ಮೈಸೂರು: ಮೈಸೂರಿನ ಹೆಚ್.ಡಿ.ಕೋಟೆಯ ಬೀಚನಹಳ್ಳಿಯಲ್ಲಿನ ಕಬಿನಿ ಡ್ಯಾಂಗೆ ನಟ ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಭೇಟಿ ನೀಡಿದ್ದರು.
ಇದೇ ವೇಳೆ ಕಬಿನಿ ಡ್ಯಾಂನಲ್ಲಿ ಶಿವಣ್ಣ ಜೊತೆ ಫೋಟೊಗೆ ಅಭಿಮಾನಿಗಳು ಮುಗಿಬಿದ್ದರು. ರಸ್ತೆಯಲ್ಲಿ ಹೋಗುವಾಗ ಹಾಡಿ ಮಕ್ಕಳನ್ನ ಕಂಡು ಮಕ್ಕಳ ಜೊತೆ ಶಿವಣ್ಣ ದಂಪತಿ ಫೋಟೊ ತೆಗೆಸಿಕೊಂಡರು.
ಕೆಲ ದಿನಗಳ ಹಿಂದಷ್ಟೇ ತಮ್ಮ 40ನೇ ವರ್ಷದ ಸಿನಿ ಪ್ರಯಾಣದ ಸಂಭ್ರಮವನ್ನು ಶಿವರಾಜ್ ಕುಮಾರ್ ಆಚರಿಸಿದ್ದರು. ಸುಮಾರು 125 ಚಿತ್ರಗಳಲ್ಲಿ ನಟಿಸಿರುವ ಶಿವರಾಜ್ ಕುಮಾರ್ ಅವರು ಈಗಲೂ ಐದಕ್ಕೂ ಹೆಚ್ಚು ಸಿನಿಮಾಗಳು ಅವರ ಕೈಯಲ್ಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW