ತಿಪಟೂರು: ಧರ್ಮಸ್ಥಳದಲ್ಲಿ ಅನಾಮಿಕನ ದೂರಿನ ಮೇರೆಗೆ ಎಸ್ ಐಟಿ ನೇತೃತ್ವದಲ್ಲಿ ನಡೆಯುತ್ತಿರುವ ಶೋಧ ಕಾರ್ಯ ಬೆಟ್ಟ ಅಗೆದು ಇಲಿ ಹಿಡಿದರು ಎಂಬಂತಾಗಿದ್ದು, ಸರ್ಕಾರದ ಲಕ್ಷಾಂತರ ಹಣ ಸುಮ್ಮನೆ ಖರ್ಚಾಗಿದೆ. ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂದು ನಿವೃತ್ತ ಎಸಿಪಿ ಹಾಗೂ ತಿಪಟೂರು ಹೋರಾಟಗಾರ ಸಮಿತಿಯ ಲೋಕೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು.
ಎಸ್ ಐಟಿ ರಚಿಸಿ ಅದಕ್ಕೆ ಡಿಜಿ ನೇಮಕ ಮಾಡಿ ಅನವಶ್ಯಕವಾಗಿ ದೊಡ್ಡ ತಂಡವನ್ನೇ ರಚಿಸಲಾಗಿದೆ, ಇದರಿಂದ ಸ್ಥಳೀಯ ಭಾಗದ ಪೊಲೀಸರ ನಂಬಿಕೆ ಕಡಿಮೆ ಮಾಡಿದಂತಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರಿಂದಲೇ ತನಿಖೆ ಮಾಡಿಸಬಹುದಿತ್ತು, ಅದು ಬಿಟ್ಟು ಇಷ್ಟೊಂದು ಹಣ ಖರ್ಚು ಮಾಡಿ ಬೇರೆ ಅಧಿಕಾರಿಗಳನ್ನು ನೇಮಿಸಿ ಸಮಯ ವ್ಯರ್ಥ ಮಾಡುವ ಅವಶ್ಯಕತೆ ಇರಲಿಲ್ಲ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ವಿಚಾರದಲ್ಲಿ ಏಕ ಪಕ್ಷೀಯ ನಿರ್ಧಾರ ಕೈಗೊಂಡಿದ್ದು, ಸಂಪುಟದ ಸದಸ್ಯರಿಗೆ ಈ ವಿಚಾರವೇ ಗೊತ್ತಿಲ್ಲ ಎಂದು ತಿಳಿಸಿದರು. ಸರ್ಕಾರದ ವೈಫಲ್ಯವನ್ನು ಮುಚ್ಚಿ ಹಾಕಲು ಜನರ ಗಮನ ಬೇರೆಡೆ ಸೆಳೆಯಲು ಧರ್ಮಸ್ಥಳ ಹೆಸರಿಗೆ ಮಸಿ ಬಳಿಯಲು ಎಂಬುದು ನನ್ನ ಅನುಮಾನ ಎಂದರು.
ಈ ಅನಾಮಿಕ ತಲೆಬರುಡೆಯನ್ನು ತಂದಿದ್ದಾನೆ ಎಂದರೆ, ಅವನನ್ನು ಮೊದಲೇ ವಿಚಾರ ಮಾಡಬೇಕಿತ್ತು. ಎಲ್ಲಿ ಬೇಕೆಂದರಲ್ಲಿ ಅಸ್ಥಿಪಂಜರ ತರುವಂತಿಲ್ಲ, ಇದು ಕಾನೂನುಬಾಹಿರ ವಿಚಾರ. ಧರ್ಮಸ್ಥಳ ಪುಣ್ಯಕ್ಷೇತ್ರ ಒಬ್ಬ ಅನಾಮಿಕ ಇಷ್ಟೆಲ್ಲಾ ರಾದ್ಧಾಂತಮಾಡಲು ಆಗುತ್ತಿರಲಿಲ್ಲ ಅವನ ಹಿಂದೆ ಕಾಣದ ಕೈಗಳು ದೊಡ್ಡ ಜಾಲವೇ ಇರಬಹುದು. ಈ ಅನಾಮಿಕನನ್ನು ತನಿಖೆ ಮಾಡಿ ವಿಷಯ ಹೊರ ತರಬೇಕು ಎಂದು ಆಗ್ರಹಿಸಿದರು.
ಈ ಸುದ್ದಿಗೋಷ್ಠಿಯಲ್ಲಿ ನಗರಸಭೆ ಮಾಜಿ ಉಪಾಧ್ಯಕ್ಷ ಸೊಪ್ಪು ಗಣೇಶ್, ನಗರಸಭೆ ಸದಸ್ಯ ಭಾರತಿ, ನಿವೃತ್ತ ನೌಕರ ಸಂಘದ ಅಧ್ಯಕ್ಷ ಕೆ.ಎಂ.ರಾಜಣ್ಣ, ಸಿದ್ದಾಪುರ ರೇಣು, ಬೊಮ್ಮಲಾಪುರ ಶಶಿಧರ್, ಕರ್ನಾಟಕ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಗುರುಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC