ಬೆಂಗಳೂರು: ನಿವೃತ್ತ ಡಿಜಿ, ಐಜಿಪಿ ಓಂಪ್ರಕಾಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಪಲ್ಲವಿ ಕೊಲೆ ಮಾಡಲು ಕಾರಣವಾದ ಹಲವು ಕಾರಣಗಳನ್ನು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ.
ತನ್ನ ಬಗ್ಗೆ ವೈಯುಕ್ತಿಕವಾಗಿ ಗಮನ ಹರಿಸಿಲ್ಲ ಎಂದು ಪಲ್ಲವಿ ಆರೋಪಿಸಿದ್ದಾರೆ. ಅಲ್ಲದೇ ಮಗಳಿಗೆ ಮದುವೆ ಮಾಡಿಲ್ಲ ಎಂದು ಕೋಪ ಕೂಡ ಅವರ ಮೇಲಿತ್ತಂತೆ.
ತನ್ನ ಭಾಗದ ಕುಟುಂಬದ ಬಗ್ಗೆ ಹೆಚ್ಚು ಗಮನವಹಿಸುತ್ತಿದ್ದ ಓಂ ಪ್ರಕಾಶ್, ಮನೆ ಸಮಸ್ಯೆಗಳಾದಾಗ ನೇರವಾಗಿ ಸಹೋದರಿ ಮನೆಗೆ ತೆರಳುತ್ತಿದ್ದರು. ಇನ್ನೊಂದೆಡೆ ಐಶಾರಮಿ ಮನೆಯಲ್ಲಿದ್ರು ಮಗಳ ಕೈಗೆ ಖರ್ಚಿಗೆ ಹಣ ಕೊಡುತ್ತಿರಲಿಲ್ಲ ಎಂದು ಪತ್ನಿ ಪಲ್ಲವಿ ಆರೋಪಿಸಿದ್ದಾರೆ.
ಸಂಪೂರ್ಣ ಹಣದ ವ್ಯವಹಾರವನ್ಮ ಓಂ ಪ್ರಕಾಶ್ ಒಬ್ಬರೇ ನೋಡಿಕೊಳ್ಳುತ್ತಿದ್ರು. ಈ ಹಿಂದೆ ಕೆಲ ಬಾರಿ ಜಗಳ ಮಾಡಿಕೊಂಡು ಪಲ್ಲವಿ ಮನೆ ಬಿಟ್ಟು ಹೋಗಿದ್ದರು. ಜಗಳದಿಂದ ನೊಂದು ಓಂ ಪ್ರಕಾಶ್ ತನ್ನನ್ನು ಕೊಲೆ ಮಾಡಬಹುದು ಎಂದೆಲ್ಲಾ ಪಲ್ಲವಿ ಯೋಚಿಸುತ್ತಿದ್ದರು ಹೀಗಾಗಿ ತಾನು ಕೊಲೆಯಾಗುವ ಬದಲು ತಾನೇ ಅವರನ್ನ ಕೊಲೆ ಮಾಡುವ ನಿರ್ಧಾರಕ್ಕೆ ಪತ್ನಿ ಬಂದಿದ್ದರು ಎನ್ನಲಾಗಿದೆ.
ಈ ಎಲ್ಲಾ ವಿಚಾರಗಳಿಂದ ಮಾನಸಿಕವಾಗಿ ಡಿಸ್ಟರ್ಬ್ ಆಗಿದ್ದರು. ಕೊನೆಗೆ ಓಂಪ್ರಕಾಶ್ ಅವರನ್ನು ಪತ್ನಿ ಪಲ್ಲವಿ ಭೀಕರವಾಗಿ ಹತ್ಯೆ ಮಾಡಿದ್ದಾರೆ ಎಂದು ಸಿಸಿಬಿ ಪೊಲೀಸರ ತನಿಖೆ ವೇಳೆ ಈ ಎಲ್ಲಾ ಕಾರಣಗಳು ಸಿಕ್ಕಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW