ತಿಪಟೂರು : ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಮತ್ತು ಗ್ಲೋಬಲ್ ಎಜುಕೇಷನ್ ಟ್ರಸ್ಟ್ ಮೈಸೂರು ಇವರ ಸಹಯೋಗದೊಂದಿಗೆ ದಕ್ಷ ಪಿ.ಯು.ಕಾಲೇಜಿನಲ್ಲಿ ನಾಡಿನ ಸಹಸ್ರರಾರು ಕವಿಗಳು ರಚಿಸಿರುವ “ನಮಸ್ತೆ ಸೈನಿಕ” ಕೃತಿ ಬಿಡುಗಡೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭ ನಡೆಯಿತು.
ಕರ್ನಾಟಕ ಗಡಿನಾಡು ಪ್ರಾಧಿಕಾರದ ಅದ್ಯಕ್ಷರಾದ ಡಾ.ಸಿ.ಸೋಮಶೇಖರ ಕಾರ್ಯಕ್ರಮವನ್ನು ಉದ್ಘಾಟಿಸಿ, ಸೈನಿಕರು ಸರ್ವರಿಂದಲೂ ಸೈ ಎನಿಸಿಕೊಳ್ಳುವ ಮಹಾ ತ್ಯಾಗಿಗಳು. ನೆಲ ಜಲ ಭಾಷೆಗಾಗಿ ನಮ್ಮ ಕನ್ನಡಿಗರು ಸದಾ ಸಿದ್ದರಿದ್ದಾರೆ ಎಂದರು.
ಸಮಾರಂಭದ ರೂವಾರಿಗಳು , ಸಿನಿಮಾ ನಿರ್ದೇಶಕರಾದ ಗುಣವಂತ ಮಂಜು ಪ್ರಾಸ್ತಾವಿಕ ನುಡಿ ನಮನ ಸಲ್ಲಿಸಿದರು. ಶ್ರೀ ಕೊಳದ ಮಠದ ಡಾ.ಶಾಂತವೀರ ಮಹಾ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನಮಸ್ತೆ ಸೈನಿಕ ಕೃತಿಯ ಸಾಹಿತಿಗಳಲ್ಲಿ ಒಬ್ಬರಾದ ತಿಪಟೂರು ತಾಲೂಕಿನ ರೈತಕವಿ ಪಿ.ಶಂಕರಪ್ಪಬಳ್ಳೇಕಟ್ಟೆ ರವರಿಗೆ ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರದ ಸಾಧನೆಗೆ ರಾಷ್ಟ್ರೀಯ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಡಾ.ಜಯಚಂದ್ರರಾಜು, ದಕ್ಷ ಕಾಲೇಜು ಅಧ್ಯಕ್ಷರು, ಖ್ಯಾತ ಸಾಹಿತಿ ಸತೀಶ್ ಜವರೇಗೌಡ್ರು, ನಿವೃತ್ತ ಐಎಫ್ ಎಸ್ ಲಕ್ಷ್ಮಣ ಮೂರ್ತಿ, ಸಂಸ್ಕೃತಿ ಚಿಂತಕರಾದ ಗೋವಿಂದನಳ್ಳಿ ಕೃಷ್ಣೇಗೌಡ್ರು, ಸದಾಶಿವಯ್ಯ ಜಗರನಳ್ಳಿ, ಶ್ರೀಮತಿ ಪ್ರಭಾಶಾಸ್ತ್ರಿ, ಡಾ.ಸುಬ್ಬಲಕ್ಷೀ ಹಾಗೂ ಇನ್ನು ಹಲವು ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಆತ್ಮಶ್ರೀ ಕನ್ನಡ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸದಸ್ಯರು ಮತ್ತು ದಕ್ಷ ಕಾಲೇಜು ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಸಾಹಿತ್ಯ ಸಾಂಸ್ಕೃತಿಕ ಸಮಾರಂಭವನ್ನು ಯಶಸ್ವಿಗೊಳಿಸಿದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB