nammatumakuru

    Subscribe to Updates

    Get the latest creative news from FooBar about art, design and business.

    What's Hot

    ಒಳ ಮೀಸಲಾತಿ ಜಾರಿಗೆ ಆಗ್ರಹ: ಮಾದರ ಮಹಾಸಭಾವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ

    March 10, 2026

    ಔರಾದ್: ಶಿವಾಜಿ ಮಹಾರಾಜರ ಮೂರ್ತಿ ನಿರ್ಮಾಣಕ್ಕೆ ಭೀಮಸೇನರಾವ್ ಸಿಂದೆ ₹2.50 ಲಕ್ಷ ಆರ್ಥಿಕ ನೆರವು

    March 10, 2026

    ತುಮಕೂರು: ರೈತರ ಭೂಸ್ವಾಧೀನ ಕೈ ಬಿಡುವಂತೆ ಒತ್ತಾಯಿಸಿ ಪ್ರತಿಭಟನೆ

    March 10, 2026
    Facebook Twitter Instagram
    ಟ್ರೆಂಡಿಂಗ್
    • ಒಳ ಮೀಸಲಾತಿ ಜಾರಿಗೆ ಆಗ್ರಹ: ಮಾದರ ಮಹಾಸಭಾವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ
    • ಔರಾದ್: ಶಿವಾಜಿ ಮಹಾರಾಜರ ಮೂರ್ತಿ ನಿರ್ಮಾಣಕ್ಕೆ ಭೀಮಸೇನರಾವ್ ಸಿಂದೆ ₹2.50 ಲಕ್ಷ ಆರ್ಥಿಕ ನೆರವು
    • ತುಮಕೂರು: ರೈತರ ಭೂಸ್ವಾಧೀನ ಕೈ ಬಿಡುವಂತೆ ಒತ್ತಾಯಿಸಿ ಪ್ರತಿಭಟನೆ
    • ಮಧುಗಿರಿ: ಅಪ್ರಾಪ್ತೆಯ ಮದುವೆಗೆ ಬ್ರೇಕ್: ಪೊಲೀಸರು ಬರುವಷ್ಟರಲ್ಲಿ ವಧು-ವರ ಎಸ್ಕೇಪ್!
    • ಮಹಿಳೆಯರಿಂದಲೇ ಮಹಿಳೆಯರ ಮೇಲೆ ನಡೆಯುವ ಶೋಷಣೆಗಳು ಮೊದಲು ನಿಲ್ಲಲಿ: ತಹಶೀಲ್ದಾರ್ ಮಮತಾ ಎಂ.
    • ಕೊರಟಗೆರೆ: ಮೂಢನಂಬಿಕೆಯಿಂದಾಗಿ ಬಳಕೆಯಾಗದೆ ಪಾಳುಬಿದ್ದ ಬಾಲಿಕಾ ವಿದ್ಯಾರ್ಥಿನಿಲಯ
    • ಕಣ್ಣಿನ ಶಸ್ತ್ರಚಿಕಿತ್ಸೆಗೆ ಲಂಚ ಕೇಳಿದ್ದ ತುಮಕೂರು ಜಿಲ್ಲಾ ಆಸ್ಪತ್ರೆ ವೈದ್ಯೆ ಲೋಕಾಯುಕ್ತ ಬಲೆಗೆ
    • ನಡೆಯಲಿಲ್ಲ ಪವಾಡ!: ಮಲ್ಲಿಕಾರ್ಜುನ ಮುತ್ಯಾಗೆ ಬಿಗ್ ಶಾಕ್ | ಜಾಮೀನು ಅರ್ಜಿ ವಜಾ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕುಡಿತ ಬಿಟ್ಟರು, ಹತ್ತಾರು ಶಾಲೆಗಳಿಗೆ ಬೆಳಕಾದರು: ಕುಶಲಕರ್ಮಿ ಸಮಾಜ ಸೇವಕ ಮಂಟೇಲಿಂಗಾಚಾರ್
    ಜಿಲ್ಲಾ ಸುದ್ದಿ September 16, 2025

    ಕುಡಿತ ಬಿಟ್ಟರು, ಹತ್ತಾರು ಶಾಲೆಗಳಿಗೆ ಬೆಳಕಾದರು: ಕುಶಲಕರ್ಮಿ ಸಮಾಜ ಸೇವಕ ಮಂಟೇಲಿಂಗಾಚಾರ್

    By adminSeptember 16, 2025No Comments3 Mins Read
    mantelingachar
    • ಹಾದನೂರು ಚಂದ್ರ

    ಸರಗೂರು: ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ನೆರವಾಗುವ ಸಲುವಾಗಿ ತಮ್ಮ ಸ್ವಂತ ಹಣ ಹಾಗೂ ಪ್ರದೇಶವನ್ನು ಬಡಗಿಯೊಬ್ಬರು ತಮ್ಮ ಸುತ್ತಲಿನ ಹತ್ತಾರು ಹಳ್ಳಿಗಳ ಶಾಲೆಗಳಿಗೆ ಮಂದ ಬೆಂಚು, ಕುರ್ಚಿ ಪೂರೈಸುವ ಮೂಲಕ ಮಾದರಿಯಾಗಿದ್ದಾರೆ.

    ನಂಜನಗೂಡಿನ ಹೆಡಿಯಾಲ ಗ್ರಾಪಂ ವ್ಯಾಪ್ತಿಯ ಮಡುವಿನಹಳ್ಳಿ ಗ್ರಾಮದ ಮಂಟೇಲಿಂಗಾಚಾರ್  ತಾವು ಕಲಿತಿರುವ ಮರಗೇಲಸದ ಕಸುಬಿನ ಮೂಲಕ ಜೀವನ ನಿರ್ವಹಣೆ ಮಾಡುತ್ತಿದ್ದು, ಇದರೊಂದಿಗೆ ಕಳೆದ 8 ವರ್ಷಗಳಿಂದ ಸರಕಾರಿ ಶಾಲೆಗಳಿಗೆ ಅವಶ್ಯಕ ಪರಿಕರಗಳನ್ನು ಉಚಿತವಾಗಿ ನೀಡುವ ಮೂಲಕ 9 ನೇ ವರ್ಷಕ್ಕೆ ಕಾಲಿಟ್ಟಿದ್ದು, ಸಮಾಜದ ಗಮನ ಸೆಳೆದಿದ್ದಾರೆ.


    Provided by
    Provided by

    8 ವರ್ಷಗಳ ಹಿಂದೆ ಕುಡಿತದ ಚಟ ಬಿಟ್ಟು, ಕುಡಿತದ ಹಣವನ್ನು ಸಂಗ್ರಹಣೆ ಮಾಡಿ ಹಿಂದುಳಿದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಪೀಠೋಪಕರಣಗಳನ್ನು ಮಾಡಿ ಕೊಡುತ್ತಾ ಬರುವ ಕುಶಲಕಾರ್ಮಿ 8 ವರ್ಷಗಳಿಂದ ಕುಡಿತದ ಚಟ ಬಿಟ್ಟು ಕುಡಿತದ ಹಣವನ್ನು ಸಂಗ್ರಹಣೆ ಮಾಡಿಕೊಂಡು ಹಿಂದುಳಿದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ  ಪೀಠೋಪಕರಣಗಳನ್ನು ಮಾಡಿ ಕೊಡುತ್ತಾ ಸಮಾಜಕ್ಕೆ ಮಾದರಿಯಾಗಿದ್ದಾರೆ.

    ಬಡತನದಲ್ಲಿ ಇದ್ದರೂ,  ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದರೂ, ತನ್ನೆಲ್ಲ ಕಷ್ಟಗಳನ್ನು ಬದಿಗೊತ್ತಿ, ಬಡಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಮಾಜ ಸೇವೆ ಮಾಡಿಕೊಂಡು ಬರುತ್ತಿದ್ದಾರೆ ಮಂಟೇಲಿಂಗಾಚಾರ್.  ತಾನು ಕುಡಿತದ ಚಟದಿಂದ ಬಳಲುತ್ತಿದ್ದ ಸಂದರ್ಭದಲ್ಲಿ ಅದನ್ನು ಅರಿತುಕೊಂಡು ಬದಲಾಗಿ ದುಶ್ಚಟದಿಂದ ಮುಕ್ತನಾಗಿ, ಸಮಾಜಕ್ಕೆ ಅಳಿಲು ಸೇವೆ ಸಲ್ಲಿಸುತ್ತಿದ್ದೇನೆ ಎಂದು ಅವರು ಹೇಳಿದರು.

    ಮಂಟೇಲಿಂಗಾಚಾರ್

    ನಲಿ ಕಲಿ ಟೇಬಲ್ ಗಳು, ಡೆಸ್ಕ್, ಮಕ್ಕಳಿಗೆ ಅನುಕೂಲ ವಾಗುವ ಬರವಣಿಗೆ, ಟೇಬಲ್ ಗಳು, ನೋಟ್ ಬುಕ್, ಪೆನ್ನು, ಪೆನ್ಸಿಲ್ ಹಾಗೂ ಅವಶ್ಯಕತೆ ಇರುವ ಸರ್ಕಾರಿ ಶಾಲೆಯ ಜಾಗದಲ್ಲಿ, ತೆಂಗಿನ ಗಿಡ ನೆಡಿಸುವುದು. ರಾಷ್ಟ್ರ ನಾಯಕರ ಭಾವಚಿತ್ರಗಳನ್ನು ನೀಡುತ್ತಾ ಬಂದಿದ್ದಾರೆ ಮಂಟೇಲಿಂಗಾಚಾರ್.

    ಹತ್ತಕ್ಕೂ ಹೆಚ್ಚು ಶಾಲೆಗಳಿಗೆ ನೆರವು: ಡಸ್ಕ್, ನಲಿ ಕಲಿ, ಟೇಬಲ್ ಕೊಟ್ಟಿರುವ ಊರುಗಳು ಹೊಸ ವೀಡು ಹುಂಡಿ, ಹೊಸವೀಡು, ಮಹಾದೇವನಗರ, ವಡೆಯನಪುರ, ಪಾರ್ವತಿ ಪುರ, ಮಲಕುಂಡಿ, ಎಂ ಕೊಂಗಹಳ್ಳಿ, ಹಾದನೂರು, ಬಳ್ಳೂರು ಹುಂಡಿ,  ಸರಕಾರಿ ಪ್ರಾಥಮಿಕ ಶಾಲೆಗಳಿಗೆ ವಿದ್ಯಾರ್ಥಿಗಳು ಕೂರಲು ಅವಶ್ಯಕವಾದ ಟೇಬಲ್, ಶಿಕ್ಷಕರಿಗೆ ಚೇರ್, ಪುಸ್ತಕಗಳನ್ನು ಜೋಡಿಸುವ ಬೀರು, ನಲಿಕಲಿ ಕೊಠಡಿಯಲ್ಲಿ ಮಕ್ಕಳ ಕಲಿಕೆಗೆ ನೆರವಾಗುವಂತಹ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡುತ್ತಾ ಬಂದಿದ್ದಾರೆ.

    ಪರಿಕರಗಳು ಸೇರಿದಂತೆ ಶಾಲೆಗೆ ಅವಶ್ಯಕವಾದ ಮರದ ಸಾಮಗ್ರಿಗಳನ್ನು ತಮ್ಮ ಸ್ವಂತ ಹಣದಿಂದ ವೆಚ್ಚ ಮಾಡಿ ಕೊಡುಗೆಯಾಗಿ ನೀಡುತ್ತಿದ್ದಾರೆ. ತಮ್ಮೂರು ಮಡುವಿನಹಳ್ಳಿ ಸೇರಿದಂತೆ ಸುತ್ತಲಿನ ಈರೇಗೌಡನಹುಂಡಿ, ಎಂ.ಕೊಂಗಳ್ಳಿ ಕೊತ್ತನಹಳ್ಳಿ, ಹೆಡಿಯಾಲ, ದುಗ್ಗಹಳ್ಳಿ ಸೇರಿದಂತೆ ಹತ್ತಕ್ಕೂ ಹೆಚ್ಚು ಹಳ್ಳಿಗಳಲ್ಲಿರುವ ಶಾಲೆಗಳಿಗೆ ನಾನಾ ಬಗೆಯ ಪೀಠೋಪಕರಣ ನೀಡಿದ್ದಾರೆ.

    ಶಿಕ್ಷಕರ ಸಾರ್ಥಕ ಸೇವೆಯನ್ನು ಸ್ಮರಿಸುವ ಫಲಕವನ್ನು ಕೊಡುಗೆಯಾಗಿ ನೀಡುತ್ತಿರುವುದು. ಇದರೊಂದಿಗೆ ಶಾಲೆಗಳ ಆವರಣದಲ್ಲಿ ಕೈತೋಟ ಅಭಿವೃದ್ಧಿಪಡಿಸಲು ಅವಶ್ಯಕವಾಗಿ ಗಿಡಗಳನ್ನು  ಒದಗಿಸುವ ಜತೆಗೆ 10ಕ್ಕಿಂತ ಕಡಿಮೆ ಮಕ್ಕಳು ವ್ಯಾಸಂಗ ಮಾಡುತ್ತಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಿಸುವ ಸಲುವಾಗಿ ಬ್ಯಾಗ್, ನೋಟ್‌ ಬುಕ್ ಸೇರಿದಂತೆ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದಂತಹ ಕಾರ್ಯಕ್ರಮಗಳಂದು ಮಕ್ಕಳಿಗೆ ವಿಶೇಷ ಸಮವಸ್ತ್ರಗಳನ್ನು ಉಚಿತವಾಗಿ ವಿತರಿಸಿದ್ದಾರೆ.

    62 ಶಾಲೆಗಳಿಗೆ ವಿಸ್ತರಿಸುವ ಗುರಿ: ತಮ್ಮ ಸಂಪಾದನೆಯಲ್ಲಿ ವಾರ್ಷಿಕ 50 ಸಾವಿರ ರೂ.ಗಳನ್ನು ಶಾಲೆಗಳಲ್ಲಿ ಪರಿಕರ ನೀಡಲು ಬಳಸುತ್ತಿರುವ ಮಂಟೇಲಿಂಗಾಚಾರ್.  ಮುಂಬರುವ ದಿನಗಳಲ್ಲಿ ಪ್ರಮಾಣವನ್ನು ದ್ವಿಗುಣಗೊಳಿಸುವ ಮೂಲಕ ಸರಕಾರಿ ಶಾಲೆಗಳಿಗೆ ಕಾಲಮಿತಿಯಲ್ಲಿ ಅವಶ್ಯಕ ಪರಿಕರ ನೀಡುವ ಗುರಿ ಹೊಂದಿದ್ದಾರೆ.

    ”90ರ ದಶಕದಲ್ಲಿ ಹಲವು ಮಂದಿ ನೀಡಿದ ನೆರವಿನಿಂದ ನಾನು ಪಿಯುಸಿವರೆಗೆ ವ್ಯಾಸಂಗ ಮಾಡಲು ಸಾಧ್ಯವಾಯಿತು. ಓದುವ ಅನಿವಾರ್ಯತೆಯಿಂದ ಓದು ಮುಂದುವರಿಸಲು ಆಸಕ್ತಿಯಿದ್ದರೂ ಕುಟುಂಬ ನಿರ್ವಹಣೆಯ ಸಾಧ್ಯವಾಗಲಿಲ್ಲ. ಈಗ ನನ್ನ ಕಿರಿ ಮಗ ಪದವಿ, ವ್ಯಾಸಂಗ ಮಾಡುತ್ತಿದ್ದು, ಹಿರಿಯ ಮಗ ನನ್ನೊಂದಿಗೆ ಮರಗೆಲಸದಲ್ಲಿ ಭಾಗಿಯಾಗಿದ್ದಾನೆ. ಕುಟುಂಬದ ಸದಸ್ಯರ ಪ್ರೋತ್ಸಾಹದಿಂದ ನನ್ನ ಕೈಲಾದ ನೆರವು ನೀಡುತ್ತಿದ್ದೇನೆ.” ಎಂದು ಮಂಟೇಲಿಂಗಾಚಾರ್ ಧನ್ಯತೆಯ ಮಾತುಗಳನ್ನಾಡುತ್ತಾರೆ.

    ಯಾವುದೇ ಜಿಲ್ಲೆ ಮತ್ತು ತಾಲೂಕು ಮಟ್ಟದ ಗ್ರಾಮಗಳಿಗೆ ಅಲಿಲು ಸೇವೆ ಮಾಡಲು ನಿಸ್ವಾರ್ಥ ಮನಸ್ಸಿನಿಂದ ಇರುವ ವ್ಯಕ್ತಿಗಳು ಹೆಚ್ಚಿನ ಮಾಹಿತಿಗಾಗಿ ಮಂಟೇಲಿಂಗಾಚಾರ್ ರವರ ಸಂಪರ್ಕ ನಂಬರ್ 9108022097 ಗೆ ಕರೆ ಮಾಡಿ ಸಂಪರ್ಕ ಮಾಡಬಹುದು.

    ನಾನು ಬಡತನದಲ್ಲಿ ಹುಟ್ಟಿ ಬೆಳೆದು ವೃತ್ತಿ ಜೀವನ ಮರಗೆಲಸ ಮಾಡಿಕೊಂಡು ಬರುತ್ತಿದ್ದು, ದುಶ್ಚಟದಿಂದ ದಾಸನಾಗಿದ್ದು, ಅದರಲ್ಲಿ ನನಗೆ ಹೃದಯಾಘಾತದಿಂದ ನಾನು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡೆ, ನಂತರ ನನಗೆ ಕುಡಿತ ಹಣದಿಂದ ನಾನು ಯಾಕೆ ಸರ್ಕಾರಿ ಶಾಲೆಗಳಿಗೆ ಪೀಠೋಪಕರಣಗಳನ್ನು ಹಾಗೂ ಇತರೆ ವಸ್ತುಗಳನ್ನು ನೀಡಬಾರದು ಕಲ್ಪಿಸಿಕೊಂಡು. ಅದರಂತೆ ನಮ್ಮ ಗ್ರಾಮದಿಂದ ಅಕ್ಕಪಕ್ಕದ ಗ್ರಾಮದ ಶಾಲೆಗಳಿಗೆ ನನ್ನ ಕೈಯಲ್ಲಾದ ಹಣ ಮತ್ತು ವಸ್ತುಗಳನ್ನು ನೀಡುತ್ತಾ ಬಂದಿದ್ದೇನೆ. ಇನ್ನೂ ಮುಂದೆಯೂ ಸಮಾಜ ಸೇವೆ ಮುಂದುವರಿಸುತ್ತೇನೆ.

    — ಮಂಟೇಲಿಂಗಾಚಾರ್ ಮಡುವಿನಹಳ್ಳಿ, ಸಮಾಜ ಸೇವಕ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಔರಾದ್: ಶಿವಾಜಿ ಮಹಾರಾಜರ ಮೂರ್ತಿ ನಿರ್ಮಾಣಕ್ಕೆ ಭೀಮಸೇನರಾವ್ ಸಿಂದೆ ₹2.50 ಲಕ್ಷ ಆರ್ಥಿಕ ನೆರವು

    March 10, 2026

    ನಡೆಯಲಿಲ್ಲ ಪವಾಡ!: ಮಲ್ಲಿಕಾರ್ಜುನ ಮುತ್ಯಾಗೆ ಬಿಗ್ ಶಾಕ್ | ಜಾಮೀನು ಅರ್ಜಿ ವಜಾ

    March 9, 2026

    ಮಗುವಿನ ಕತ್ತು ಹಿಸುಕಿ ದಂಪತಿ ಆತ್ಮಹತ್ಯೆ; ಪವಾಡಸದೃಶ ರೀತಿಯಲ್ಲಿ ಬದುಕುಳಿದ 2 ವರ್ಷದ ಕಂದಮ್ಮ!

    March 9, 2026

    Comments are closed.

    Our Picks

    ಇಸ್ರೇಲ್–ಇರಾನ್ ಸಂಘರ್ಷ: ದುಬೈನಲ್ಲಿರುವ ಕನ್ನಡಿಗರ ನೆರವಿಗೆ ಸಹಾಯವಾಣಿ ಆರಂಭ

    March 3, 2026

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ಒಳ ಮೀಸಲಾತಿ ಜಾರಿಗೆ ಆಗ್ರಹ: ಮಾದರ ಮಹಾಸಭಾವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ

    March 10, 2026

    ಕೊರಟಗೆರೆ: ಸುಪ್ರೀಂ ಕೋರ್ಟ್ ಆದೇಶವಿದ್ದರೂ ಒಳ ಮೀಸಲಾತಿ ಜಾರಿಗೊಳಿಸದೆ, ಹಳೆಯ ಪದ್ಧತಿಯಲ್ಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು…

    ಔರಾದ್: ಶಿವಾಜಿ ಮಹಾರಾಜರ ಮೂರ್ತಿ ನಿರ್ಮಾಣಕ್ಕೆ ಭೀಮಸೇನರಾವ್ ಸಿಂದೆ ₹2.50 ಲಕ್ಷ ಆರ್ಥಿಕ ನೆರವು

    March 10, 2026

    ತುಮಕೂರು: ರೈತರ ಭೂಸ್ವಾಧೀನ ಕೈ ಬಿಡುವಂತೆ ಒತ್ತಾಯಿಸಿ ಪ್ರತಿಭಟನೆ

    March 10, 2026

    ಮಧುಗಿರಿ: ಅಪ್ರಾಪ್ತೆಯ ಮದುವೆಗೆ ಬ್ರೇಕ್: ಪೊಲೀಸರು ಬರುವಷ್ಟರಲ್ಲಿ ವಧು-ವರ ಎಸ್ಕೇಪ್!

    March 10, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.