ಕೊರಟಗೆರೆ : ಕೊರಟಗೆರೆ ಪಟ್ಟಣದ ಬೀದಿಗಳಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ನಾಯಿಗಳು ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು, ಮಹಿಳೆಯರ ಮೇಲೆ ಹಲ್ಲೆ ನಡೆಸುತ್ತಿದ್ದು, ಸಾರ್ವಜನಿಕರು ಪಟ್ಟಣದ ರಸ್ತೆಯಲ್ಲಿ ಓಡಾಡಲು ಭಯ ಉಂಟು ಮಾಡುವ ವಾತಾವರಣ ನಿರ್ಮಾಣವಾಗಿದೆ.
ಕೊರಟಗೆರೆ ಪಟ್ಟಣದಲ್ಲಿ ಮಾಂಸ ಮತ್ತು ಚಿಕನ್ ಮಾರಾಟ ಅಂಗಡಿಗಳ ಬಳಿ ಹಾಗೂ ಮಾರಮ್ಮ ದೇವಾಲಯ, ಕಟ್ಟೆಗಣಪತಿ ದೇವಾಲಯ ರಸ್ತೆ, ದೊಡ್ಡಪೇಟೆ ಸೇರಿದಂತೆ ಪಟ್ಟಣದ ಎಲ್ಲಾ ರಸ್ತೆಗಳಲ್ಲಿ ಬೀಡು ಬಿಟ್ಟಿರುವ ಬೀದಿನಾಯಿಗಳು, ಗುಂಪು–ಗುಂಪುಗಳಾಗಿ ಓಡಾಡುತ್ತಿದ್ದು 10 ರಿಂದ 15 ನಾಯಿಗಳು ಗುಂಪುಗಳಾಗಿ ಓಡಾಡುವುದರಿಂದ ಸಾರ್ವಜನಿಕರಿಗೆ ಭಯದ ವಾತಾವರಣ ಉಂಟಾಗಿದೆ.
ರಸ್ತೆಗಳಲ್ಲಿ ಮಾಂಸ ಮತ್ತು ಚಿಕನ್ ಮಾರಾಟ ಅಂಗಡಿಗಳ ಮುಂದೆ ಹಸಿ ಮಾಂಸ ಮತ್ತು ಹೊಟೇಲ್‌ಗಳ ಮುಂದೆ ತ್ಯಾಜ್ಯಗಳನ್ನು ಬಿಸಾಡುವುದರಿಂದ ಅವುಗಳನ್ನು ತಿನ್ನುವ ನಾಯಿಗಳು ಗುಂಪು–ಗುಂಪಾಗಿ ಪಟ್ಟಣದ ರಸ್ತೆಗಳಲ್ಲಿ ಓಡಾಡುತ್ತಿದ್ದು ಹಸಿ ಮಾಂಸ ತಿಂದ ನಾಯಿಗಳು ರಸ್ತೆಯಲ್ಲಿ ಓಡಾಡುವ ಮನಷ್ಯರ ಮೇಲೂ ದಾಳಿ ನಡೆಸುತ್ತಿವೆ, ಮುಂಜಾನೆ ಮತ್ತು ಸಂಜೆ ನಡೆದಾಡುವವರನ್ನು ದ್ವಿಚಕ್ರ ವಾಹನ ಸವಾರರನ್ನು ಶಾಲೆಗೆ ಹೋಗುವ ವಿದ್ಯಾರ್ಥಿಗಳನ್ನು ಬೀದಿ ನಾಯಿಗಳು ಅಟ್ಟಾಡಿಸಿ ಕೊಂಡು ಬಂದು ಕಚ್ಚುವ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಂಡುಬಂದಿದೆ.
ಕೊರಟಗೆರೆ ಪಟ್ಟಣದ ವಾರ್ಡ್ಗಳಲ್ಲಿಯೂ ಒಂದೊಂದು ನಾಯಿಗಳ ಗುಂಪು ಹೆಚ್ಚಾಗಿದ್ದು ಜನ ಓಡಾಡುವಾಗ ಮತ್ತು ದ್ವಿಚಕ್ರ ವಾಹನಗಳಲ್ಲಿ ಓಡಾಡುವ ವೇಳೆ ಹಿಂಬಾಲಿಸಿ ಕೊಂಡು ಬೊಗಳುವುದು ಹಾಗೂ ವಾಹನಗಳ ಹಿಂದೆ ಹಿಂಬಾಲಿಸಿಕೊಂಡು ಬಂದು ವಾಹನ ಸವಾರರಿಗೆ ಕಚ್ಚುವ ಪ್ರಯತ್ನದಲ್ಲಿ ವಾಹನ ಸವಾರರು ಕೆಳಗೆ ಬಿದ್ದು ಅಪಘಾತವಾಗುವುದು ತಿರುಗುವುದು ಕಂಡು ಬರುತ್ತಿದೆ.
ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ವಯೋವೃದ್ದರು ಮತ್ತು ಮಹಿಳೆಯರು ಓಡಾಡುವ ವೇಳೆ ನಾಯಿಗಳು ದಾಳಿ ಮಾಡುತ್ತಿವೆ, ರಾತ್ರಿ ವೇಳೆ ಬಿದಿಗಳಲ್ಲಿ ನಾಯಿಗಳ ಕೂಗಾಟ, ಚೀರಾಟದಿಂದ ನೆಮ್ಮದಿಯ ನಿದ್ದೆ ಮಾಡುವುದಕ್ಕೂ ಆಗುತ್ತಿಲ್ಲ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ನಾಯಿಗಳ ಉಪಟಳಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದಾರೆ.
ದಿನ ಪತ್ರಿಕೆ ಹಾಕುವ ವೇಳೆ ನಾಯಿ ದಾಳಿ: ಪಟ್ಟಣದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಮುಂಜಾನೆ ದಿನ ಪತ್ರಿಕೆ ಹಾಕುವ ಸಮಯದಲ್ಲಿ ಪತ್ರಿಕಾ ಪತ್ರಿನಿಧಿಯ ಮೇಲೆ ನಾಯಿ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದ್ದು, ದಾಳಿಗೆ ಓಳಗಾದ ಪತ್ರಿಕಾ ಪ್ರತಿನಿಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC