nammatumakuru

    Subscribe to Updates

    Get the latest creative news from FooBar about art, design and business.

    What's Hot

    ಇಪಿಎಫ್‌ ಒದಿಂದ ಉದ್ಯೋಗದಾತರಿಗೆ ಬಿಗ್ ರಿಲೀಫ್: ‘EEC 2026’ ಮತ್ತು ‘ವಿಶ್ವಾಸ್ 2026’ ಯೋಜನೆಗಳು ಜಾರಿ

    August 14, 2026

    ಶಾಂತಿ—ಕ್ರಾಂತಿ ರೀ ರಿಲೀಸ್ ಗೆ ಕಾದು ಕುಳಿತ ಅಭಿಮಾನಿಗಳಿಗೆ ನಿರಾಸೆ: ಸದ್ಯಕ್ಕಿಲ್ಲ ರೀ ರಿಲೀಸ್! | ಕಾರಣ ಏನು?

    August 14, 2026

    ಶಿವಮೊಗ್ಗ: ಕಡಜ ಹುಳ ಕಡಿದು 8 ವರ್ಷದ ಬಾಲಕ ಸಾವು

    August 14, 2026
    Facebook Twitter Instagram
    ಟ್ರೆಂಡಿಂಗ್
    • ಇಪಿಎಫ್‌ ಒದಿಂದ ಉದ್ಯೋಗದಾತರಿಗೆ ಬಿಗ್ ರಿಲೀಫ್: ‘EEC 2026’ ಮತ್ತು ‘ವಿಶ್ವಾಸ್ 2026’ ಯೋಜನೆಗಳು ಜಾರಿ
    • ಶಾಂತಿ—ಕ್ರಾಂತಿ ರೀ ರಿಲೀಸ್ ಗೆ ಕಾದು ಕುಳಿತ ಅಭಿಮಾನಿಗಳಿಗೆ ನಿರಾಸೆ: ಸದ್ಯಕ್ಕಿಲ್ಲ ರೀ ರಿಲೀಸ್! | ಕಾರಣ ಏನು?
    • ಶಿವಮೊಗ್ಗ: ಕಡಜ ಹುಳ ಕಡಿದು 8 ವರ್ಷದ ಬಾಲಕ ಸಾವು
    • ಸರಗೂರು: 9ನೇ ವಾರ್ಡ್‌ನಲ್ಲಿ ₹35 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ – ಪಪಂ ಸದಸ್ಯ ಶ್ರೀನಿವಾಸ್ ಪರಿಶೀಲನೆ
    • ಪ್ರಜ್ವಲ್ ರೇವಣ್ಣ ಮೊಬೈಲ್ ಪ್ರಸಂಗ: ಶಿವ—ಪಾರ್ವತಿ ಹೆಸರಲ್ಲಿ ಅಪ್ಪ ಅಮ್ಮನ ನಂಬರ್ | 6 ಬಾರಿ ಬಚಾವಾಗಿದ್ದ ಪ್ರಜ್ವಲ್
    • ಮಹಿಳಾ ಪಿಎಸ್‌ ಐ ಮೇಲೆ ಕಪಾಳಮೋಕ್ಷ ಪ್ರಕರಣ: ಮಗಳ ವರ್ತನೆಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ಬಿಜೆಪಿ ಶಾಸಕ ಸುರೇಶ್ ಗೌಡ
    • ಕರ್ತವ್ಯನಿರತ ಮಹಿಳಾ ಪಿಎಸ್‌ ಐ ಮೇಲೆ ಶಾಸಕನ ಪುತ್ರಿಯಿಂದ ಹಲ್ಲೆ: ಕಪಾಳಮೋಕ್ಷ ಆರೋಪ, ಎಫ್‌ ಐಆರ್ ದಾಖಲು!
    • ಕೊರಟಗೆರೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಿ ಹೆಚ್.ಡಿ.ಕೆ. ಅವರನ್ನು ಮುಖ್ಯಮಂತ್ರಿ ಮಾಡುವುದೇ ಗುರಿ | ಪಿ.ಎನ್. ಕೃಷ್ಣಮೂರ್ತಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮತಗಳ್ಳತನದ ಸತ್ಯ ಈಗ ಬಯಲಾಗ್ತಿದೆ: ಮಸಹಳ್ಳಿ ನವೀನ್
    ಜಿಲ್ಲಾ ಸುದ್ದಿ August 2, 2025

    ಮತಗಳ್ಳತನದ ಸತ್ಯ ಈಗ ಬಯಲಾಗ್ತಿದೆ: ಮಸಹಳ್ಳಿ ನವೀನ್

    By adminAugust 2, 2025No Comments2 Mins Read
    naveen

    ಸರಗೂರು:  ಕರ್ನಾಟಕದಲ್ಲಿ ನಡೆದಿರುವ ಕಳೆದ ಲೋಕಸಭಾ ಚುನಾವಣೆಯ ಫಲಿತಾಂಶ ನಮಗೆ ಆಶ್ಚರ್ಯವನ್ನು ಉಂಟುಮಾಡಿದ್ದು ಮಾತ್ರವಲ್ಲ, ಹಲವಾರು ಬಗೆಯ ಅನುಮಾನಗಳನ್ನು ಕೂಡಾ ಹುಟ್ಟುಹಾಕಿತ್ತು. ಆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು ನಡೆಸಿರುವ ಅಕ್ರಮವೇ ಕಾಂಗ್ರೆಸ್ ಪಕ್ಷದ ಹಿನ್ನಡೆಗೆ ಕಾರಣ ಎನ್ನುವ ಸತ್ಯ ಈಗ ಬಯಲಾಗುತ್ತಿದೆ ಎಂದು ಸರಗೂರು ಯೂಥ್ ಕಾಂಗ್ರೆಸ್ ಪಕ್ಷದ ತಾಲೂಕು ಅಧ್ಯಕ್ಷ ಮಸಹಳ್ಳಿ ನವೀನ್ ತಿಳಿಸಿದರು.

    ಪಟ್ಟಣದ ಪ್ರವಾಸಿ ಮಂದಿರದಲ್ಲಿ  ಸರಗೂರು ಯೂಥ್ ಬ್ಲಾಕ್ ವತಿಯಿಂದ ಶನಿವಾರ ಕಳೆದ ಲೋಕಸಭಾ ಚುನಾವಣೆಯಲ್ಲಿ ನಡೆದಂತಹ ಮತಗಳ್ಳತನ ವಿಚಾರವಾಗಿ ಚುನಾವಣೆ ಪೂರ್ವಭಾವಿ ಸಭೆಯನ್ನು ಹಮ್ಮಿಕೊಂಡಿದ್ದು, ಅ.5 ರಂದು  ಬೆಂಗಳೂರಿನಲ್ಲಿ  ನಡೆಯಲಿರುವ ಸಮಾವೇಶಕ್ಕೆ ಯೂಥ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಹೋಗಬೇಕು ಎಂದು ಸಭೆಯ ಅಧ್ಯಕ್ಷತೆ ವಹಿಸಿ ಕಾರ್ಯಕರ್ತರನ್ನು ಮನವಿ ಮಾಡಿ ಮಾತನಾಡಿದರು.

    ಎಐಸಿಸಿ ಅಧ್ಯಕ್ಷರು ಮತ್ತು ರಾಜ್ಯ ಸಭಾ ವಿರೋಧ ಪಕ್ಷದ ನಾಯಕರು ಆದ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿರವರು ಬೆಂಗಳೂರಿಗೆ ಬರುತ್ತಿಲಿದ್ದಾರೆ. ಆದರಿಂದ ಶಾಸಕ ಅನಿಲ್ ಕುಮಾರ್ ಅವರ ನೇತೃತ್ವದಲ್ಲಿ  ಬೆಂಗಳೂರಿಗೆ ಹೋಗಬೇಕು ಎಂದು ಆದೇಶ ನೀಡಿದ್ದಾರೆ ಎಂದರು.

    ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗ ನಡೆಸಿರುವ ಅಕ್ರಮಗಳ ದಾಸ್ತಾನನ್ನು ಒಂದೊಂದಾಗಿ ಬಯಲಿಗೆಳೆಯುತ್ತಿದ್ದು, ಕರ್ನಾಟಕದಲ್ಲಿ ನಡೆದಿರುವ ಚುನಾವಣಾ ಅಕ್ರಮಗಳ ಬಗ್ಗೆಯೂ ವಿವರಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.

    ವಿಧಾನಸಭಾ ಕ್ಷೇತ್ರದ ಯೂಥ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು ಮಾತನಾಡಿ, ಕರ್ನಾಟಕದಲ್ಲಿ ಚುನಾವಣಾ ಆಯೋಗ ಅಕ್ರಮಗಳನ್ನು ನಡೆಸಿರುವುದಕ್ಕೆ ನೂರಕ್ಕೆ ನೂರರಷ್ಟು ಸಾಕ್ಷ್ಯಗಳಿವೆ ಎಂದು ರಾಹುಲ್ ಗಾಂಧಿ ಹೇಳಿರುವುದನ್ನು ನಾನು ಸಂಪೂರ್ಣವಾಗಿ ನಾವುಗಳು ಪಕ್ಷದ ಜೊತೆಯಲ್ಲಿ ಯೂಥ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

    ನರೇಂದ್ರ ಮೋದಿ ಅವರ ಚುನಾವಣಾ ಗೆಲುವುಗಳಿಗೆ ಅವರ ಜನಪ್ರಿಯತೆಯಾಗಲಿ, ಬಿಜೆಪಿ ಸರ್ಕಾರದ ಸಾಧನೆಗಳಾಗಲಿ ಕಾರಣ ಅಲ್ಲ. ಅದು ಚುನಾವಣಾ ಆಯೋಗದ ಮೂಲಕ ನಡೆಸಿದ ‘’ಮತಗಳ್ಳತನ’’ ಕಾರಣ ಎನ್ನುವ ಸತ್ಯ ಈಗ ಬಯಲಾಗುತ್ತಿದೆ ಎಂದರು.

    ಕರ್ನಾಟಕದಲ್ಲಿ ನಡೆದಿರುವ ಚುನಾವಣಾ ಅಕ್ರಮಗಳ ಬಗ್ಗೆ ಏನು ಕ್ರಮಕೈಗೊಳ್ಳಬೇಕೆಂಬ ಬಗ್ಗೆ ರಾಹುಲ್ ಗಾಂಧಿಯವರು ಮತ್ತು ಎಐಸಿಸಿ ಅಧ್ಯ್ಕಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರ ಜೊತೆ ಸಮಾಲೋಚಿಸಿ, ನಾವು ತೀರ್ಮಾನ ಕೈಗೊಂಡಿದ್ದಾರೆ.

    ರಾಹುಲ್ ಗಾಂಧಿ ಹೇಳಿದ ಕ್ಷೇತ್ರ ಯಾವುದು ಎನ್ನುವ ಕುತೂಹಲ ಇನ್ನಷ್ಟು ಜಾಸ್ತಿಯಾಗಿದೆ. ಅದು, ಬೆಂಗಳೂರು ಗ್ರಾಮಾಂತರವೋ ಅಥವಾ ಬೆಂಗಳೂರು ಕೇಂದ್ರವೋ ಅಥವಾ ಇನ್ಯಾವುದಾದರೂ ಬೇರೆ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿ ಉಲ್ಲೇಖಿಸುತ್ತಿದ್ದಾರೋ ಎನ್ನುವ ಕುತೂಹಲಕ್ಕೆ ಸದ್ಯದಲ್ಲೇ ತೆರೆ ಬೀಳಲಿದೆ ಎಂದರು.

    ಈ ಸಂದರ್ಭದಲ್ಲಿ ಜಿಲ್ಲಾ ಯೂಥ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಳಸೂರು ಬಸವರಾಜು, ಪಪಂ ಸದಸ್ಯ ಶ್ರೀನಿವಾಸ, ಯೂಥ್ ಕಾಂಗ್ರೆಸ್ ಉಪಾಧ್ಯಕ್ಷ ಯಾಸೀನ್, ಮಾಜಿ ಗ್ರಾಪಂ ಸದಸ್ಯ ಉಯ್ಯಂಬಳ್ಳಿ ನಾಗರಾಜು, ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ತಾಲೂಕು ಅಧ್ಯಕ್ಷ ಅಮೀರ್ ಸುಹೇಲ್, ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಚೆಲುವರಾಜು, ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಮಹೇಶ್, ಮುಖಂಡರು ಆರ್ಯ ಮಹೇಶ್,ಕೂಡಿಗಿ ಗೋವಿಂದರಾಜು, ಕುಮಾರ್, ಅಭಿಸರಗೂರು, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಮಫಿರ್, ಲಂಕೆ ದೆವರಾಜು, ದಯಾನಂದ,ಮಾದು, ನಾಗರಾಜು, ಮಾರ್ಕಂಡೇಯ, ಇನ್ನೂ ಮುಖಂಡರು ಹಾಗೂ ಕಾರ್ಯಕರ್ತರು ಸೇರಿದಂತೆ ಹಾಜರಿದ್ದರು.

    ವರದಿ: ಹಾದನೂರು ಚಂದ್ರ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

     

    admin
    • Website

    Related Posts

    ಶಿವಮೊಗ್ಗ: ಕಡಜ ಹುಳ ಕಡಿದು 8 ವರ್ಷದ ಬಾಲಕ ಸಾವು

    August 14, 2026

    ಸರಗೂರು: 9ನೇ ವಾರ್ಡ್‌ನಲ್ಲಿ ₹35 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ – ಪಪಂ ಸದಸ್ಯ ಶ್ರೀನಿವಾಸ್ ಪರಿಶೀಲನೆ

    August 14, 2026

    ಸರಗೂರು: ತಳಮಟ್ಟದ ಕಾರ್ಯಕರ್ತರೇ ಪಕ್ಷದ ಶಕ್ತಿ – ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಎನ್. ಸುಬ್ಬಣ್ಣ ಕರೆ

    August 13, 2026

    Comments are closed.

    Our Picks

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026

    ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!

    August 9, 2026

    ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ

    August 9, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಲೇಖನ

    ಇಪಿಎಫ್‌ ಒದಿಂದ ಉದ್ಯೋಗದಾತರಿಗೆ ಬಿಗ್ ರಿಲೀಫ್: ‘EEC 2026’ ಮತ್ತು ‘ವಿಶ್ವಾಸ್ 2026’ ಯೋಜನೆಗಳು ಜಾರಿ

    August 14, 2026

    ತುಮಕೂರು: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (EPFO) ಸ್ವಯಂಪ್ರೇರಿತ ನಿಯಮ ಅನುಸರಣೆಯನ್ನು ಉತ್ತೇಜಿಸಲು, ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ವಿಸ್ತರಿಸಲು ಹಾಗೂ…

    ಶಾಂತಿ—ಕ್ರಾಂತಿ ರೀ ರಿಲೀಸ್ ಗೆ ಕಾದು ಕುಳಿತ ಅಭಿಮಾನಿಗಳಿಗೆ ನಿರಾಸೆ: ಸದ್ಯಕ್ಕಿಲ್ಲ ರೀ ರಿಲೀಸ್! | ಕಾರಣ ಏನು?

    August 14, 2026

    ಶಿವಮೊಗ್ಗ: ಕಡಜ ಹುಳ ಕಡಿದು 8 ವರ್ಷದ ಬಾಲಕ ಸಾವು

    August 14, 2026

    ಸರಗೂರು: 9ನೇ ವಾರ್ಡ್‌ನಲ್ಲಿ ₹35 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ – ಪಪಂ ಸದಸ್ಯ ಶ್ರೀನಿವಾಸ್ ಪರಿಶೀಲನೆ

    August 14, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.