ತಿಪಟೂರು: ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಸಮ್ಮೇಳನದಿಂದ ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್ ಕ್ಷೇತ್ರಗಳಲ್ಲಿ ಯುವ ಇಂಜಿನಿಯರ್ ಗಳಿಗೆ ಪ್ರಪಂಚದಾದ್ಯಂತ ಅವಕಾಶ ಬಾಗಿಲು ತೆರೆಯುತ್ತಿದೆ, ಸಕಾಲದಲ್ಲಿ ಅಧ್ಯಯನ ನಡೆಯುವ ಮೂಲಕ ಉದ್ಯೋಗಗಳನ್ನು ಕಾತರಿ ಪಡಿಸಿಕೊಳ್ಳಬೇಕೆಂದು ಫಿಲಿಪೈನ್ಸ್ ನ ಟೆಕ್ನಾಲಜಿಕಲ್ ಯೂನಿವರ್ಸಿಟಿಯ ಡಾ.ಲೀನಾ ಕಾ ಲೋ ಸ್ಯಾಂಟ್ರೋಸ್ ತಿಳಿಸಿದರು.
ಮೂರನೇ ಅಂತರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಅಮೆರಿಕ ಇಂಗ್ಲೆಂಡ್ ಹಾಂಗ್ ಕಾಂಗ್ ಚೀನಾ ಮುಂತಾದ ದೇಶಗಳಲ್ಲಿ ಕೌಶಲ್ಯಯುತ ಎಂಜಿನಿಯರಿಗಾಗಿ ಬೇಡಿಕೆ ಹೆಚ್ಚಿದೆ ಇಂಥ ಸಮ್ಮೇಳನದಲ್ಲಿ ನೂತನ ಅನ್ವೇಷಣೆಗಳು ಪ್ರಸ್ತುತಪಡಿಸುವ ಮೂಲಕ ಹೆಚ್ಚಿನ ಅವಕಾಶ ಗಿಟ್ಟಿಸಿಕೊಳ್ಳಬೇಕು ಎಂದು ತಿಳಿಸಿದರು.
ಬೆಂಗಳೂರು ಇಂಟೆಲ್ ಕಾರ್ಪೊರೇಷನ್ ಮ್ಯಾನೇಜರ್ ಕುಮಾರ್ ಮಾತನಾಡಿ, ಸಾಕಷ್ಟು ಹೊಸ ಅವಕಾಶಗಳು ಪ್ರಾರಂಭವಾಗುತ್ತಿದ್ದು, ನೂತನ ಇಂಜಿನಿಯರ್ ಗಳು ಇರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಜಿ.ಪಿ.ದೀಪಕ್ ಕಾರ್ಯದರ್ಶಿಗಳಾದ ಎಂ.ಆರ್. ಸಂಗಮೇಶ್, ಜೆ.ಎ.ಉಮಾ ಶಂಕರ್ ಬಾಗೇಪಲ್ಲಿ, ನಟರಾಜ್ ಅನೇಕ ಬೋಧಕ ಬೋಧಕೇತರ ಕಾಲೇಜಿನ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC