- ಹಾದನೂರು ಚಂದ್ರ
ಸರಗೂರು: ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ನೆರವಾಗುವ ಸಲುವಾಗಿ ತಮ್ಮ ಸ್ವಂತ ಹಣ ಹಾಗೂ ಪ್ರದೇಶವನ್ನು ಬಡಗಿಯೊಬ್ಬರು ತಮ್ಮ ಸುತ್ತಲಿನ ಹತ್ತಾರು ಹಳ್ಳಿಗಳ ಶಾಲೆಗಳಿಗೆ ಮಂದ ಬೆಂಚು, ಕುರ್ಚಿ ಪೂರೈಸುವ ಮೂಲಕ ಮಾದರಿಯಾಗಿದ್ದಾರೆ.
ನಂಜನಗೂಡಿನ ಹೆಡಿಯಾಲ ಗ್ರಾಪಂ ವ್ಯಾಪ್ತಿಯ ಮಡುವಿನಹಳ್ಳಿ ಗ್ರಾಮದ ಮಂಟೇಲಿಂಗಾಚಾರ್ ತಾವು ಕಲಿತಿರುವ ಮರಗೇಲಸದ ಕಸುಬಿನ ಮೂಲಕ ಜೀವನ ನಿರ್ವಹಣೆ ಮಾಡುತ್ತಿದ್ದು, ಇದರೊಂದಿಗೆ ಕಳೆದ 8 ವರ್ಷಗಳಿಂದ ಸರಕಾರಿ ಶಾಲೆಗಳಿಗೆ ಅವಶ್ಯಕ ಪರಿಕರಗಳನ್ನು ಉಚಿತವಾಗಿ ನೀಡುವ ಮೂಲಕ 9 ನೇ ವರ್ಷಕ್ಕೆ ಕಾಲಿಟ್ಟಿದ್ದು, ಸಮಾಜದ ಗಮನ ಸೆಳೆದಿದ್ದಾರೆ.
8 ವರ್ಷಗಳ ಹಿಂದೆ ಕುಡಿತದ ಚಟ ಬಿಟ್ಟು, ಕುಡಿತದ ಹಣವನ್ನು ಸಂಗ್ರಹಣೆ ಮಾಡಿ ಹಿಂದುಳಿದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಪೀಠೋಪಕರಣಗಳನ್ನು ಮಾಡಿ ಕೊಡುತ್ತಾ ಬರುವ ಕುಶಲಕಾರ್ಮಿ 8 ವರ್ಷಗಳಿಂದ ಕುಡಿತದ ಚಟ ಬಿಟ್ಟು ಕುಡಿತದ ಹಣವನ್ನು ಸಂಗ್ರಹಣೆ ಮಾಡಿಕೊಂಡು ಹಿಂದುಳಿದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಪೀಠೋಪಕರಣಗಳನ್ನು ಮಾಡಿ ಕೊಡುತ್ತಾ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಬಡತನದಲ್ಲಿ ಇದ್ದರೂ, ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದರೂ, ತನ್ನೆಲ್ಲ ಕಷ್ಟಗಳನ್ನು ಬದಿಗೊತ್ತಿ, ಬಡಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಮಾಜ ಸೇವೆ ಮಾಡಿಕೊಂಡು ಬರುತ್ತಿದ್ದಾರೆ ಮಂಟೇಲಿಂಗಾಚಾರ್. ತಾನು ಕುಡಿತದ ಚಟದಿಂದ ಬಳಲುತ್ತಿದ್ದ ಸಂದರ್ಭದಲ್ಲಿ ಅದನ್ನು ಅರಿತುಕೊಂಡು ಬದಲಾಗಿ ದುಶ್ಚಟದಿಂದ ಮುಕ್ತನಾಗಿ, ಸಮಾಜಕ್ಕೆ ಅಳಿಲು ಸೇವೆ ಸಲ್ಲಿಸುತ್ತಿದ್ದೇನೆ ಎಂದು ಅವರು ಹೇಳಿದರು.

ನಲಿ ಕಲಿ ಟೇಬಲ್ ಗಳು, ಡೆಸ್ಕ್, ಮಕ್ಕಳಿಗೆ ಅನುಕೂಲ ವಾಗುವ ಬರವಣಿಗೆ, ಟೇಬಲ್ ಗಳು, ನೋಟ್ ಬುಕ್, ಪೆನ್ನು, ಪೆನ್ಸಿಲ್ ಹಾಗೂ ಅವಶ್ಯಕತೆ ಇರುವ ಸರ್ಕಾರಿ ಶಾಲೆಯ ಜಾಗದಲ್ಲಿ, ತೆಂಗಿನ ಗಿಡ ನೆಡಿಸುವುದು. ರಾಷ್ಟ್ರ ನಾಯಕರ ಭಾವಚಿತ್ರಗಳನ್ನು ನೀಡುತ್ತಾ ಬಂದಿದ್ದಾರೆ ಮಂಟೇಲಿಂಗಾಚಾರ್.
ಹತ್ತಕ್ಕೂ ಹೆಚ್ಚು ಶಾಲೆಗಳಿಗೆ ನೆರವು: ಡಸ್ಕ್, ನಲಿ ಕಲಿ, ಟೇಬಲ್ ಕೊಟ್ಟಿರುವ ಊರುಗಳು ಹೊಸ ವೀಡು ಹುಂಡಿ, ಹೊಸವೀಡು, ಮಹಾದೇವನಗರ, ವಡೆಯನಪುರ, ಪಾರ್ವತಿ ಪುರ, ಮಲಕುಂಡಿ, ಎಂ ಕೊಂಗಹಳ್ಳಿ, ಹಾದನೂರು, ಬಳ್ಳೂರು ಹುಂಡಿ, ಸರಕಾರಿ ಪ್ರಾಥಮಿಕ ಶಾಲೆಗಳಿಗೆ ವಿದ್ಯಾರ್ಥಿಗಳು ಕೂರಲು ಅವಶ್ಯಕವಾದ ಟೇಬಲ್, ಶಿಕ್ಷಕರಿಗೆ ಚೇರ್, ಪುಸ್ತಕಗಳನ್ನು ಜೋಡಿಸುವ ಬೀರು, ನಲಿಕಲಿ ಕೊಠಡಿಯಲ್ಲಿ ಮಕ್ಕಳ ಕಲಿಕೆಗೆ ನೆರವಾಗುವಂತಹ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡುತ್ತಾ ಬಂದಿದ್ದಾರೆ.
ಪರಿಕರಗಳು ಸೇರಿದಂತೆ ಶಾಲೆಗೆ ಅವಶ್ಯಕವಾದ ಮರದ ಸಾಮಗ್ರಿಗಳನ್ನು ತಮ್ಮ ಸ್ವಂತ ಹಣದಿಂದ ವೆಚ್ಚ ಮಾಡಿ ಕೊಡುಗೆಯಾಗಿ ನೀಡುತ್ತಿದ್ದಾರೆ. ತಮ್ಮೂರು ಮಡುವಿನಹಳ್ಳಿ ಸೇರಿದಂತೆ ಸುತ್ತಲಿನ ಈರೇಗೌಡನಹುಂಡಿ, ಎಂ.ಕೊಂಗಳ್ಳಿ ಕೊತ್ತನಹಳ್ಳಿ, ಹೆಡಿಯಾಲ, ದುಗ್ಗಹಳ್ಳಿ ಸೇರಿದಂತೆ ಹತ್ತಕ್ಕೂ ಹೆಚ್ಚು ಹಳ್ಳಿಗಳಲ್ಲಿರುವ ಶಾಲೆಗಳಿಗೆ ನಾನಾ ಬಗೆಯ ಪೀಠೋಪಕರಣ ನೀಡಿದ್ದಾರೆ.
ಶಿಕ್ಷಕರ ಸಾರ್ಥಕ ಸೇವೆಯನ್ನು ಸ್ಮರಿಸುವ ಫಲಕವನ್ನು ಕೊಡುಗೆಯಾಗಿ ನೀಡುತ್ತಿರುವುದು. ಇದರೊಂದಿಗೆ ಶಾಲೆಗಳ ಆವರಣದಲ್ಲಿ ಕೈತೋಟ ಅಭಿವೃದ್ಧಿಪಡಿಸಲು ಅವಶ್ಯಕವಾಗಿ ಗಿಡಗಳನ್ನು ಒದಗಿಸುವ ಜತೆಗೆ 10ಕ್ಕಿಂತ ಕಡಿಮೆ ಮಕ್ಕಳು ವ್ಯಾಸಂಗ ಮಾಡುತ್ತಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಿಸುವ ಸಲುವಾಗಿ ಬ್ಯಾಗ್, ನೋಟ್ ಬುಕ್ ಸೇರಿದಂತೆ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದಂತಹ ಕಾರ್ಯಕ್ರಮಗಳಂದು ಮಕ್ಕಳಿಗೆ ವಿಶೇಷ ಸಮವಸ್ತ್ರಗಳನ್ನು ಉಚಿತವಾಗಿ ವಿತರಿಸಿದ್ದಾರೆ.
62 ಶಾಲೆಗಳಿಗೆ ವಿಸ್ತರಿಸುವ ಗುರಿ: ತಮ್ಮ ಸಂಪಾದನೆಯಲ್ಲಿ ವಾರ್ಷಿಕ 50 ಸಾವಿರ ರೂ.ಗಳನ್ನು ಶಾಲೆಗಳಲ್ಲಿ ಪರಿಕರ ನೀಡಲು ಬಳಸುತ್ತಿರುವ ಮಂಟೇಲಿಂಗಾಚಾರ್. ಮುಂಬರುವ ದಿನಗಳಲ್ಲಿ ಪ್ರಮಾಣವನ್ನು ದ್ವಿಗುಣಗೊಳಿಸುವ ಮೂಲಕ ಸರಕಾರಿ ಶಾಲೆಗಳಿಗೆ ಕಾಲಮಿತಿಯಲ್ಲಿ ಅವಶ್ಯಕ ಪರಿಕರ ನೀಡುವ ಗುರಿ ಹೊಂದಿದ್ದಾರೆ.
”90ರ ದಶಕದಲ್ಲಿ ಹಲವು ಮಂದಿ ನೀಡಿದ ನೆರವಿನಿಂದ ನಾನು ಪಿಯುಸಿವರೆಗೆ ವ್ಯಾಸಂಗ ಮಾಡಲು ಸಾಧ್ಯವಾಯಿತು. ಓದುವ ಅನಿವಾರ್ಯತೆಯಿಂದ ಓದು ಮುಂದುವರಿಸಲು ಆಸಕ್ತಿಯಿದ್ದರೂ ಕುಟುಂಬ ನಿರ್ವಹಣೆಯ ಸಾಧ್ಯವಾಗಲಿಲ್ಲ. ಈಗ ನನ್ನ ಕಿರಿ ಮಗ ಪದವಿ, ವ್ಯಾಸಂಗ ಮಾಡುತ್ತಿದ್ದು, ಹಿರಿಯ ಮಗ ನನ್ನೊಂದಿಗೆ ಮರಗೆಲಸದಲ್ಲಿ ಭಾಗಿಯಾಗಿದ್ದಾನೆ. ಕುಟುಂಬದ ಸದಸ್ಯರ ಪ್ರೋತ್ಸಾಹದಿಂದ ನನ್ನ ಕೈಲಾದ ನೆರವು ನೀಡುತ್ತಿದ್ದೇನೆ.” ಎಂದು ಮಂಟೇಲಿಂಗಾಚಾರ್ ಧನ್ಯತೆಯ ಮಾತುಗಳನ್ನಾಡುತ್ತಾರೆ.
ಯಾವುದೇ ಜಿಲ್ಲೆ ಮತ್ತು ತಾಲೂಕು ಮಟ್ಟದ ಗ್ರಾಮಗಳಿಗೆ ಅಲಿಲು ಸೇವೆ ಮಾಡಲು ನಿಸ್ವಾರ್ಥ ಮನಸ್ಸಿನಿಂದ ಇರುವ ವ್ಯಕ್ತಿಗಳು ಹೆಚ್ಚಿನ ಮಾಹಿತಿಗಾಗಿ ಮಂಟೇಲಿಂಗಾಚಾರ್ ರವರ ಸಂಪರ್ಕ ನಂಬರ್ 9108022097 ಗೆ ಕರೆ ಮಾಡಿ ಸಂಪರ್ಕ ಮಾಡಬಹುದು.
ನಾನು ಬಡತನದಲ್ಲಿ ಹುಟ್ಟಿ ಬೆಳೆದು ವೃತ್ತಿ ಜೀವನ ಮರಗೆಲಸ ಮಾಡಿಕೊಂಡು ಬರುತ್ತಿದ್ದು, ದುಶ್ಚಟದಿಂದ ದಾಸನಾಗಿದ್ದು, ಅದರಲ್ಲಿ ನನಗೆ ಹೃದಯಾಘಾತದಿಂದ ನಾನು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡೆ, ನಂತರ ನನಗೆ ಕುಡಿತ ಹಣದಿಂದ ನಾನು ಯಾಕೆ ಸರ್ಕಾರಿ ಶಾಲೆಗಳಿಗೆ ಪೀಠೋಪಕರಣಗಳನ್ನು ಹಾಗೂ ಇತರೆ ವಸ್ತುಗಳನ್ನು ನೀಡಬಾರದು ಕಲ್ಪಿಸಿಕೊಂಡು. ಅದರಂತೆ ನಮ್ಮ ಗ್ರಾಮದಿಂದ ಅಕ್ಕಪಕ್ಕದ ಗ್ರಾಮದ ಶಾಲೆಗಳಿಗೆ ನನ್ನ ಕೈಯಲ್ಲಾದ ಹಣ ಮತ್ತು ವಸ್ತುಗಳನ್ನು ನೀಡುತ್ತಾ ಬಂದಿದ್ದೇನೆ. ಇನ್ನೂ ಮುಂದೆಯೂ ಸಮಾಜ ಸೇವೆ ಮುಂದುವರಿಸುತ್ತೇನೆ.
— ಮಂಟೇಲಿಂಗಾಚಾರ್ ಮಡುವಿನಹಳ್ಳಿ, ಸಮಾಜ ಸೇವಕ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC