ತಿಪಟೂರು: ಕಲ್ಪತರು ತಾಂತ್ರಿಕ ವಿದ್ಯಾಲಯ ಹಾಗೂ ತುಮಕೂರಿನ ಇನ್ನೋವೇಶನ್ ಮತ್ತು ಎಂಟರ್ ಫ್ರೀ ಇನರ್ಶಿಪ್ ಕೌನ್ಸಿಲಿಂಗ್ ಸಹಯೋಗದೊಂದಿಗೆ ಉದ್ಯಮಶೀಲತೆಯ ವೃತ್ತಿಗಳಿಗೆ ಅವಕಾಶಗಳ ಮಹಾಸಾಗರ ಎಂಬ ಜಾಗೃತಿ ಕಾರ್ಯಕ್ರಮವನ್ನು ಅಕ್ಟೋಬರ್ 29ರಂದು ಕೆಐಟಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಪತರು ವಿದ್ಯಾ ಸಂಸ್ಥೆಯ ಕಲ್ಪತರು ವಿದ್ಯಾ ಸಂಸ್ಥೆಯ ಖಜಾಂಚಿ ಟಿ.ಎಸ್.ಶಿವಪ್ರಸಾದ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಪತರು ಸಂಸ್ಥೆ ಅಡಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಶಾಲಾ ಕಾಲೇಜುಗಳು ಇದರಲ್ಲಿ ಭಾಗವಹಿಸುತ್ತಿದ್ದು, ಮಿಷನ್ 2035 ದೀರ್ಘಾವಧಿ ತಂತ್ರ ಯೋಜನೆಯನ್ನು ಅನುಸರಿಸುತ್ತಿದೆ, ಸ್ಮಾರ್ಟ್ ಆಪ್ ಗಳು ಇಂಕ್ಯುಬೇಷನ್ ಕೇಂದ್ರಗಳು ಸಂಶೋಧನೆಗಳು ಯೋಜನೆಗಳು ಅನುದಾನಗಳು ಹಾಗೂ ಹೂಡಿಕೆಗೆ ಅವಕಾಶಗಳತ್ತ ವಿಶೇಷ ಗಮನ ನೀಡಲಾಗುವುದು ಎಂದರು.
ಇದಕ್ಕಾಗಿ ಈಗಾಗಲೇ 90 ಲಕ್ಷ ರೂ. ವೆಚ್ಚದಲ್ಲಿ ಐಡಿಯಾ ಲ್ಯಾಬ್ ಪ್ರಾರಂಭಿಸಿದ್ದು, ಮುಂಬರುವ ದಿನಗಳಲ್ಲಿ ಇಂಕ್ಟಿವೇಶನ್ ಕ್ವಾಟಮ್ ಕಂಪ್ಯೂಟರ್ ಸೆಕ್ಯೂರಿಟಿ ಕೇಂದ್ರಗಳು ಮುಂತಾದ ಭವಿಷ್ಯಗಳನ್ನು ಸ್ಥಾಪಿಸಲು ಕ್ರಮ ಕೈಗೊಂಡಿದೆ ಇದಕ್ಕೆ ವಿದ್ಯಾರ್ಥಿಗಳು ಬೋಧಕರಾದಿಯಾಗಿ ಸಾರ್ವಜನಿಕ ಸಹಕಾರವು ಬೇಕು ಈ ಕಾರ್ಯಕ್ರಮಕ್ಕೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸತೀಶ್ ಭಾವನ್ಕರ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಬಾಗೇಪಲ್ಲಿ ನಟರಾಜ್ ನಿಕಟ ಪೂರ್ವ ಪ್ರಾಂಶುಪಾಲ ಗುರುಮೂರ್ತಿ ಪಲ್ಲಾಘಟ್ಟಿ ಹಡುವಪ್ಪ ಕಾಲೇಜಿನ ಸತೀಶ್ ಚಂದ್ರ ಕಾರ್ಯದರ್ಶಿ ಸಂಗಮೇಶ್ ಮುಂತಾದವರು ಭಾಗವಹಿಸಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC