ಬೆಂಗಳೂರು: ಆರ್ಸಿಬಿ ಅಂದ್ರೆ ರಿಯಲ್ ಕಲ್ಪ್ರಿಟ್ ಆಫ್ ಬೆಂಗಳೂರು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದು, ಇಡೀ ಸರ್ಕಾರವನ್ನು ವಜಾ ಮಾಡಲು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವಿಲ್ಲಿ ನಲವತ್ತು ಜನ ಪ್ರತಿಭಟನೆ ಮಾಡ್ತಿದೀವಿ, ಪೊಲೀಸರು 150 ಜನ ಬಂದಿದ್ದಾರೆ, ಗನ್ ಗಳನ್ನೂ ತಂದಿದ್ದಾರೆ. ನಮ್ಮ ಪ್ರತಿಭಟನೆ ಹತ್ತಿಕ್ಕಲು ಸರ್ಕಾರ ಮುಂದಾಗಿದೆ, ನಮ್ಮನ್ನೂ ಬಂಧಿಸಬಹುದು. ಸಿಎಂ, ಡಿಸಿಎಂ ವಿಸ್ಕಿ ಬಾಟಲಿ ಆರ್ಸಿಬಿ ಪ್ರಮೋಷನ್ ಗೆ ವಿಧಾನಸೌಧ ಕಾರ್ಯಕ್ರಮ ಮಾಡಿದ್ದಾರೆ. ಆರ್ ಸಿಬಿ ಅಂದ್ರೆ ರಿಯಲ್ ಕಲ್ಪ್ರಿಟ್ ಆಫ್ ಬೆಂಗಳೂರು ಎಂದು ವ್ಯಂಗ್ಯ ಮಾಡಿದ್ದಾರೆ.
ಪೊಲೀಸರ ಅಮಾನತು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪೊಲೀಸರ ರಕ್ಷಣೆ ಯಾರು ಮಾಡ್ತಾರೆ? ನಾವು ಪೊಲೀಸರ ಜೊತೆ ನಿಲ್ತೇವೆ. ಈ ಪ್ರಕರಣದಲ್ಲಿ ಪೊಲೀಸರ ಪರ ನಮ್ಮ ಹೋರಾಟ, ದುರಂತದಲ್ಲಿ ಪೊಲೀಸರ ಪಾತ್ರ ಇಲ್ಲ. ವಿಧಾನಸೌಧ ಡಿಸಿಪಿ ಕ್ಲೀನಾಗಿ ಪತ್ರದಲ್ಲಿ ಬರೆದಿದ್ದಾರೆ. ಸಿಬ್ಬಂದಿ ಇಲ್ಲ ಅಂದ್ರೂ ಹೇಗೆ ಕಾರ್ಯಕ್ರಮ ಮಾಡಿದ್ರಿ? ಎಂದು ಪ್ರಶ್ನಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW