ಮಧುಗಿರಿ: ಕೊಂಡವಾಡಿ ಗ್ರಾಮದ ರೈತರಿಗೆ 45 ದಿನಗಳಿಂದ ಹಾಲಿನ ಬಟವಾಡೆ ನೀಡದೆ ಒಟ್ಟು 18 ಲಕ್ಷ ಹಣ ಬಾಕಿ ಉಳಿಸಿಕೊಂಡಿರುವ ಮಧುಗಿರಿ ಎ ಆರ್ ಕಚೇರಿ ಅಧಿಕಾರಿ ಓಬಳೇಶ್, ರಾಜಕೀಯ ಒತ್ತಡ ಹೇರಿಸಿ ಹಣವನ್ನು ನೀಡದಂತೆ ಬ್ಯಾಂಕಿಗೆ ಸಹಕಾರ ಇಲಾಖೆಯ ಮಧುಗಿರಿ ಕಚೇರಿಯ ಅಧಿಕಾರಿಗಳು ಪತ್ರ ಬರೆದಿದ್ದಾರೆ ಎಂದು ಕೊಂಡವಾಡಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
ತುಮುಲ್ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ, ಅಧಿಕಾರಿಗಳು ಕೊಂಡವಾಡಿ ಡೇರಿಯಲ್ಲಿ ಸರಕಾರದ ಆದೇಶದಂತೆ ಆಡಳಿತ ಮಂಡಳಿಯು ಇರಬೇಕಿದ್ದು, ಕೋರ್ಟ್ ಆದೇಶ ಉಲ್ಲಂಘಿಸಿ ಇಲಾಖೆಯಿಂದಲೇ ಆಡಳಿತಾಧಿಕಾರಿಯನ್ನು ನೇಮಿಸಿರುವುದು ಕಾನೂನು ಬಾಹಿರ. ಈ ಬಗ್ಗೆ ಕೋರ್ಟ್ ಆದೇಶವಿದ್ದು ತಡೆಯಾಜ್ಞೆ ನೀಡಿದೆ. ಆದರೂ ಆಡಳಿತಾಧಿಕಾರಿಯನ್ನು ನೇಮಿಸಿ ರೈತರ ಬಟವಾಡೆ ಹಣ ವಿತರಣೆಗೆ ಅಡ್ಡಿ ಮಾಡಲಾಗಿದೆ ಎಂದು ಆರೋಪಿಸಿದರು.
ಡಿಆರ್ ಜೊತೆ ಮಾತನಾಡಿದ ಎ.ಆರ್.ಒಬಳೇಶ್ ಬ್ಯಾಂಕಿಗೆ ಹಣ ಬಿಡುಗಡೆಗೆ ಪತ್ರ ಬರೆಯಲಾಗುವುದೆಂದು ಹೇಳಿ ಪತ್ರ ನೀಡಿದರು. ಆದರೆ ಆ ಪತ್ರ ಹಿಡಿದು ಹೊರಟ ರೈತರಿಗೆ ಬ್ಯಾಂಕಿನಲ್ಲಿ ಚಳ್ಳೆಹಣ್ಣು ತಿನ್ನಿಸಲಾಗಿದೆ. ಪತ್ರವನ್ನು ನೋಡಿದ ಬ್ಯಾಲ್ಯ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕಿ ಕಾತ್ಯಾಯಿನಿ ಪತ್ರದ ಬಗ್ಗೆ ಅಪಸ್ವರ ಎತ್ತಿದ್ದು ಸರಿಯಾಗಿಲ್ಲ ಎಂದು ಹೇಳಿ ಬರುವುದಾಗಿ ತಿಳಿಸಿದ್ದು ರೈತರ ಕೈಗೆ ಸಿಗದೆ ಕಾಣೆಯಾಗಿದ್ದರು. ಕಚೇರಿಗೆ ಬಂದು ನಮಗೆ ಹಾಲಿನ ಬಟವಾಡೆ ಹಣ ನೀಡಲೇಬೇಕೆಂದು ರೈತರು ಪಟ್ಟು ಹಿಡಿದರು. ಸ್ಥಳಕ್ಕೆ ಪೊಲೀಸ್ ಇಲಾಖೆ ಸಿಪಿಐ ಹನುಮಂತರಾಯಪ್ಪ, ಪಿ ಎಸ ಐ ಮುತ್ತುರಾಜ್ ಆಗಮಿಸಿ ರೈತರನ್ನು ಸಮಜಾಯಿಸುವ ಕೆಲಸವನ್ನು ಮಾಡಿದರು ಎಂದರು.
ಡಿಆರ್ ಜೊತೆ ಮಾತನಾಡಿದ ಎಆರ್ ಒಬಳೇಶ್ ಬ್ಯಾಂಕಿಗೆ ಹಣ ಬಿಡುಗಡೆಗೆ ಪತ್ರ ಬರೆಯಲಾಗುವುದೆಂದು ಹೇಳಿ ಪತ್ರ ನೀಡಿದರು. ಆದರೆ ಆ ಪತ್ರ ಹಿಡಿದು ಹೊರಟ ರೈತರಿಗೆ ಬ್ಯಾಂಕಿನಲ್ಲಿ ಚಳ್ಳೆಹಣ್ಣು ತಿನ್ನಿಸಲಾಗಿದೆ. ಪತ್ರವನ್ನು ನೋಡಿದ ಬ್ಯಾಲ್ಯ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕಿ ಕಾತ್ಯಾಯಿನಿ ಪತ್ರದ ಬಗ್ಗೆ ಅಪಸ್ವರ ಎತ್ತಿದ್ದು ಸರಿಯಾಗಿಲ್ಲ ಎಂದು ಹೇಳಿ ಬರುವುದಾಗಿ ತಿಳಿಸಿದ್ದು ರೈತರ ಕೈಗೆ ಸಿಗದೆ ಕಾಣೆಯಾಗಿದ್ದರು ರೈತರು ಮಾತ್ರ ಇಂತಹ ಅಧಿಕಾರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು ನಮ್ಮ ಹಣ ಕೊಡದಿದ್ದರೆ ಹಬ್ಬದ ನಂತರ ಕಚೇರಿಗೆ ರಾಸುಗಳೊಂದಿಗೆ ಬಂದು ಧರಣಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ವರದಿ: ಅಬೀದ್ ಮಧುಗಿರಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC