ಕುಣಿಗಲ್ : ಮಾರ್ಕೋನಹಳ್ಳಿ ಜಲಾಶಯದ ನೀರಿನಲ್ಲಿ ಕೊಚ್ಚಿ ಹೋಗಿದ್ದ ನಾಲ್ವರ ಪೈಕಿ ಬುಧವಾರ ಇಬ್ಬರ ಶವ ಪತ್ತೆಯಾಗಿವೆ. ಮತ್ತಿಬ್ಬರ ಪತ್ತೆಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಮುಂದುವರಿಸಿದ್ದಾರೆ.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಶಶಿಧರ್ ನೇತೃತ್ವದ ತಂಡ ಬುಧವಾರ ಸಂಜೆವರೆಗೂ ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಶೋಧ ನಡೆಸಿದ್ದು ನಿಫ್ರಾ (4) ಮತ್ತು ಶಬನಾ (44) ಎಂಬುವರ ಶವಗಳು ಪತ್ತೆಯಾಗಿವೆ. ಮೋಹಿಬ್ (11) ಮತ್ತು ತಬಸ್ಸಮ್ (46) ಇನ್ನೂ ಪತ್ತೆಯಾಗಿಲ್ಲ.
ಮಾರ್ಕೋನಹಳ್ಳಿ ಜಲಾಶಯಕ್ಕೆ ವಿಹಾರಕ್ಕೆ ಹೋಗಿದ್ದ ಕುಟುಂಬದ ಸದಸ್ಯರು ಬೆಟ್ಟಗೊಂಡನಹಳ್ಳಿ ಕಾಲುವೆಯಲ್ಲಿ ನೀರಿಗೆ ಇಳಿದಿದ್ದರು. ಹತ್ತು ಮಂದಿ ಕೊಚ್ಚಿಕೊಂಡು ಹೋಗಿದ್ದರು. ಆ ಪೈಕಿ ಮೂವರು ಪಾರಾಗಿದ್ದರು. ಇಬ್ಬರ ಶವ ಮಂಗಳವಾರ ಪತ್ತೆಯಾಗಿದ್ದವು. ನಾಲ್ವರು ಕಾಣೆಯಾಗಿದ್ದರು. ಕತ್ತಲಾಗಿದ್ದರಿಂದ ಶೋಧ ಕಾರ್ಯ ನಿಲ್ಲಿಸಲಾಗಿತ್ತು.
ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಆರು ಜನರ ಪೈಕಿ ನಾಲ್ವರ ಶವ ಸಿಕ್ಕಿದ್ದು, ಇನ್ನೂ ಇಬ್ಬರು ಪತ್ತೆಯಾಗಿಲ್ಲ. ಅವರು ಬದುಕುಳಿದಿರುವ ಸಾಧ್ಯತೆ ಕ್ಷೀಣ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ. ಗುರುವಾರ ಮತ್ತೆ ಶೋಧ ಕಾರ್ಯ ಮುಂದುವರೆಯಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC