಕ್ಕೆ ಜಗಳ: ಒಬ್ಬನ ಕೊಲೆಯಲ್ಲಿ ಅಂತ್ಯ
    • ಉತ್ತರ ಕರ್ನಾಟಕಕ್ಕೆ ₹3,450 ಕೋಟಿ ಬಂಪರ್ ಅನುದಾನ: ಸಚಿವ ಸಂಪುಟ ಸಭೆಯ ಮಹತ್ವದ ತೀರ್ಮಾನಗಳು
    • ಮುಳ್ಳೂರು ಆಸ್ಪತ್ರೆಗೆ ಎರಡು ಬಾರಿ ಉತ್ತಮ ಆಸ್ಪತ್ರೆ  ಪ್ರಶಸ್ತಿ: ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಡಾ.ರಾಜ್‌ ಕುಮಾರ್: ಕನ್ನಡ ಸಾಂಸ್ಕೃತಿಕ ಲೋಕದ ರಾಯಭಾರಿ–ಜ್ಯೋತಿಗಣೇಶ್ ಬಣ್ಣನೆ
    ತುಮಕೂರು April 25, 2025

    ಡಾ.ರಾಜ್‌ ಕುಮಾರ್: ಕನ್ನಡ ಸಾಂಸ್ಕೃತಿಕ ಲೋಕದ ರಾಯಭಾರಿ–ಜ್ಯೋತಿಗಣೇಶ್ ಬಣ್ಣನೆ

    By adminApril 25, 2025No Comments3 Mins Read

    ತುಮಕೂರು:   ವರನಟ, ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರು ತಮ್ಮ ಅಮೋಘ ನಟನೆ, ಗಾಯನದ ಮೂಲಕ ಕನ್ನಡ ಸಾಂಸ್ಕೃತಿಕ ಲೋಕದ ರಾಯಭಾರಿಯಾಗಿದ್ದರೆಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಬಣ್ಣಿಸಿದರು.

    ನಗರದ ಕನ್ನಡ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು, ಡಾ.ಬಿ.ಆರ್. ಅಂಬೇಡ್ಕರ್ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಡಾ: ರಾಜ್ ಕುಮಾರ್ ಜಯಂತಿ ಅಂಗವಾಗಿ ಏರ್ಪಡಿಸಿದ್ದ “ರಾಜರಸ” ಸಂಗೀತ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಡಾ: ರಾಜ್ ಅವರು ಅಭಿನಯಿಸದ ಪಾತ್ರಗಳಿಲ್ಲ. ಕರ್ನಾಟಕದಲ್ಲಿ ಡಾ.ರಾಜ್‌ಕುಮಾರ್ ಎಂದರೆ ಅಣ್ಣಾವ್ರು ಎಂದೇ ಪ್ರಸಿದ್ಧಿ. ಅವರ ಚಿತ್ರಗಳು ಇಡೀ ಕುಟುಂಬ ಒಟ್ಟಿಗೇ ಕುಳಿತು ವೀಕ್ಷಿಸುವಂತಹದಾಗಿದ್ದವು. ಅವರು ನಟಿಸಿರುವ ಚಿತ್ರದ ಗೀತೆಗಳ ಸಾಹಿತ್ಯ ಅರ್ಥಪೂರ್ಣವಾಗಿರುತ್ತಿದ್ದವು. ಅಣ್ಣಾವ್ರ ನಟನೆ ಹಾಗೂ ಗಾಯನಕ್ಕೆ ಅವರೇ ಸಾಟಿಯಾಗಿದ್ದರು ಎಂದು ತಿಳಿಸಿದರು.


    Provided by
    Provided by

    ರಾಜ್‌ಕುಮಾರ್ ಅವರು ಗೋಕಾಕ್ ಚಳುವಳಿಯ ನೇತೃತ್ವವಹಿಸುವ ಮೂಲಕ ಕನ್ನಡ ನಾಡು–ನುಡಿಯ ಏಳಿಗೆಗಾಗಿ ಹೋರಾಟ ಮಾಡಿದ ಅಪ್ಪಟ ಕನ್ನಡಿಗರಾಗಿದ್ದರು. ಕನ್ನಡ ಹೊರತುಪಡಿಸಿ ಇತರೆ ಯಾವುದೇ ಭಾಷೆಗಳಲ್ಲಿ ನಟಿಸದೆ ಕನ್ನಡಿಗರಿಗೆ ಮಾದರಿಯಾಗಿದ್ದರು. ಕನ್ನಡ ನಾಡು-ನುಡಿಯನ್ನು ಉಳಿಸಿ ಬೆಳೆಸುವಲ್ಲಿ ಡಾ.ರಾಜ್‌ಕುಮಾರ್ ಜಯಂತಿಯು ಇಂದಿನ ಯುವಕರಿಗೆ ದಾರಿ ದೀಪವಾಗಬೇಕೆಂದು ತಿಳಿಸಿದರು.

    ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಡಾ.ರಾಜ್‌ಕುಮಾರ್ ಅವರು ಸರಳ ಹಾಗೂ ಮೇರು ವ್ಯಕ್ತಿತ್ವ ಹೊಂದಿದ್ದರು. ಹೆಚ್ಚೇನು ವ್ಯಾಸಂಗ ಮಾಡದಿದ್ದರೂ ತಮ್ಮ ನಿರರ್ಗಳ ಕನ್ನಡದ ಮಾತುಗಳಿಂದ ವಾಗ್ದೇವಿ ಪುತ್ರರೆನಿಸಿಕೊಂಡಿದ್ದರಲ್ಲದೆ ಕನ್ನಡಾಭಿಮಾನದಿಂದ ರಾಷ್ಟçದ ಗಮನ ಸೆಳೆದಿದ್ದರು ಎಂದು ತಿಳಿಸಿದರು.

    ರಾಜ್ ಅವರ ಚಲನಚಿತ್ರ ಪಯಣ ತುಮಕೂರಿನ ಗುಬ್ಬಿ ವೀರಣ್ಣ ನಾಟಕ ಕಂಪನಿಯಿಂದ ಪ್ರಾರಂಭವಾಯಿತೆಂದು ಹೇಳಲು ಹೆಮ್ಮೆಯಾಗುತ್ತದೆ. ತಮ್ಮ ಕಲೆ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿದ್ದರು. ದಾದಾ ಸಾಹೇಬ್ ಫಾಲ್ಕೆ, ಪದ್ಮಭೂಷಣದಂತಹ ಹಲವಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು. ನಟನೆಯಲ್ಲದೆ ಸಂಗೀತ ಕ್ಷೇತ್ರದಲ್ಲಿಯೂ ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿದ್ದವು. ರಾಷ್ಟ್ರದಲ್ಲಿ ತ್ರಿಭಾಷಾ ನೀತಿ ಘೋಷಣೆಯಾದ ಸಂದರ್ಭದಲ್ಲಿ ಗೋಕಾಕ್ ಚಳುವಳಿ ಮೂಲಕ ಆಯಾ ಪ್ರಾದೇಶಿಕ ಭಾಷೆಯೇ ಮಾತೃಭಾಷೆಯಾಗಬೇಕೆಂದು ಹೋರಾಟ ನಡೆಸಿ ಕನ್ನಡಿಗರಿಗೆ ಪ್ರೇರಕ ಶಕ್ತಿಯಾಗಿದ್ದರೆಂದು ಡಾ.ರಾಜ್ ಅವರ ಸಾಧನೆಗಳ ಬಗ್ಗೆ ಹಾಡಿ ಹೊಗಳಿದರು.

    ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಮಾತನಾಡಿ, ಡಾ.ರಾಜ್ ಅವರು ಸ್ವಯಂ ಸಾಧಕ. ಯಾವುದೇ ಬೆಂಬಲವಿಲ್ಲದೆ ತಮ್ಮ ಕಠಿಣ ಶ್ರಮದಿಂದ ಉನ್ನತ ಸ್ಥಾನಕ್ಕೇರಿ ಕನ್ನಡಿಗರ ಜನಮಾನಸದಲ್ಲಿ ಉಳಿದಿದ್ದಾರೆ. ಸಂಗೀತ ಹಾಗೂ ನಟನೆಯನ್ನು ಜೊತೆ ಜೊತೆಗೆ ತೊಡಗಿಸಿಕೊಂಡ ಬಹುಮುಖ ಪ್ರತಿಭೆ ಹೊಂದಿರುವ ಕನ್ನಡಿಗರಲ್ಲಿ ಇವರು ಅಗ್ರಗಣ್ಯರು. ಇವರ ಚಲನಚಿತ್ರಗಳು ಉತ್ತಮ ಸಾಮಾಜಿಕ ಸಂದೇಶವನ್ನು ಹೊಂದಿರುತ್ತಿದ್ದವು. ಇವರ ಅಭಿನಯದ 200ಕ್ಕೂ ಹೆಚ್ಚು ಚಿತ್ರಗಳು ಸಮಾನತೆ, ಜೀತ ಮುಕ್ತ, ಶಿಕ್ಷಣದ ಮಹತ್ವ, ನಾಡು–ನುಡಿ, ಭಕ್ತಿ ಪ್ರಧಾನದಂತಹ ವಿಷಯ ವಸ್ತುಗಳಿಂದ ಕೂಡಿರುತ್ತಿದ್ದವು. ರಾಜ್ ಅವರ ಸಿನಿಮಾಗಳಿಂದ ಜನರಲ್ಲಿ ಸಕಾರಾತ್ಮಕ ಬದಲಾವಣೆ ಕಾಣಬಹುದಾಗಿತ್ತು ಎಂದು ತಿಳಿಸಿದರು.

    ಕೇಂದ್ರ ಸಂಗೀತ ನಾಟಕ ಅಕಾಡೆಮಿ ರಾಷ್ಟç ಪ್ರಶಸ್ತಿ ಪುರಸ್ಕೃತ ಡಾ. ಲಕ್ಷ್ಮಣ್ ದಾಸ್ ಮಾತನಾಡಿ, ಡಾ.ರಾಜ್‌ ಕುಮಾರ್ ಅವರು ಗುಬ್ಬಿ ವೀರಣ್ಣ ನಾಟಕ ಕಂಪನಿಯಲ್ಲಿ ದೀರ್ಘ ಕಾಲ ನಾಟಕಗಳಲ್ಲಿ ಅಭಿನಯಿಸಿದ ನಂತರ ಚಿತ್ರರಂಗಕ್ಕೆ ಪ್ರವೇಶಿಸಿದರು. ಬೇಡರ ಕಣ್ಣಪ್ಪ ಚಿತ್ರದಲ್ಲಿ ನಾಯಕನಾಗಿ ಮೊದಲ ಅವಕಾಶ ಪಡೆದರು. ರಾಜ್‌ಕುಮಾರ್ ಅವರು 220 ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಡಾ: ರಾಜ್‌ಕುಮಾರ್ ಕನ್ನಡ ಚಲನಚಿತ್ರರಂಗ ಮತ್ತು ರಂಗಭೂಮಿಯ ಮೇರುನಟ. ನಟನೆ, ಗಾಯನ ಮತ್ತು ಚಿತ್ರ ನಿರ್ಮಾಣದ ಮೂಲಕ ವರನಟ, ನಟಸಾರ್ವಭೌಮ ಮೊದಲಾದ ಬಿರುದುಗಳನ್ನು ಪಡೆದುಕೊಂಡು ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರೆನಿಸಿಕೊಂಡಿದ್ದರು ಎಂದು ತಿಳಿಸಿದರು.

    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜಿ. ಹಿಮಂತರಾಜು ಕಾರ್ಯಕ್ರಮವನ್ನು ನಿರೂಪಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ.ರಾಜ್ ಕುಮಾರ್ ಅವರ ಸರಳ–ಸಜ್ಜನಿಕೆ ಹಾಗೂ ಮೇರು ವ್ಯಕ್ತಿತ್ವ, ನಟನೆ, ಗಾಯನ, ಭಾಷಾಭಿಮಾನ, ಸಮಯ ಪಾಲನೆ, ಸೌಜನ್ಯತೆ, ಸಿನಿಪಯಣ, ಸಹ ನಟರೊಂದಿಗೆ ಸ್ನೇಹಭಾವಗಳ ಬಗ್ಗೆ ಪರಿಚಯಿಸಿದರು.

    ಡಾ.ಬಿ.ಆರ್.ಅಂಬೇಡ್ಕರ್ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯಕ್ರಮ ಸಂಯೋಜಕ ಕೆ.ರಾಜಶೇಖರ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ಧಲಿಂಗಪ್ಪ, ಸರಿಗಮಪ ಖ್ಯಾತಿ ಡಾ.ಶ್ರಾವ್ಯ, ವಾರ್ತಾ ಇಲಾಖೆಯ ಆರ್. ರೂಪಕಲಾ ಹಾಜರಿದ್ದರು.

    ಡಾ.ರಾಜ್‌ಕುಮಾರ್ ಅಭಿನಯದ ಚಲನಚಿತ್ರ ಗೀತ ಗಾಯನದ ರಾಜರಸ ಸಂಗೀತ ಕಾರ್ಯಕ್ರಮದಲ್ಲಿ ಸೂರಜ್ ಅವರ ‘ಹೃದಯ ಸಮುದ್ರ ಕಲಕಿ–ಹೊತ್ತಿದೆ ದೇಶದ ಬೆಂಕಿ’, ಮಲ್ಲಸಂದ್ರ ಪಂಚಾಯತಿ ಅಧ್ಯಕ್ಷೆ ರತ್ನಮ್ಮ ಅವರ ‘ಬಾಳ ಬಂಗಾರ ನೀನು-ಹಣೆಯ ಸಿಂಗಾರ ನೀನು’, ಎಸ್. ಸಿದ್ದೇಶ್ ಅವರ ‘ನಾವಾಡುವ ನುಡಿಯೇ ಕನ್ನಡ ನುಡಿ’, ಸೂರಜ್ ಹಾಗೂ ಚಂದನ ಅವರ ‘ಜೀವ ಹೂವಾಗಿದೆ-ಭಾವ ಜೇನಾಗಿದೆ’ ಗೀತೆಗಳು ಕೇಳುಗರ ಮನ ತಣಿಸಿದರು. ಚಿಣ್ಣರು ಹೆಜ್ಜೆ ಹಾಕಿದ ರಾಜ್ ಗೀತೆಗಳ ರೀಮಿಕ್ಸ್ ಹಾಡುಗಳು ನೋಡುಗರ ಕಣ್ಮನ ಸೆಳೆದವು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

    admin
    • Website

    Related Posts

    ಲೇಖಕಿಯರ ಸಂಘದ ದತ್ತಿ ಬಹುಮಾನಗಳಿಗೆ ಕಥೆ—ಕವನಗಳ ಆಹ್ವಾನ

    December 19, 2025

    ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವುದು ಅಪರಾಧ: ಪೊಲೀಸ್ ಅಧಿಕಾರಿ ಎಸ್.ಜಿ.ಶ್ರೀನಿವಾಸ ಪ್ರಸಾದ್

    December 19, 2025

    ತುಮಕೂರು | ಅಂಗನವಾಡಿ ಹುದ್ದೆಗೆ ಅರ್ಜಿ ಆಹ್ವಾನ

    December 18, 2025

    Comments are closed.

    Our Picks

    ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!

    December 17, 2025

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಪಾವಗಡ

    ನಕಾಶೆ ರಸ್ತೆ ತೆರವುಗೊಳಿಸಲು ವಿಳಂಬ: ಹಸಿರು ಸೇನೆಯಿಂದ ಪ್ರತಿಭಟನೆ

    December 19, 2025

    ಪಾವಗಡ: ತಾಲ್ಲೂಕಿನ ನಾಗಲಮಡಿಕೆ ಹೋಬಳಿಯ ತಿಮ್ಮಮ್ಮನಹಳ್ಳಿಯಲ್ಲಿ ರೈತರು ತಮ್ಮ ಜಮೀನುಗಳಿಗೆ ಹೋಗಲು ರಸ್ತೆಯ ಸಮಸ್ಯೆಯಿದ್ದು ಅಧಿಕಾರಿಗಳು ಶೀಘ್ರವೇ ಬಗೆಹರಿಸಬೇಕೆಂದು ಒತ್ತಾಯಿಸಿದರು.…

    ಡಿ.21ರಿಂದ ಪಲ್ಸ್ ಪೋಲಿಯೋ ಕಾರ್ಯಕ್ರಮ: ತಪ್ಪದೇ ಲಸಿಕೆ ಹಾಕಿಸಿ: ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್

    December 19, 2025

    ನಾಟಕ, ಬದುಕನ್ನು ಕಟ್ಟಿಕೊಡುವ ಜೊತೆಗೆ ಸಾಮರಸ್ಯ ಬೆಳೆಸುತ್ತದೆ: ವೈ.ಎಂ.ಪುಟ್ಟಣ್ಣಯ್ಯ

    December 19, 2025

    ಲೇಖಕಿಯರ ಸಂಘದ ದತ್ತಿ ಬಹುಮಾನಗಳಿಗೆ ಕಥೆ—ಕವನಗಳ ಆಹ್ವಾನ

    December 19, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.