nammatumakuru

    Subscribe to Updates

    Get the latest creative news from FooBar about art, design and business.

    What's Hot

    ತಂದೆ–ತಾಯಿ ಜಗಳ ಬಿಡಿಸಲು ಹೋದ 16 ವರ್ಷದ ಮಗನನ್ನೇ ಬರ್ಬರವಾಗಿ ಕೊಂದ ಪಾಪಿ ತಂದೆ!

    November 16, 2026

    ವಾಹನ ಸವಾರರೇ ಎಚ್ಚರ! | ಹಾಫ್ ಹೆಲ್ಮೆಟ್ ನಿಷೇಧ,  ಫುಟ್‌ ಪಾತ್ ಮೇಲೆ ವಾಹನ ಓಡಿಸಿದ್ರೆ ಬೀಳಲಿದೆ ಭಾರಿ ದಂಡ!

    November 16, 2026

    ಮಹಿಳೆ ನದಿಗೆ ಹಾರಿ ಆತ್ಮಹತ್ಯೆ, ಶವ ತೆಗೆಯಲು ಹೋದ ವ್ಯಕ್ತಿಯೂ ನೀರುಪಾಲು

    November 16, 2026
    Facebook Twitter Instagram
    ಟ್ರೆಂಡಿಂಗ್
    • ತಂದೆ–ತಾಯಿ ಜಗಳ ಬಿಡಿಸಲು ಹೋದ 16 ವರ್ಷದ ಮಗನನ್ನೇ ಬರ್ಬರವಾಗಿ ಕೊಂದ ಪಾಪಿ ತಂದೆ!
    • ವಾಹನ ಸವಾರರೇ ಎಚ್ಚರ! | ಹಾಫ್ ಹೆಲ್ಮೆಟ್ ನಿಷೇಧ,  ಫುಟ್‌ ಪಾತ್ ಮೇಲೆ ವಾಹನ ಓಡಿಸಿದ್ರೆ ಬೀಳಲಿದೆ ಭಾರಿ ದಂಡ!
    • ಮಹಿಳೆ ನದಿಗೆ ಹಾರಿ ಆತ್ಮಹತ್ಯೆ, ಶವ ತೆಗೆಯಲು ಹೋದ ವ್ಯಕ್ತಿಯೂ ನೀರುಪಾಲು
    • ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಆಗ್ರಹ: ನಾಳೆ (ನ.17) ಔರಾದ್ ಪಟ್ಟಣ ಬಂದ್ ಗೆ ಕರೆ
    • ಐಐಟಿಎಫ್ 2026ರಲ್ಲಿ EPFO ಲಾಂಜ್ ಮತ್ತು ESIC ಪೆವಿಲಿಯನ್ ಉದ್ಘಾಟಿಸಿದ ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವೀಯ
    • ರಾಷ್ಟ್ರಮಟ್ಟದ ರೈಫಲ್ ಶೂಟಿಂಗ್‌ ಗೆ ಆಯ್ಕೆಯಾದ ತುಮಕೂರಿನ ಯುವ ಕ್ರೀಡಾಪಟುಗಳಿಗೆ ಡಾ. ಜಿ. ಪರಮೇಶ್ವರ್ ಅಭಿನಂದನೆ
    • ಸಂಘಟನಾತ್ಮಕ ಚಟುವಟಿಕೆಗಳಿಗೆ ವೇಗ: ತುಮಕೂರು–ಚಿತ್ರದುರ್ಗ ಬಿಜೆಪಿ ಸಭೆ
    • ಕನಸುಗಳ ಹಿಂದಿನ ರಹಸ್ಯವೇನು? ಸ್ವಪ್ನ ಶಾಸ್ತ್ರದ ಪ್ರಕಾರ ಈ 7 ಕನಸುಗಳು ನೀಡುತ್ತವೆ ವಿಶೇಷ ಸೂಚನೆ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ತಂದೆ–ತಾಯಿ ಜಗಳ ಬಿಡಿಸಲು ಹೋದ 16 ವರ್ಷದ ಮಗನನ್ನೇ ಬರ್ಬರವಾಗಿ ಕೊಂದ ಪಾಪಿ ತಂದೆ!
    ತುಮಕೂರು November 16, 2026

    ತಂದೆ–ತಾಯಿ ಜಗಳ ಬಿಡಿಸಲು ಹೋದ 16 ವರ್ಷದ ಮಗನನ್ನೇ ಬರ್ಬರವಾಗಿ ಕೊಂದ ಪಾಪಿ ತಂದೆ!

    By Ganesh TumkuruNovember 16, 2026No Comments1 Min Read
    suneel

    ತುಮಕೂರು: ಪತಿ–ಪತ್ನಿಯ ನಡುವಿನ ಜಗಳ ಬಿಡಿಸಲು ಮಧ್ಯಪ್ರವೇಶಿಸಿದ 16 ವರ್ಷದ ಮಗನನ್ನೇ ತಂದೆಯೊಬ್ಬ ಹಾರೆಕೋಲಿನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿಯ ಚೌಡನಾಯಕನಪಾಳ್ಯ ಗ್ರಾಮದಲ್ಲಿ ನಡೆದಿದೆ.

    ಕುಣಿಗಲ್ ಪಟ್ಟಣದ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಸುನಿಲ್ (16) ಕೊಲೆಯಾದ ದುರ್ದೈವಿ ಬಾಲಕ. ಕೃತ್ಯ ಎಸಗಿದ ಆರೋಪಿ ತಂದೆಯನ್ನು ನಂಜೇಗೌಡ (50) ಎಂದು ಗುರುತಿಸಲಾಗಿದೆ.

    ಆರೋಪಿ ನಂಜೇಗೌಡ ವಿಪರೀತ ಮದ್ಯವ್ಯಸನಿಯಾಗಿದ್ದು, ಪ್ರತಿನಿತ್ಯ ಕುಡಿದು ಬಂದು ಪತ್ನಿ ರಂಜಿತಾ ಅವರೊಂದಿಗೆ ಜಗಳವಾಡುತ್ತಿದ್ದ. ಈ ಹಿಂದೆಯೂ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದಲ್ಲಿ ಜೈಲು ಸೇರಿದ್ದ ಈತ, ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದ ಎನ್ನಲಾಗಿದೆ.

    ಭಾನುವಾರ ಬೆಳಗ್ಗೆ ನಂಜೇಗೌಡ ಎಂದಿನಂತೆ ಪತ್ನಿ ರಂಜಿತಾ ಅವರೊಂದಿಗೆ ಜಗಳ ತೆಗೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಹಲ್ಲೆ ನಡೆಸಲು ಮುಂದಾಗಿದ್ದಾನೆ. ತಾಯಿಯ ಮೇಲಿನ ಹಲ್ಲೆಯನ್ನು ತಡೆಯಲು ಮಗ ಸುನಿಲ್ ಮಧ್ಯಪ್ರವೇಶಿಸಿದ್ದಾನೆ. ಇದರಿಂದ ತೀವ್ರವಾಗಿ ಕೆರಳಿದ ನಂಜೇಗೌಡ, ಪತ್ನಿ ರಂಜಿತಾಳನ್ನು ಮನೆಯಿಂದ ಹೊರಗೆ ತಳ್ಳಿ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದಾನೆ. ಬಳಿಕ ಮನೆಯಲ್ಲಿದ್ದ ಹಾರೆಕೋಲಿನಿಂದ (ಕಬ್ಬಿಣದ ರಾಡ್) ಮಗ ಸುನಿಲ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದು, ತೀವ್ರ ರಕ್ತಸ್ರಾವದಿಂದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಆರೋಪಿಗೆ ಗ್ರಾಮಸ್ಥರಿಂದ ಗೂಸಾ:

    ತಾಯಿಯನ್ನು ರಕ್ಷಿಸಲು ಹೋದ ಅಮಾಯಕ ಬಾಲಕ ತಂದೆಯ ಕೈಯಿಂದಲೇ ಹತ್ಯೆಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಹಾಗೂ ಸಂಬಂಧಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಧಾವಿಸಿದ ಕುಣಿಗಲ್ ಪೊಲೀಸರು ಆರೋಪಿ ನಂಜೇಗೌಡನನ್ನು ವಶಕ್ಕೆ ಪಡೆದಿದ್ದಾರೆ. ಆದರೆ, ಪೊಲೀಸರು ಆತನನ್ನು ಜೀಪಿನಲ್ಲಿ ಕರೆದೊಯ್ಯಲು ಮುಂದಾದಾಗ ರೊಚ್ಚಿಗೆದ್ದ ಗ್ರಾಮಸ್ಥರ ಗುಂಪೊಂದು, ಆರೋಪಿಯನ್ನು ಪೊಲೀಸ್ ವಾಹನದಿಂದ ಹೊರಗೆಳೆದು ಹಿಗ್ಗಾಮುಗ್ಗಾ ಥಳಿಸಿದೆ ಎಂದು ವರದಿಯಾಗಿದೆ.

    ಸದ್ಯ ಕುಣಿಗಲ್ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ರಾಷ್ಟ್ರಮಟ್ಟದ ರೈಫಲ್ ಶೂಟಿಂಗ್‌ ಗೆ ಆಯ್ಕೆಯಾದ ತುಮಕೂರಿನ ಯುವ ಕ್ರೀಡಾಪಟುಗಳಿಗೆ ಡಾ. ಜಿ. ಪರಮೇಶ್ವರ್ ಅಭಿನಂದನೆ

    November 16, 2026

    ಗ್ರಾಮ ಸಂಪರ್ಕದ ಮೂಲಕ ಗ್ರಾಮೀಣ ಬದುಕಿನ ಅನಾವರಣ: ಕೃಷಿ, ಹೈನುಗಾರಿಕೆ, ಪರಿಸರ ಸಂರಕ್ಷಣೆ ಹಾಗೂ ಜಾನಪದ ಕಲೆಯ ಪರಿಚಯ

    November 15, 2026

    ತುಮಕೂರಿನಲ್ಲಿ 7 ಕೋಟಿ ರೂ. ವೆಚ್ಚದ ಬೃಹತ್ ಎಲ್ ‌ಇಡಿ ಪರದೆ ಲೋಕಾರ್ಪಣೆ: ದೇಶದ ಜಿಲ್ಲಾ ಕೇಂದ್ರಗಳಲ್ಲೇ ಇದು ಮೊದಲು ಎಂದ ಡಿಸಿಎಂ ಪರಮೇಶ್ವರ್

    November 15, 2026

    Leave A Reply Cancel Reply

    Our Picks

    ಐಐಟಿಎಫ್ 2026ರಲ್ಲಿ EPFO ಲಾಂಜ್ ಮತ್ತು ESIC ಪೆವಿಲಿಯನ್ ಉದ್ಘಾಟಿಸಿದ ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವೀಯ

    November 16, 2026

    ರಾಮಾಯಣದ ಪುಷ್ಪಕ ವಿಮಾನವನ್ನು ನಿರ್ಮಿಸಿದ್ದು ಯಾರು? ರಾವಣನ ಕೈಗೆ ಸಿಕ್ಕಿದ್ದು ಹೇಗೆ? ಪುರಾಣ ಮತ್ತು ವಿಜ್ಞಾನ ಹೇಳುವುದೇನು?

    November 15, 2026

    ಟ್ರಕ್ ಗೆ ಡಿಕ್ಕಿ ಹೊಡೆದ ಮಿನಿಬಸ್: 23 ಮಂದಿಯ ದಾರುಣ ಸಾವು, ಅತೀ ವೇಗವೇ ಅಪಘಾತಕ್ಕೆ ಕಾರಣವಾಯ್ತೇ?

    November 13, 2026

    ಯೋಗವು ರೋಗಮುಕ್ತಿ ಮಾತ್ರವಲ್ಲ, ಭೋಗಮುಕ್ತಿಯನ್ನೂ ನೀಡುತ್ತದೆ; ಪ್ರತಿಯೊಬ್ಬರಿಗೂ ಆಯುರ್ವೇದ ತಲುಪಿಸುವುದೇ ಸರ್ಕಾರದ ಗುರಿ: ಪ್ರಧಾನಿ ಮೋದಿ

    November 13, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ತಂದೆ–ತಾಯಿ ಜಗಳ ಬಿಡಿಸಲು ಹೋದ 16 ವರ್ಷದ ಮಗನನ್ನೇ ಬರ್ಬರವಾಗಿ ಕೊಂದ ಪಾಪಿ ತಂದೆ!

    November 16, 2026

    ತುಮಕೂರು: ಪತಿ–ಪತ್ನಿಯ ನಡುವಿನ ಜಗಳ ಬಿಡಿಸಲು ಮಧ್ಯಪ್ರವೇಶಿಸಿದ 16 ವರ್ಷದ ಮಗನನ್ನೇ ತಂದೆಯೊಬ್ಬ ಹಾರೆಕೋಲಿನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ…

    ವಾಹನ ಸವಾರರೇ ಎಚ್ಚರ! | ಹಾಫ್ ಹೆಲ್ಮೆಟ್ ನಿಷೇಧ,  ಫುಟ್‌ ಪಾತ್ ಮೇಲೆ ವಾಹನ ಓಡಿಸಿದ್ರೆ ಬೀಳಲಿದೆ ಭಾರಿ ದಂಡ!

    November 16, 2026

    ಮಹಿಳೆ ನದಿಗೆ ಹಾರಿ ಆತ್ಮಹತ್ಯೆ, ಶವ ತೆಗೆಯಲು ಹೋದ ವ್ಯಕ್ತಿಯೂ ನೀರುಪಾಲು

    November 16, 2026

    ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಆಗ್ರಹ: ನಾಳೆ (ನ.17) ಔರಾದ್ ಪಟ್ಟಣ ಬಂದ್ ಗೆ ಕರೆ

    November 16, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.