ತುಮಕೂರು: ಜಿಲ್ಲೆಯ ತಿಪಟೂರು ತಾಲೂಕು ಗಡಿ ಭಾಗದ ಗಣಿಭಾದಿತ ಗ್ರಾಮಗಳ ರೈತರಿಗೆ ವಸತಿ ನೀಡಲು ಜಿಲ್ಲೆಯಲ್ಲಿ 857 ಮನೆಗಳು ನಿರ್ಮಾಣಕ್ಕೆ ಸರ್ಕಾರದ ಅನುಮತಿ ನೀಡಿದ್ದರೂ, ಕಿಬ್ಬನಹಳ್ಳಿ ಹೋಬಳಿಯ ಹಿಂಡಿಸ್ ಕೆರೆ ಗ್ರಾಮ ಪಂಚಾಯಿತಿ ಮತ್ತು ಬಿಳಿಗೆರೆ ಪಂಚಾಯಿತಿಗಳನ್ನು ಕಡೆಗಣಿಸಿ ಫಲಾನುಭವಿಗಳ ಆಯ್ಕೆ ಸಾಧ್ಯವಾಗಿಲ್ಲ ಎಂದು ಹಿಂಡಿಸ್ ಕೆರೆಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿದ್ಯಾ ತಿಳಿಸಿದರು.
ಸಾಕಷ್ಟು ಗ್ರಾಮಗಳನ್ನು ನಿಗದಿಪಡಿಸಿಲ್ಲ, ಪಂಚಾಯಿತಿ ವ್ಯಾಪ್ತಿಯಲ್ಲಿ ಗಣಿಗಾರಿಕೆ ಕಾರಣದಿಂದಲೇ ಬಹಳಷ್ಟು ಮಂದಿಗೆ ಕ್ಯಾನ್ಸರ್ ಮತ್ತು ಕ್ಷಯ ರೋಗಕ್ಕೆ ತುತ್ತಾಗಿದ್ದಾರೆ. ರಾಜ್ಯಗಣಿ ಪುನರ್ ಚೇತನ ನಿಗಮ ಇತ್ತ ಗಮನಹರಿಸಿ ತಕ್ಷಣ ವೈದ್ಯಕೀಯ ಮತ್ತು ಶಿಕ್ಷಣ ರೈತರಿಗೆ ಪುನರ್ವಸತಿ ಕಲ್ಪಿಸಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯರು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ವೈ.ಜಿ.ರಾಘವೇಂದ್ರ ರಸ್ತೆ ಚರಂಡಿ ಕಟ್ಟಡಗಳ ನಿರ್ಮಾಣಕ್ಕೆ ಅನುದಾನದ ಕೊರತೆ ಇಲ್ಲ ಆದರೆ ಬಡವರಿಗೆ ಮನೆ ನೀಡಲು ಅನುದಾನದ ಕೊರತೆಯ ನೆಪ ಹೇಳುತ್ತಿದ್ದಾರೆ, ಬೆಳಗೆರೆ ಪಂಚಾಯಿತಿಯಲ್ಲಿ 10 ಜನ ಮತ್ತು ಹಿಂಡಿಸಿ ಕೆರೆ ಗ್ರಾಮ ಪಂಚಾಯಿತಿಯ ಕೇವಲ 23 ಅರ್ಹರನ್ನು ಗುರುತಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಗ್ರಾಮ ಸಭೆಗೆ ಆಯ್ಕೆ ಕಗ್ಗಂಟಾಗಿ ಉಳಿದಿದೆ ಎಂದು ತಿಳಿಸಿದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC