ಧಾರವಾಡ: ವೋಟಿಂಗ್ ಮಶಿನ್ ಗೊಂದಲ ಭಾರತ ದೇಶದಲ್ಲೇ ನಡೆಯುತ್ತಿದೆ. ಬಿಹಾರದ ಮೂರು ಲಕ್ಷ ಮನೆಗಳಿಗೆ ಜೀರೋ ನಂಬರ್ ಕೊಡಲಾಗಿದೆ. ಓಡಿಸ್ಸಾದಲ್ಲಿ ಕೂಡ ಎರಡೂವರೆ ಲಕ್ಷ ಮತಗಳು ಹೆಚ್ಚಾಗಿವೆ ಎಂಬ ಮಾಹಿತಿ ಇದೆ. ಚುನಾವಣೆ ವೇಳೆ ಆರೂವರೆ ಗಂಟೆವರೆಗೆ ವೋಟಿಂಗ್ ಮಾಡಿಸಲಾಗುತ್ತದೆ. ಬಿಹಾರದ ಒಂದೇ ಮನೆಯಲ್ಲಿ 950 ಮತಗಳನ್ನು ಜಾಸ್ತಿ ಮಾಡಿದ್ದಾರೆ. ಆದ್ದರಿಂದ ಮತ್ತೆ ಬ್ಯಾಲೆಟ್ ಸಿಸ್ಟಮ್ ಗೆ ಹೋಗುವುದು ಒಳ್ಳೆಯದು ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬ್ಯಾಲೆಟ್ ಪೇಪರ್ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದರು.
ಬಿಹಾರದಲ್ಲಿ ವಿಶೇಷ ತೀವ್ರ ಪರಿಷ್ಕರಣೆ(ಎಸ್ ಐಆರ್) ತಂದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ರೊಹಿಂಗ್ಯಾಗಳು ಇದ್ದಾರೇನೋ ಎಂದು ತಿಳಿದುಕೊಂಡಿದ್ದಾರೆ. ಯಾವಾಗ ಚುನಾವಣೆ ಬರುತ್ತದೆಯೋ ಆಗ ಬಾಂಗ್ಲಾ ಮತ್ತು ಪಾಕಿಸ್ತಾನಕ್ಕೆ ಇವರು ಬೈಯುತ್ತಾರೆ. ಬಾಂಗ್ಲಾದೇಶದ ಮತ್ತು ರೋಹಿಂಗ್ಯಾಗಳು 2004 ರಿಂದ 2024ರ ವರೆಗೆ 72 ಸಾವಿರ ಜನರನ್ನು ಗುರುತಿಸಿ ಹೊರ ಕಳುಹಿಸಲಾಗಿದೆ. ಬಿಜೆಪಿಯವರು ಕಳೆದ 10 ವರ್ಷಗಳಲ್ಲಿ ಎಂಟು ಸಾವಿರ ಜನರನ್ನು ಹೊರಗಡೆ ಕಳುಹಿಸಿಲ್ಲ. ಈ ಬಗ್ಗೆ ಚರ್ಚೆ ಆಗಬೇಕು ಎಂದರು.
ಇದೊಂದು ಬರೀ ನಾಟಕ, ಚುನಾವಣೆ ಗೆಲ್ಲೋಕೆ ಒಂದು ಮಷಿನರಿ ಮಾಡೋದನ್ನು ಬಿಟ್ಟರೆ ಬೇರೆ ಏನೂ ಇಲ್ಲ. ಇವರಿಗೆ ದೇಶದ ಪ್ರಗತಿ ಬಗ್ಗೆ ಚಿಂತನೆ ಇಲ್ಲ. ಜಿಎಸ್ ಟಿ ಟ್ಯಾರಿಫ್ ಮಾಡಿದ್ದು ಇವರೇ. ಹಿಂದೆ ರಾಹುಲ್ ಗಾಂಧಿ ಗಬ್ಬರ್ ಸಿಂಗ್ ಟ್ಯಾಕ್ಸ್ ಹಾಕಬಾರದು ಎಂದಿದ್ದರು. ಶೇ. 18 ರಷ್ಟು ಟ್ಯಾಕ್ಸ್ ಹಾಕಬಾರದು ಎಂದಾಗ ಬಿಜೆಪಿಯವರು ನಕ್ಕಿದ್ದರು. ಮುಗಿಬಿದ್ದು ಇವನಿಗೆ ಏನೂ ಗೊತ್ತಿಲ್ಲ ಎಂದಿದ್ದರು. ಈಗ ರಾಹುಲ್ ಗಾಂಧಿ ಹೇಳಿದಂತೆಯೇ ತಾವು ಬುದ್ಧಿವಂತರಂತೆ ಮಾತನಾಡುತ್ತಿದ್ದಾರೆ. ಬಿಜೆಪಿಯಿಂದ ಈಗೇನು ವೋಟ್ ಕಳ್ಳತನ ನಡೆಯುತ್ತಿದೆಯೋ ಅದಕ್ಕೊಂದು ಅಂತ್ಯ ಬರುತ್ತದೆ. ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC