ಮೈಸೂರು: ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿಯಲ್ಲಿ ಗುರುವಾರ ಸುಮಾರು 20ಕ್ಕೂ ಹೆಚ್ಚು ಮಕ್ಕಳಿಗೆ ಹುಚ್ಚುನಾಯಿ ಕಚ್ಚಿರುವ ಘಟನೆ ನಡೆದಿದೆ.
ಹುಚ್ಚು ನಾಯಿಯ ಹಾವಳಿಯಿಂದ ಬೇಸತ್ತ ಜನರು ಒಂದು ಹುಚ್ಚು ನಾಯಿಯನ್ನು ಕೊಂದು ಹಾಕಿದ್ದಾರೆ. ಇನ್ನೂ ಎರಡು ಹುಚ್ಚು ನಾಯಿಗಳು ಸುತ್ತಾಡುತ್ತಾ ಭೀತಿ ಸೃಷ್ಟಿಸಿದೆ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ಮೈಸೂರಿನ ಮೇಟಗಳ್ಳಿ ದೇವಾಲಯದ ಬಸವ ಹುಚ್ಚುನಾಯಿ ಕಚ್ಚಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿತ್ತು.
ಕೆಲವು ದಿನಗಳ ಹಿಂದೆ ಬಸವನಿಗೆ ಹುಚ್ಚುನಾಯಿ ಕಚ್ಚಿತ್ತು. ಸ್ಥಳೀಯರು ಸೇರಿ ಬಸವನನ್ನು ಕಟ್ಟಿ ಹಾಕಿ ಚಿಕಿತ್ಸೆ ಕೊಡಿಸಿ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಆದರೆ ರೇಬಿಸ್ ಹೆಚ್ಚಾಗಿ ಬಸವ ನಾಯಿಯಂತೆ ಶಬ್ದ ಮಾಡುತ್ತಾ ಸ್ಥಳೀಯರಿಗೆ ಭೀತಿ ಉಂಟು ಮಾಡಿತ್ತು. ಪಶುವೈದ್ಯರು ಬಸವನಿಗೆ ಚಿಕಿತ್ಸೆ ಪ್ರಾರಂಭಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಸವ ಮೃತಪಟ್ಟಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW