ಮೈಸೂರು : ಈ ಬಾರಿ ನಾಡಹಬ್ಬ ದಸರಾದಲ್ಲಿ ಅತ್ಯಂತ ಕಿರಿಯ ಹೆಣ್ಣಾನೆಯಾದ ಹೇಮಾವತಿ (11) ಭಾಗವಹಿಸಲಿದ್ದಾಳೆ.
ಜಂಬೂಸವಾರಿಯ ದಿನ ಚಿನ್ನದ ಅಂಬಾರಿ ಹೊತ್ತು ಸಾಗುವ ಗಂಡು ಆನೆಗೆ ಹೆಣ್ಣು ಆನೆಗಳು ಸಾಥ್ ನೀಡುತ್ತವೆ.; ಈ ಮೂಲಕ ಆನೆಗಳು ಚಿನ್ನದ ಅಂಬಾರಿ ಹೊತ್ತು ಸಾಗಲು ಪ್ರಮುಖ ಪಾತ್ರ ವಹಿಸುತ್ತವೆ.
ಈ ಹೆಣ್ಣು ಆನೆಗಳು ಗಂಡು ಆನೆಗಳ ಜೊತೆಯಲ್ಲಿ ತಾಲೀಮು ಮಾಡುವುದರಿಂದ ಗಂಡು ಆನೆಗಳು ಗಾಬರಿಯಾಗದಂತೆ ಸರಾಗವಾಗಿ ಸಾಗಲು ಅನುವು ಮಾಡಿಕೊಡುತ್ತವೆ.
ಗಜಪಡೆಯ ಭಾರ ಹೊರುವ ತಾಲೀಮಿನಲ್ಲಿ ಅಭಿಮನ್ಯು ಜೊತೆ ಹೇಮಾವತಿ ಆನೆ ಭಾಗವಹಿಸಿದೆ. ಈ ಆನೆ ಭವಿಷ್ಯದಲ್ಲಿ ಜಂಬೂಸವಾರಿಯಲ್ಲಿ ಕುಮ್ಕಿ ಆನೆಯಾಗಿ ಬಹಳ ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದೆ ಹಾಗೂ ಹೆಣ್ಣು ಆನೆಗಳ ಕೊರತೆ ನಿಭಾಯಿಸಲಿದೆ ಎಂಬ ನಿಟ್ಟಿನಲ್ಲಿ ಅರಣ್ಯ ಇಲಾಖೆಯವರು ಇದನ್ನು ಕರೆಸಿದ್ದಾರೆ.
2014ರಲ್ಲಿ ಕೊಡಗಿನ ಆನೆ ಶಿಬಿರದಲ್ಲಿ ಜನಿಸಿರುವ ಈ ಹೇಮಾವತಿ ಆನೆ, ಶಿಬಿರದಲ್ಲಿ ಮಾವುತರು ಹಾಗೂ ಕಾವಾಡಿಗಳ ತರಬೇತಿಯಿಂದ ಶಿಸ್ತು ಮತ್ತು ಶಾಂತ ಸ್ವಭಾವದಿಂದ ಗಮನ ಸೆಳೆದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC